

ಕಾಸರಗೋಡು: ವಾಟರ್ ಥೀಂ ಪಾರ್ಕ್‌ನಲ್ಲಿ ಯುವತಿ ಜತೆಗೆ ಅನುಚಿತವಾಗಿ ವರ್ತಿಸಿದ್ದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‌ನ ಪ್ರಾಧ್ಯಾಪಕ ಡಾ.ಇಪ್ತೀಕರ್ ಅಹಮ್ಮದ್ ಎಂಬಾತನನ್ನು ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಸೇವೆಯಿಂದ ಅಮಾನತುಗೊಳಿಸಿದೆ.
ಕೇರಳ ಕೇಂದ್ರೀಯ ವಿಶ್ವ ವಇದ್ಯಾಲಯದ ಪ್ರಭಾರಿ ಉಪಕುಲಪತಿ ಪ್ರೊ.ಕೆ.ಸಿ ಬೈಜು ಅಮಾನತು ಆದೇಶ ಹೊರಡಿಸಿದ್ದಾರೆ. ಪಳೆಯಂಗಾಡಿ ಎರಿಪುರಂ ನಿವಾಸಿಯಾಗಿರುವ ಡಾ.ಇಪ್ತೀಕರ್ ಅಹಮ್ಮದ್ ಪರಶ್ಯಿನಿಕಡವಿನ ವಾಟರ್ ಥೀಂ ಪಾರ್ಕ್‌ನಲ್ಲಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮಲಪ್ಪುರಂ ನಿವಾಸಿ 22ರ ಹರೆಯದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತಳಿಪರಂಬ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
2016ರಲ್ಲಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ(ಸಿಯುಕೆ) ಇಂಗ್ಲಿಷ್ ವಿಭಾಗ ಸಹಾಯಕ ಪ್ರಾಧ್ಯಾಪಕನಾಗಿ ಸೇರ್ಪಡೆಗೊಂಡಿರುವ ಡಾ.ಇಫ್ತೀಕರ್ ಅಹಮ್ಮದ್ ಈ ಹಿಂದೆಯೂ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದನು. ಸಿಯುಕೆಯಲ್ಲಿ ತರಗತಿಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಈತನನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದ್ದು, ದೀರ್ಘ ಕಾಲದ ನಂತರ ಕರ್ತವ್ಯಕ್ಕೆ ಮರುಸೇರ್ಪಡೆಗೊಳಿಸಲಾಗಿದ್ದು, ಪ್ರಸಕ್ತ ಎರಡನೇ ಬಾರಿಗೆ ಅಮಾನತುಗೊಂಡಿದ್ದಾನೆ.