ಢಾಕಾ: ಉದ್ಯೋಗ ಮೀಸಲಾತಿ ಸಂಬಂಧ ಬಾಂಗ್ಲಾದೇಶದಲ್ಲಿ ಕೆಲ ದಿನಗಳ ಹಿಂದೆ ಶುರುವಾದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ಬೆದರಿದ ಶೇಖ್ ಹಸೀನಾ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದು ಗೊತ್ತೇ ಇದೆ. ಸದ್ಯ ಬಾಂಗ್ಲಾದಲ್ಲಿ ಹೊಸ ಮಧ್ಯಂತರ ಸರ್ಕಾರ ರಚನೆಯಾಗಿದೆ.
ತಾಜಾ ಸಂಗತಿ ಏನೆಂದರೆ, ಈ ದಂಗೆಯ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕ (ಹಣದುಬ್ಬರ) ಜುಲೈ ತಿಂಗಳಲ್ಲಿ ಕಳೆದ 12 ವರ್ಷಕ್ಕಿಂತ ಹೆಚ್ಚಾಗಿದ್ದು, ಶೇ. 11.6ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜುಲೈನಲ್ಲಿ 14 ಪ್ರತಿಶತವನ್ನು ಮೀರಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಭಾರಿ ಪ್ರತಿಭಟನೆಯು ಪೂರೈಕೆ ಸರಪಳಿಯ ಮೇಲೆ ದೇಶಾದ್ಯಂತ ತೀವ್ರ ಪರಿಣಾಮ ಬೀರಿದೆ. ಇದಲ್ಲದೆ, ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿದ ನಂತರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅಡಿಯಲ್ಲಿ ಹೊಸ ಆಡಳಿತ ಶುರುವಾದ ಬಳಿಕ ಉಂಟಾದ ಅನಿಶ್ಚಿತತೆಯಿಂದಾಗಿ ಬಾಂಗ್ಲಾದ ಕೇಂದ್ರ ಬ್ಯಾಂಕ್ ಗರಿಷ್ಠ ಪ್ರಮಾಣದ ನಗದು ಹಿಂಪಡೆಯುವಿಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ದೇಶದ ವ್ಯಾಪಾರ ವಲಯವು ಲಿಕ್ವಿಡಿಟಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಕೋಪಕ್ಕೆ ತಿರುಗಿದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ.
ಸದ್ಯ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದ ಜನರು ಏಕಕಾಲದಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಟಾಕಾ (ಬಾಂಗ್ಲಾ ಕರೆನ್ಸಿ) ವನ್ನು ಹಿಂಪಡೆಯಲು ಸಾಧ್ಯವಿಲ್ಲ. ಕೆಲವು ಸ್ಥಳೀಯ ಚಿಲ್ಲರೆ ವ್ಯಾಪಾರಿಗಳೊಂದಿಗೆ ಮಾತನಾಡಲು ಮತ್ತು ಅವರ ಪರಿಸ್ಥಿತಿಯ ಬಗ್ಗೆ ನೇರವಾಗಿ ತಿಳಿದುಕೊಳ್ಳಲು ಇಂಡಿಯಾ ಟುಡೇ ಢಾಕಾದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಕವ್ರಾನ್ ಬಜಾರ್‌ಗೆ ಭೇಟಿ ನೀಡಿದ್ದು, ಬಾಂಗ್ಲಾದೇಶದ ಟಾಕಾ ಮೌಲ್ಯವು ಅಮೆರಿಕ ಡಾಲರ್ ಎದುರು ಭಾರಿ ಕುಸಿತ ಕಂಡಿದ್ದು, ಚಿಲ್ಲರೆ ವ್ಯಾಪಾರಿಗಳು ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರವಾಗಿಡಲು ಒತ್ತಡದಲ್ಲಿ ಸಿಲುಕಿದ್ದಾರೆ. ಅಲ್ಲದೆ, ಲಾಭವನ್ನು ಗಳಿಸಲು ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಶೀಘ್ರದಲ್ಲೇ ಬೆಲೆಗಳು ಸಹ ಹೆಚ್ಚಾಗಲಿವೆ.
ದೇಶದಲ್ಲಿನ ಅಶಾಂತಿಯಿಂದಾಗಿ ಕವ್ರಾನ್ ಬಜಾರ್‌ನಲ್ಲಿ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಢಾಕಾದಲ್ಲಿ ಶಾಂತಿ ನೆಲೆಸಿದೆಯಾದರೂ, ಪ್ರತಿಭಟನೆಯ ಕಾವು ಇನ್ನು ಜನರ ಮನಸ್ಸಿನಲ್ಲಿರುವುದರಿಂದ ಮನೆಯಿಂದ ಹೊರಬರುಲು ಜನರು ಹೆದರುತ್ತಿದ್ದಾರೆ. ಈಗಾಗಲೇ ಬಾಂಗ್ಲಾದಲ್ಲಿ ಪ್ರತಿಭಟನೆಗೆ 300ಕ್ಕೂ ಅಧಿಕ ಬಂದಿ ಬಲಿಯಾಗಿದ್ದಾರೆ.
ಅಕ್ಕಿ ಮತ್ತು ಬೇಳೆಕಾಳುಗಳಂತಹ ಪ್ರಮುಖ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದರಿಂದ ಸ್ವಲ್ಪ ಏರಿಕೆಯಾಗಿದೆ. ಪೂರೈಕೆ ಸರಪಳಿ ಕಾರ್ಯವಿಧಾನದಲ್ಲಿ ಅಡೆತಡೆಗಳಿದ್ದರೂ ನಾವು ಬೆಲೆಗಳನ್ನು ಹೆಚ್ಚಿಸುತ್ತಿಲ್ಲ ಎಂದು ಸ್ಥಳೀಯ ಚಿಲ್ಲರೆ ವ್ಯಾಪಾರಿ ಶಫೀಕರ್ ಅವರು ಇಂಡಿಯಾ ಟುಡೇಗೆ ತಿಳಿಸಿದರು,
ಅಂದಹಾಗೆ ಬಾಂಗ್ಲಾದೇಶವು ಭಾರತ ಸೇರಿದಂತೆ ನೆರೆಯ ದೇಶಗಳಿಂದ ಬೇಳೆಕಾಳುಗಳು, ಒಣ ಹಣ್ಣುಗಳು, ಮಸಾಲೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಪೂರೈಕೆ ಸರಪಳಿಯ ಅಡೆತಡೆಗಳಿಂದಾಗಿ ಅಗತ್ಯ ವಸ್ತುಗಳು ಮತ್ತು ಇತರ ವಸ್ತುಗಳ ಬೆಲೆಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್)
ಅವಳು ನಾಯಿಯಾಗಿ ಹುಟ್ಟಿದರೂ ಪರವಾಗಿಲ್ಲ! ಸಮಂತಾ ಬಗ್ಗೆ ಶೋಭಿತಾ ಪೋಸ್ಟ್ ವೈರಲ್
ಹೆಂಡ್ತಿಗೆ ಫೋನ್ ಕೊಟ್ಟು ಎಂದಾದರೂ ಸಿಕ್ಕಿಬಿದ್ದಿದ್ದೀರಾ? ಅಕ್ಷಯ್ ಕುಮಾರ್ ಕೊಟ್ಟ ಉತ್ತರ ವೈರಲ್
1000 ಅಡಿ ಆಳದ ಕೊಳವೆ ಬಾವಿಗೆ ಕ್ಯಾಮೆರಾ ಬಿಟ್ಟ ಯುವಕನಿಗೆ ಕಂಡಿದ್ದು ಎದೆ ಝಲ್ ಎನಿಸುವ ದೃಶ್ಯ!