VIDEO: ಹಿಂದೂಗಳ ಜನಸಂಖ್ಯೆ ಹೆಚ್ಚಾಗಲು ಮುಸ್ಲಿಮರಂತೆ ಮದುವೆಯಾಗಿ! ವಿವಾದದ ಮಾತುಗಳನ್ನಾಡಿದ ಬದ್ರುದ್ದೀನ್ ಅಜ್ಮಲ್

badruddin ajmal
Published on: 

ಅಸ್ಸಾಂ: ಮುಸ್ಲಿಮರಂತೆ ಹಿಂದೂಗಳು ಬದಲಾಗಬೇಕು. ಸಣ್ಣ ವಯಸ್ಸಿನಲ್ಲೇ ಹಿಂದೂಗಳು ಮುಸ್ಲಿಮರಂತೆ ಮದುವೆಯಾಗಲು ಮುಂದಾಗಬೇಕು. ಆಗ ಮಾತ್ರ ಹಿಂದೂಗಳ ಜನಸಂಖ್ಯೆ ಹೆಚ್ಚಾಗಲು ಸಾಧ್ಯ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಇವರ ಮಾತುಗಳು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

ಮುಸ್ಲಿಂಮರ ಜನಸಂಖ್ಯೆ ಹೆಚ್ಚಳದ ವಿಚಾರವಾಗಿ ಮಾತನಾಡುತ್ತಾ, ಹಿಂದೂಗಳು ಹೆತ್ತವರ ಒತ್ತಾಯಕ್ಕೆ 40 ವರ್ಷದ ನಂತರ ವಿವಾಹ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಮುಸ್ಲಿಮರು ಸಣ್ಣ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಪೋಷಕರು ಒತ್ತಡಕ್ಕೆ ಒಳಗಾಗಿ 40 ವರ್ಷದ ನಂತರ ವಿವಾಹವಾದರೆ, ಅವರು ಮಕ್ಕಳನ್ನು ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು ಮಾತನಾಡುತ್ತಾ, ಫಲವತ್ತಾದ ಭೂಮಿಯಲ್ಲಿ ಬೀಜ ಬಿತ್ತಿದರೆ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಮುಸ್ಲಿಂ ಹುಡುಗರು 20-22ನೇ ವಯಸ್ಸು ಮತ್ತು ಹುಡುಗಿಯರು 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ ಹಿಂದೂ ಯುವಕರು ಮಾತ್ರ ತಡವಾಗಿ ಮದುವೆಯಾಗುತ್ತಾರೆ. ಹಿಂದೂಗಳು ಮದುವೆಗೂ ಮೊದಲು ಮೂರು, ನಾಲ್ಕು ಜನ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೂ, ಮಕ್ಕಳಿಗೆ ಜನ್ಮ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ಬದ್ರುದ್ದೀನ್ ಅಜ್ಮಲ್ ಮಾತಿಗೆ ಎಲ್ಲಡೆ ಖಂಡನೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)