ಕೊನೆಗೂ ಸುದ್ದಿ ನಿಜವಾಯ್ತು; ಧನ್ಯಾಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತಂತೆ!

Dhanya Balakrishna
Published on

ಚೆನ್ನೈ: 'ಮಾರಿ' ಖ್ಯಾತಿಯ ನಿರ್ದೇಶಕ ಬಾಲಾಜಿ ಮೋಹನ್​, ನಟಿ ಧನ್ಯಾ ಬಾಲಕೃಷ್ಣ ಅವರನ್ನು ಸದ್ದಿಲ್ಲದೆ ಮದುವೆಯಾಗಿದ್ದಾರೆ ಎಂದು ನಟಿ ಕಲ್ಪಿಕಾ ಗಣೇಶ್​ ಆರೋಪಿಸಿದ್ದರು. ಆದರೆ, ಧನ್ಯಾ ಆಗಲೀ, ಬಾಲಾಜಿ ಮೋಹನ್​ ಆಗಲೀ ಈ ಕುರಿತು ಬಾಯಿಬಿಟ್ಟಿರಲಿಲ್ಲ. ಈಗ ಬಾಲಾಜಿ ಮೋಹನ್​ ತಾವು ಧನ್ಯಾ ಅವರನ್ನು ಎರಡನೆಯ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಬಾಲಾಜಿ ಮೋಹನ್​, ತಮಿಳಿನಲ್ಲಿ 'ಮಾರಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಅವರಿಗೆ ಒಂದು ಮದುವೆಯಾಗಿತ್ತು. ಡೈವೋರ್ಸ್​ ಸಹ ಆಗಿತ್ತು. ಆ ನಂತರ ಅವರು ಧನ್ಯಾ ಜತೆಗೆ ಮದುವೆಯಾಗಿದ್ದಾರೆ ಎಂದು ಇತ್ತೀಚೆಗೆ ಕಲ್ಪಿಕಾ ಹೇಳಿದ್ದರು. ಈ ಸಂಬಂಧ ಕಲ್ಪಿಕಾ ಮೇಲೆ ಮಾನನಷ್ಟು ಮೊಕದ್ದಮೆ ಹೂಡಿದ್ದಾರೆ ಬಾಲಾಜಿ. ಕಲ್ಪಿಕಾ ತಮ್ಮ ಬಗ್ಗೆ ಅಪಪ್ರಚಾರ ಮಾಡುವುದುನ್ನು ತಡೆಯಬೇಕು ಎಂದು ಕೋರಿದ್ದಾರೆ. ಹಾಗೆಯೇ, ಅರ್ಜಿಯಲ್ಲಿ ಧನ್ಯಾ ಅವರನ್ನು ಒಂದು ವರ್ಷದ ಹಿಂದೆ ಮದುವೆಯಾಗಿರುವುದಾಗಿಯೂ ತಿಳಿಸಿದ್ದಾರೆ. ಈ ಸಂಬಂಧ ಯಾವುದೇ ಅಪಪ್ರಚಾರ ಮಾಡಬಾರದು ಎಂದು ನ್ಯಾಯಾಲಯವು ಕಲ್ಪಿಕಾಗೆ ಸೂಚಿಸಿರುವುದರರ ಜತೆಗೆ, ಪ್ರಕರಣವನ್ನು ಜನವರಿ 20ಕ್ಕೆ ಮುಂದೂಡಿದೆ.

ಧನ್ಯಾ ಮೂಲತಃ ಬೆಂಗಳೂರಿನವರು. ಕಾಲಿವುಡ್​ನಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಕನ್ನಡದ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಮತ್ತು 'ನೋಡಿ ಸ್ವಾಮಿ ಇವ್ನು ಇರೋದೇ ಹೀಗೇ' ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಕೋಮಲ್​ ಜತೆಗೆ ಅಭಿನಯಿಸಿರುವ 'ಟ್ವೆಂಟಿ ಟ್ವೆಂಟಿ' ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ ಅವರು ಸದ್ದಿಲ್ಲದೆ ಬಾಲಾಜಿ ಅವರನ್ನು ಮದುವೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net