ಅತಿಯಾದ ನಿದ್ರೆಯಿಂದ ಭಾರತ ವಿರುದ್ಧದ ಪಂದ್ಯ ತಪ್ಪಿಸಿಕೊಂಡಂತ್ರೆ ಈ ಆಟಗಾರ; ಬಳಿಕ ನೀಡಿದ ಸ್ಪಷ್ಟನೆ ವೈರಲ್​

Bangladesh
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ ಗೆಲ್ಲಬೇಕೆಂಬಬ ಹಂಬಲದೊಂದಿಗೆ ಕಣಕ್ಕಿಳಿದ ಬಾಂಗ್ಲಾದೇಶ ತಂಡವು ಸೂಪರ್​ 08 ಹಂತದಲ್ಲಿ ಹೊರಬಿದ್ದಿತ್ತು. ಕಠಿಣ ಪರಿಶ್ರಮದ ಹೊರತಾಗಿಯೂ ತಂಡ ವೈಫಲ್ಯ ಅನುಭವಿಸಿದರ ಬಗ್ಗೆ ಬಾಂಗ್ಲಾ ಕ್ರಿಕೆಟ್​ ಮಂಡಳಿ ಪರಮಾರ್ಶಿಸುತ್ತಿದ್ದು, ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಘಟನೆ ಕ್ರೀಡಾ ಲೋಕದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಜೂನ್​ 22ರಂದು ಅಂಟುಗುವಾದ ಸರ್​ ವಿವಿಯನ್​ ರಿಚರ್ಡ್​​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಸೂಪರ್​ 08 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 50 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಬಾಂಗ್ಲಾ ವೇಗಿ ಟಸ್ಕಿನ್​ ಅಹ್ಮದ್​ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇದಕ್ಕೆ ಕಾರಣ ತಿಳಿದು ಬಂದಿದ್ದು, ಐಸಿಸಿ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂದು ಕಾದು ನೋಡಬೇಕಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಭಾರತ ವಿರುದ್ಧದ ಪಂದ್ಯದ ದಿನ ವೇಗಿ ಟಸ್ಕಿನ್​ ಅಹ್ಮದ್​ ಗಾಢ ನಿದ್ರೆಯಲ್ಲಿದ್ದರಂತೆ. ಅದು ಎಷ್ಟರಮಟ್ಟಿಗೆ ಎಂದರೆ ತಂಡದ ಬಸ್​ ಮಿಸ್​ ಮಾಡಿಕೊಂಡು ತಡವಾಗಿ ಮೈದಾನ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಕಂಡು ಕೋಚ್​ ಕುಪಿತಗೊಂಡು ಟಸ್ಕಿನ್​ ಅಹ್ಮದ್​ರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿದರು. ಹೀಗಾಗಿ ಟಸ್ಕಿನ್​ ಭಾರತ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ತಿಳಿದು ಬಂದಿದೆ.

Taskin Shakib

ಇದಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಕ್ರಿಕೆಟ್​ ಮಂಡಳಿ ವೇಗಿ ಟಸ್ಕಿನ್​ರಿಂದ ಸ್ಪಷ್ಟನೆ ಕೇಳಿದ್ದು, ನಾನು ತಡವಾಗಿ ತಂಡ ಕೂಡಿಕೊಂಡೆ ಎಂದು ನನ್ನನ್ನು ಆಡಿಸಲಿಲ್ಲ. ನಾನು 40 ನಿಮಿಷಕ್ಕೂ ಮೊದಲೇ ಮೈದಾನದಲ್ಲಿ ಹಾಜರಿದ್ದೆ. ಆಡಲು ಸಿದ್ದರಿದ್ದರು ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲವೆಂದು ವೇಗಿ ಟಸ್ಕಿನ್​ ಅಹ್ಮದ್​ ಸ್ಪಷ್ಟನೆ ನೀಡಿರುವುದಾಗಿ ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಶಕಿಬ್​ ಅಲ್​ ಹಸನ್​, ಟಸ್ಕಿನ್​ ತಡವಾಗಿ ಬಂದಿದ್ದಕ್ಕೆ ತಂಡದ ಸದಸ್ಯರ ಬಳಿ ಕ್ಷಮೆಯಾಚಿಸಿದ್ದಾರೆ. ಅವರು ತಡವಾಗಿ ಬಂದದ್ದೆ ತಂಡ ಸಂಯೋಜನೆ ಮಾಡುವುದಕ್ಕೆ ತೊಂದರೆಯಾಯಿತು. ಆತ ಬೇಕಂದು ತಪ್ಪು ಮಾಡಲಿಲ್ಲ. ಈ ಬಗ್ಗೆ ಸಮಿತಿ ತೀರ್ಮಾನಿಸಲಿದ್ದು, ಅದರ ನಿರ್ಧಾರಕ್ಕೆ ಬದ್ದ ಎಂದು ಮಾಜಿ ನಾಯಕ ಶಕಿಬ್​ ಅಲ್​ ಹಸನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net