ಬಾಲಯ್ಯ ನಿಮ್ಮದು ಇದೆಂಥಾ ವರ್ತನೆ..? : ಟಾಲಿವುಡ್ ​ನಟನ ವಿರುದ್ಧ ನೆಟ್ಟಿಗರ ಆಕ್ರೋಶ

Nandamuri
Published on

ಹೈದ್ರಬಾದ್: ಟಾಲಿವುಡ್​ನಲ್ಲಿ ಪ್ರಮುಖ ನಟರಲ್ಲಿ ಒಬ್ಬರಾದ ನಂದಮೂರಿ ಬಾಲಕೃಷ್ಣ ಅವರು ಡೈಲಾಗ್​ ಡೆಲವರಿ, ಆ್ಯಕ್ಷನ್​​ನಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ತಳ್ಳುತ್ತಿರುವ ವೀಡಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಬಾಲಯ್ಯ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಟ ವಿಶ್ವಕ್ ಸೇನ್ ಅವರ ಮುಂಬರುವ ಚಿತ್ರ 'ಗ್ಯಾಂಗ್ಸ್ ಆಫ್ ಗೋದಾವರಿ' ಪ್ರಚಾರಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಅವರನ್ನು ಆಹ್ವಾನಿಸಲಾಯಿತು. ಈ ಸಿನಿಮಾದಲ್ಲಿ ನೇಹಾ ಶೆಟ್ಟಿ ಮತ್ತು ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಗ್ರೂಪ್ ಫೋಟೋ ತೆಗೆಯಲು ಚಿತ್ರತಂಡ ತಯಾರಿ ನಡೆಸುತ್ತಿದ್ದಾಗ ವೇದಿಕೆಯಲ್ಲಿ ಈ ಘಟನೆ ನಡೆದಿದೆ.

ವೇದಿಕೆ ಮೇಲೆ ಬಂದ ಬಾಲಯ್ಯ ಪಕ್ಕಕ್ಕೆ ಸರಿಯುವಂತೆ ನಟಿ ಅಂಜಲಿಗೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಪಕ್ಕಕ್ಕೆ ಸರಿಯಲ್ಉ ಅಂಜಲಿ ಸಮಯ ತೆಗೆದುಕೊಂಡಾಗ ಏಕಾಏಕಿ ಕೈಯಿಂದ ಪಕ್ಕಕ್ಕೆ ತಳ್ಳಿದರು. ಅಂಜಲಿ ತನ್ನ ಸಂಯಮ ಕಾಪಾಡಿಕೊಂಡು ವೇದಿಕೆಯಲ್ಲಿ ನಡೆದ ಘಟನೆಯಿಂದ ನಗುತ್ತಲೇ ಫೋಟೋಗಳಿಗೆ ಪೋಸ್ ಕೊಟ್ಟರು. ವೇದಿಕೆಯಲ್ಲಿದ್ದ ನಟಿ ನೇಹಾ ಶೆಟ್ಟಿ ಕೂಡ ಬಾಲಕೃಷ್ಣ ಅವರ ವರ್ತನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಬಾಲಕೃಷ್ಣ ಅವರ ವರ್ತನೆ ಅತಿರೇಕವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಮತ್ತೊಬ್ಬರು 'ಪ್ರತಿಭಾವಂತ ನಟಿಯನ್ನು ಈ ರೀತಿ ನಡೆಸಿಕೊಳ್ಳುವುದು ಸ್ವೀಕಾರಾರ್ಹವಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net