94 ವರ್ಷದ ವೃದ್ಧೆಗೆ ಕೊಟ್ಟಿದ್ದ ಬ್ರೆಡ್ ವಾಪಸ್​ ಪಡೆದ ಬೇಕರಿ; ಹಣ ಕೊಟ್ಟರೂ ಮತ್ತೆ ಕೊಡಲಿಲ್ಲ

bakery
Published on

ಬೇಕರಿಯೊಂದು 94 ವರ್ಷದ ವೃದ್ಧೆಗೆ ಬ್ರೆಡ್​ ಕೊಡಲು ನಿರಾಕರಿಸಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಇಂಗ್ಲೆಂಡ್​ನ ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ಬರ್ಡ್ಸ್​ ಬೇಕರಿಗೆ ಬಂದ ಮಹಿಳೆಗೆ ಬ್ರೆಡ್​ ಕೊಡಲು ನಿರಾಕರಿಸಿದೆ.

ಎಡ್ನಾ ದಾಲ್ಚಿನ್​ ಎಂಬ 94 ವರ್ಷದ ಮಹಿಳೆ ಬ್ರೆಡ್​ ಖರೀದಿಸಿ, ನಗದು ರೂಪದಲ್ಲಿ ಹಣ ಕೊಟ್ಟರು. ಆದರೆ ಬೇಕರಿಯ ಮಾಲೀಕ ಅದನ್ನು ಸ್ವೀಕರಿಸಿದೆ, ಆನ್​ಲೈನ್​ ಪೇಮೆಂಟ್​ ಮಾಡಲು ಹೇಳಿದ್ದಾರೆ. ನನ್ನ ಬಳಿ ಯಾವುದೇ ಬ್ಯಾಂಕ್​​ನ ಕಾರ್ಡ್​ಗಳಾಗಲಿ, ಆನ್​​ಲೈನ್​ ಪೇಮೆಂಟ್​ ಸೌಕರ್ಯವಾಗಲಿ ಇಲ್ಲ ಎಂದು ಅವರು ಹೇಳಿದ್ದಕ್ಕೆ, ಹಾಗಿದ್ದರೆ ಬ್ರೆಡ್​​ ವಾಪಸ್​ ಇಡಿ ಎಂದು ಆತ ಹೇಳಿದ್ದಾಗಿ ಎಡ್ನಾ ತಿಳಿಸಿದ್ದಾರೆ.

ನನಗೆ ಬೇಕರಿಯ ಮಾಲೀಕನ ಮಾತು ಕೇಳಿ ಶಾಕ್​ ಆಯಿತು. ನಗದು ಸ್ವೀಕರಿಸುವುದೇ ಇಲ್ಲ. ಆನ್​ಲೈನ್​ನಲ್ಲೇ ಕೊಡಿ ಎಂದರು. ಅಷ್ಟೇ ಅಲ್ಲ, ನನಗೆ ಕೊಟ್ಟಿದ್ದ ಬ್ರೆಡ್​ ಪ್ಯಾಕೆಟ್​ ಕೂಡ ವಾಪಸ್​ ಪಡೆದರು. ಇದರಿಂದ ತುಂಬ ಮುಜುಗರಕ್ಕೀಡಾದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಬೇಕರಿಯವರನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ, ಲಾಕ್​ಡೌನ್​ ಇದೆ. ಕೊರನಾ ಇರುವುದರಿಂದ ನಮ್ಮ ಬೇಕರಿಯೂ ಬಂದ್​ ಆಗಿತ್ತು. ಮತ್ತೆ ಇದನ್ನು ರೀ ಓಪನ್​ ಮಾಡುವಾಗ ಸ್ಥಳೀಯ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರ ಅನ್ವಯ ಕ್ಯಾಶ್​ ಸ್ವೀಕರಿಸುವುದಿಲ್ಲ. ಯಾಕೆಂದರೆ ಅದು ಕೊಳಕಾಗಿರುತ್ತದೆ. ನಾವು ಕಾರ್ಡ್​​ನ ಮೂಲಕವೇ ಹಣ ಪಡೆಯುತ್ತೇವೆ ಎಂದು ಭರವಸೆ ಮೂಡಿಸಿದ್ದರಿಂದಲೇ ಬೇಕರಿ ತೆರೆಯಲು ಅನುಮತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಜಾಹಿದ್ದೀನ್​​ ಅಂತ್ಯಗೊಂಡಿದೆ ಎಂದು ಭಾರತ ಭಾವಿಸುವ ಅಗತ್ಯವಿಲ್ಲ: ಹಿಜ್ಬುಲ್​ ಉಗ್ರರಿಂದ ಬೆದರಿಕೆ

ಆದರೆ ಎಡ್ನಾ ವಯಸ್ಸಾದ ಮಹಿಳೆ. ಅವರು ಹಳೇ ಪದ್ಧತಿಯಲ್ಲೇ ಹಣ ನೀಡುತ್ತಿದ್ದಾರೆ. ಇಷ್ಟು ದಿನ ಕೂಡ ಕರೊನ ಇತ್ತು. ಹಲವು ಶಾಪ್​​ಗಳಲ್ಲಿ ನಗದು ನೀಡಿದ್ದೇನೆ. ಯಾರೂ ಈ ರೀತಿ ಮಾಡಿರಲಿಲ್ಲ ಎಂದು ಎಡ್ನಾ ಹೇಳಿದ್ದಾರೆ.

ನಾನು ಬರ್ಡ್​ ಬೇಕರಿಗೇ ಹೋದೆ. ಯಾಕೆಂದರೆ ಅಲ್ಲಿನ ಬ್ರೆಡ್​ ನನಗೆ ಇಷ್ಟ. ಹಾಗೇ ಸ್ವಲ್ಪ ಮಾಂಸವೂ ಬೇಕಿತ್ತು. ನಾನು ಖರೀದಿ ಮಾಡುತ್ತಿದ್ದಂತೆ, ಅಲ್ಲಿ ತಿನಿಸುಗಳನ್ನು ನೀಡಲು ನಿಂತಿದ್ದ ಯುವತಿ, ನಿಮ್ಮ ಬಳಿ ಕಾರ್ಡ್​ ಇದೆಯಾ ಎಂದು ಕೇಳಿದರು. ನನಗೆ ಒಂದು ಸಲ ಅರ್ಥವೇ ಆಗಲಿಲ್ಲ. ಯಾಕೆಂದರೆ ನಾನು ಬ್ಯಾಂಕ್​​ನ ಕಾರ್ಡ್​ ನೋಡಿಯೂ ಇಲ್ಲ ಎಂದು ಎಡ್ನಾ ಹೇಳಿದ್ದಾರೆ.ಇದನ್ನೂ ಓದಿ:  ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ಶ್ರುತಿ ಹಾಸನ್​ ಪ್ರಶ್ನೆ

ನನಗೆ ಗೊತ್ತಿರುವ ಪ್ರಕಾರ ಏಪ್ರಿಲ್​ನಿಂದ ಮರು ಪ್ರಾರಂಭವಾದ ಈ ಬೇಕರಿಯಲ್ಲಿ ಇದುವರೆಗೆ ಎಂಟು ಮಂದಿ ವಯಸ್ಸಾದವರಿಗೆ ಅವರು ಕೇಳಿದ್ದನ್ನು ಕೊಡಲು ನಿರಾಕರಿಸಿದ್ದಾರೆ. ಕಾರ್ಡ್​ ಇಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net