

ಬೆಂಗಳೂರು: ಗಾಂಧೀಜಿ ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹ ಈಗ ಇತಿಹಾಸ. ಆದರೆ, ಅಂಬೇಡ್ಕರ್ ಕೈಗೊಂಡಿದ್ದ ಮಹಾಡ್ ಸತ್ಯಾಗ್ರಹ ಇಂದಿಗೂ ಪ್ರಸ್ತುತವಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ "ಮಹಾಡ್ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಚೌಡರ್ ಕೆರೆಗೆ ಇಳಿದು "ಮಹಾಡ್ ಸತ್ಯಾಗ್ರಹ'ದ ಮೂಲಕ ಜಡ ಸಂಪ್ರದಾಯ, ವರ್ಣಾಶ್ರಮದ ವಿರುದ್ಧ ಸಮರ ಸಾರಿದರು. ಉಪ್ಪಿನ ಸತ್ಯಾಗ್ರಹದ ಮೂಲಕ ವಸಾಹತುಶಾಹಿ ವಿರುದ್ಧ ಗಾಂಧೀಜಿ ಆಗ ಸಮರ ಸಾರಿದ್ದರು. ಸ್ವಾತಂತ್ರ$್ಯದ ನಂತರವೂ ಜಡ ಸಂಪ್ರದಾಯವಾದಿಗಳು ತಾರತಮ್ಯ ಮುಂದುವರಿಸಿರುವ ಹಿನ್ನೆಲೆ "ಮಹಾಡ್ ಸತ್ಯಾಗ್ರಹ' ಪ್ರಸ್ತುತವಾಗಿದೆ. ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ವಸಾಹುತಶಾಹಿ ವ್ಯವಸ್ಥೆ ಕೊನೆಗೊಂಡಿದ್ದರೂ, ವರ್ಣ ವ್ಯವಸ್ಥೆ ಅಳಿದಿಲ್ಲ ಎಂದು ಕಿಡಿಕಾರಿದರು.
ಪ್ರಗತಿಪರ ಚಿಂತಕ ಬಿ.ಶ್ರೀಪಾದ ಭಟ್ ಮಾತನಾಡಿ, ಅಂಬೇಡ್ಕರ್ ಮಾಡಿದ "ಮಹಾಡ್ ಸತ್ಯಾಗ್ರಹ' ಹಾಗೂ "ಕಾಲಾರಾಮ್ ದೇವಸ್ಥಾನ'ದ ಪ್ರವೇಶ ಚಳವಳಿಗಳನ್ನು ಟನೆ ಎಂದು ಭಾವಿಸಬಾರದು. ಇವು ಅವರು ಸಮಸಮಾಜ ನಿರ್ಮಾಣದ ಹೋರಾಟಕ್ಕಾಗಿ ಹಾಕಿಕೊಟ್ಟವೇದಿಕೆಗಳು ಎಂದು ಅರಿಯಬೇಕು ಎಂದು ವಿಶ್ಲೇಷಿಸಿದರು.
ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ, ಜಾನಪದ ಅಕಾಡೆಮಿ ನಿಯೋಜಿತ ಅಧ್ಯ ಗೊಲ್ಲಹಳ್ಳಿ ಶಿವಪ್ರಸಾದ್, ದಲಿತ ಸಂರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ವಿ.ಎಲ್.ನರಸಿಂಹಮೂರ್ತಿ ಇತರರಿದ್ದರು.