VIDEO: ಆಶಸ್​ ಟೆಸ್ಟ್​ನಲ್ಲಿ ಭಾರತೀಯ ಅಂಪೈರ್​ನಿಂದ ದಿಟ್ಟ ತೀರ್ಪು, ಕ್ರಿಕೆಟ್​ ವಲಯದ ಮೆಚ್ಚುಗೆ

ump ashes web
Published on

ಲಂಡನ್​: ಪ್ರತಿಷ್ಠಿತ ಆಶಸ್​ ಟೆಸ್ಟ್​ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಭೋಜನ ವಿರಾಮದ ನಂತರದ ಆಟದ ವೇಳೆ ಆಸ್ಟ್ರೆಲಿಯಾದ ಬ್ಯಾಟರ್​ ಸ್ಟೀವನ್​ ಸ್ಮಿತ್​ ರನೌಟ್​ ಆದರೆಂದೇ ಎಲ್ಲರೂ ಭಾವಿಸಿದ್ದರು. ಸ್ವತ@ ಸ್ಟೀವನ್​ ಸ್ಮಿತ್​ ಕೂಡ ಪೆವಿಲಿಯನ್​ಗೆ ಮರಳಲು ಸಜ್ಜಾಗಿದ್ದರು. ಆದರೆ ಈ ವೇಳೆ ವಿಡಿಯೋ ಮರುಪ್ರಸಾರವನ್ನು ಸೂಕ್ಷ$್ಮವಾಗಿ ಪರಿಶೀಲಿಸಿದ ತೃತೀಯ ಅಂಪೈರ್​ ಆಗಿದ್ದ ಭಾರತದ ನಿತಿನ್​ ಮೆನನ್​, ನಾಟೌಟ್​ ತೀರ್ಪು ನೀಡಿದರು. ರನೌಟ್​ ಮಾಡುವ ಸಮಯದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡದ ವಿಕೆಟ್​ ಕೀಪರ್​ ಜಾನಿ ಬೇರ್​ಸ್ಟೋ ಮಾಡಿದ ಎಡವಟ್ಟನ್ನು ಪತ್ತೆ ಹಚ್ಚುವ ಮೂಲಕ ನಿತಿನ್​ ಮೆನನ್​ ನಿಯಮ ಸಮ್ಮತವಾದ ದಿಟ್ಟ ತೀರ್ಪು ನೀಡಿದರು. ಇದು ಈಗ ಕ್ರಿಕೆಟ್​ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಆಸೀಸ್​ ಇನಿಂಗ್ಸ್​ನ 78ನೇ ಓವರ್​ನಲ್ಲಿ ಸ್ಟೀವನ್​ ಸ್ಮಿತ್​ 2 ರನ್​ ಕಸಿದು ಸ್ಟ್ರೆ$ಕ್​ ಕಾಯ್ದುಕೊಳ್ಳಲು ಯತ್ನಿಸಿದರು. ಈ ವೇಳೆ ಬದಲಿ ಫೀಲ್ಡರ್​ ಜಾರ್ಜ್​ ಎಲ್​ಹ್ಯಾಂ ಎಸೆದ ಚೆಂಡನ್ನು ಹಿಡಿದು ಬೇರ್​ಸ್ಟೋ ಬೇಲ್ಸ್​ ಉರುಳಿಸುವಷ್ಟರಲ್ಲಿ ಸ್ಮಿತ್​ ಡೈವ್​ ಬಿದ್ದರೂ, ಕ್ರೀಸ್​ನಿಂದ ಸ್ವಲ್ಪದರಲ್ಲಿ ಹಿಂದಿರುವಂತೆ ಕಂಡಿತು. ಆದರೂ ಮೈದಾನದ ಅಂಪೈರ್​ ಆಗ ತೃತೀಯ ಅಂಪೈರ್​ ಮೊರೆ ಹೋದರು.

ತೃತೀಯ ಅಂಪೈರ್​ ನಿತಿನ್​ ಮೆನನ್​ ಮರುಪ್ರಸಾರವನ್ನು ಮೊದಲ ಬಾರಿಗೆ ವೀಸಿದಾಗ ಅದು ರನೌಟ್​ನಂತೆಯೇ ಕಂಡಿತು. ಇದರಿಂದ ಸ್ಮಿತ್​ ಕೂಡ ಬೇಸರದಿಂದ ಡ್ರೆಸ್ಸಿಂಗ್​ ರೂಂಗೆ ಮರಳಲು ಸಜ್ಜಾದರು. ಆದರೆ, ಮತ್ತೊಮ್ಮೆ ಮರುಪ್ರಸಾರವನ್ನು ಸರಿಯಾಗಿ ಗಮನಿಸಿದಾಗ ವಿಕೆಟ್​ ಕೀಪರ್​ ಬೇರ್​ಸ್ಟೋ ಚೆಂಡನ್ನು ಪಡೆದುಕೊಳ್ಳುವ ಮುನ್ನವೇ ಒಂದು ಬೇಲ್ಸ್​ ಉರುಳಿದ್ದು ಗಮನಕ್ಕೆ ಬಂದಿತು. ಆಗಿನ್ನೂ ಸ್ಮಿತ್​ ಕ್ರೀಸ್​ನೊಳಗೆ ಬಂದಿರಲಿಲ್ಲ. ನಂತರ ಬೇರ್​ಸ್ಟೋ ಚೆಂಡನ್ನು ಹಿಡಿದು ಇನ್ನೊಂದು ಬೇಲ್ಸ್​ ಬೀಳಿಸುವಷ್ಟರಲ್ಲಿ ಸ್ಮಿತ್​ ಕ್ರೀಸ್​ನೊಳಗೆ ಆಗಮಿಸಿದ್ದರು. ಇದರಿಂದಾಗಿ ನಿತಿನ್​ ಮೆನನ್​ ನಾಟೌಟ್​ ಎಂದು ದೈತ್ಯ ಪರದೆಯ ಮೇಲೆ ತೀರ್ಪಿತ್ತರು. ಬಳಿಕ ಸ್ಮಿತ್​ ಬ್ಯಾಟಿಂಗ್​ ಮುಂದುವರಿಸಿದರು. ಇದರಿಂದಾಗಿ ಆಸ್ಟ್ರೆಲಿಯಾ ತಂಡಕ್ಕೆ ಆತಿಥೇಯ ಇಂಗ್ಲೆಂಡ್​ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ಅಮೂಲ್ಯ ಮುನ್ನಡೆ ಸಾಧಿಸಲು ನೆರವಾಯಿತು.

ನಿತಿನ್​ ಮೆನನ್​ ತೀರ್ಪಿಗೆ ಟೀಮ್​ ಇಂಡಿಯಾದ ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್​, "ಸರಿಯಾದ ತೀರ್ಪು ನೀಡಿದ ನಿತಿನ್​ ಮೆನನ್​ ಅವರನ್ನು ಅಭಿನಂದಿಸಲೇಬೇಕು' ಎಂದು ಟ್ವೀಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net