Back Pain : ಬೆನ್ನುನೋವು ಅಥವಾ ಬೆನ್ನುಮೂಳೆಯಲ್ಲಿ ನೋವು ಇದ್ದರೆ, ನೀವು ಕೆಲವು ಆಸನಗಳನ್ನು ಮಾಡಿದರೆ ಸಾಕು ಎರಡು ಮೂರು ತಿಂಗಳಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ, ಇವುಗಳ ಜೊತೆಗೆ ಮಲಗುವ ಭಂಗಿಯು ಕೂಡ ಬಹಳ ಮುಖ್ಯ.
ನಾವು ಮಲಗಿರುವ ರೀತಿಯು ನಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಾರದು. ಅನೇಕ ಜನರು ಬೆನ್ನು ನೋವು, ಕಡಿಮೆ ಬೆನ್ನು ನೋವು, ಸಿಯಾಟಿಕಾ ನೋವು ಮತ್ತು ಡಿಸ್ಕ್ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಜನರು ಹೇಗೆ ಮಲಗಬೇಕು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಡಿಸ್ಕ್ ಉಬ್ಬು ಅಥವಾ ಡಿಸ್ಕ್ ಹರ್ನಿಯೇಷನ್ ಇರುವವರಿಗೆ, ಬಲಭಾಗದಲ್ಲಿ ನೋವು ತೀವ್ರವಾಗಿದ್ದರೆ, ಅವರು ತಮ್ಮ ಎಡಭಾಗಕ್ಕೆ ಒರಗಿ ಮಲಗಬೇಕು. ಅದೇ ರೀತಿ ಎಡಭಾಗದಲ್ಲಿ ನೋವು ಇದ್ದರೆ ಬಲಭಾಗಕ್ಕೆ ಮಲಗಬೇಕು. ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಮಲಗಲು ಮರೆಯದಿರಿ. ಅಲ್ಲದೆ, ಒಂದು ಬದಿಗೆ ತಿರುಗಿ ಮಲಗಿದಾಗ ತಮ್ಮ ಎರಡೂ ಕಾಲುಗಳನ್ನು ಪಾದಗಳಿಂದ ಎದೆಗೆ ಸಾಧ್ಯವಾದಷ್ಟು ಮಡಿಸಿ. ಕಾಲುಗಳ ನಡುವೆ ದಿಂಬಿನ್ನು ಇಟ್ಟು ಮಲಗಿದರೆ ಇನ್ನು ಉತ್ತಮವಾಗಿರುತ್ತದೆ. ಸಾಧ್ಯವಾದಷ್ಟು ಕಾಲ ಈ ರೀತಿ ಮಲಗಿ.
ಡಿಜೆನೆರೇಟಿವ್ ಡಿಸ್ಕ್ ಸಮಸ್ಯೆ ಇರುವವರು ಬೆನ್ನಿನ ಮೇಲೆ ಮಲಗಬೇಕು. ಅಂದರೆ ಅಂಗಲಾಚಿ ಮಲಗಬೇಕು. ಈ ರೀತಿ ಮಲಗುವಾಗ ನಿಮ್ಮ ಹೊಟ್ಟೆಯ ಕೆಳಗೆ ನೀವು ದಿಂಬನ್ನು ಇಟ್ಟುಕೊಂಡು ಮಲಗಿದರೆ, ಡಿಜೆನರೇಟಿವ್ ಡಿಸ್ಕ್ ಸಮಸ್ಯೆಗಳಿರುವ ಜನರಿಗೆ ಕಶೇರುಖಂಡಗಳ ಬಳಿ ಇರುವ ಅಂತರದಿಂದಾಗಿ ಒತ್ತಡವು ಬಹಳ ಕಡಿಮೆಯಾಗುತ್ತದೆ. ಒಳ್ಳೆಯ ವಿಶ್ರಾಂತಿ ಪಡೆಯಲು ಇದು ಉತ್ತಮ ತಂತ್ರವಾಗಿದೆ.
ನಾವೀಗ ಪ್ರಸ್ತಾಪಿಸುವ ಭಂಗಿಯು ಸೊಂಟ ಮತ್ತು ಸ್ಯಾಕ್ರಲ್ ಮೂಳೆಗಳ ಮೇಲೆ ಒತ್ತಡವನ್ನು ಹೊಂದಿರುವವರಿಗೆ ತುಂಬಾ ಉಪಯುಕ್ತವಾಗಿದೆ. ಅಂದರೆ ಸಿಯಾಟಿಕ್ ನೋವು ಮತ್ತು ಬೆನ್ನು ನೋವು ಇರುವವರು ಮೊಣಕಾಲುಗಳ ಕೆಳಗೆ ಎರಡು ಸುತ್ತಿನ ದಿಂಬುಗಳನ್ನು ಇರಿಸಿ. ನೆನಪಿಡಿ, ಕಾಲುಗಳ ಕೆಳಗೆ ಅಲ್ಲ, ಅವುಗಳನ್ನು ಮೊಣಕಾಲುಗಳ ಕೆಳಗೆ ಇರಿಸಿ. ಕೆಳಗಿನ ಬೆನ್ನಿನ ಭಾಗವು ಸಮತಟ್ಟಾಗಿರಬೇಕು. ಹೀಗೆ ಮಲಗಿದಾಗ ನರಗಳ ಮೇಲಿನ ಒತ್ತಡ ಬಹಳ ಕಡಿಮೆಯಾಗುತ್ತದೆ ಮತ್ತು ತುಂಬಾ ಆರಾಮದಾಯಕ ಎನಿಸುತ್ತದೆ.
ನಿಯಮಿತವಾಗಿ ಈ ಬೆನ್ನು ನೋವುಗಳನ್ನು ಹೊಂದಿರುವ ಜನರು 8 ರಿಂದ 9 ಗಂಟೆಗಳ ವಿಶ್ರಾಂತಿ ತೆಗೆದುಕೊಳ್ಳಬೇಕು. ಕೆಲಸ ಮುಗಿಸಿ ಮನೆಗೆ ಬಂದಾಗ ಸೋಫಾದಲ್ಲಿ ಹಾಗೆ ಕುಳಿತುಕೊಳ್ಳಬಾರದು. ಇವುಗಳ ಜೊತೆಗೆ ಬೆನ್ನು ಬಗ್ಗಿಸುವ ವ್ಯಾಯಾಮಗಳೂ ಇವೆ. ದಿನಕ್ಕೆರಡು ಬಾರಿ ಮಾಡಿದರೆ ಆ ಭಾಗಗಳಲ್ಲಿ ನೋವು ಕಡಿಮೆಯಾಗುತ್ತದೆ. ಬೆನ್ನು ನೋವಿಗೆ ಮಸಾಜ್ ಮಾಡುವುದಾದರೆ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಕರ್ಪೂರವನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡಿ, ನಂತರ ಬಿಸಿನೀರಿನ ಸ್ನಾನ ಮಾಡಿದರೆ ಉತ್ತಮ ಪರಿಹಾರ ದೊರೆಯಲಿದೆ.
ಈ ಎಲ್ಲ ತಂತ್ರಗಳನ್ನು ನೀವು ಅನುಸರಿಸಿದರೆ, ನೀವು ನೋವಿನಿಂದ ಸಂಪೂರ್ಣ ಪರಿಹಾರವನ್ನು ಪಡೆಯಬಹುದು. ನೋವು ನಿವಾರಕ ಮಾತ್ರೆಗಳನ್ನು ಬಳಸಿದರೆ ಕಾಲಕಾಲಕ್ಕೆ ಪರಿಹಾರ ಸಿಗುತ್ತದೆ ಆದರೆ, ಕಿಡ್ನಿ ಹಾಳಾಗುತ್ತದೆ. ಅನೇಕ ಅಡ್ಡ ಪರಿಣಾಮಗಳೂ ಇವೆ. ಆದ್ದರಿಂದ, ನೋವು ಕಡಿಮೆ ಮಾಡಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಬಹುತೇಕ ಅಕ್ರಮ ಸಂಬಂಧಗಳು ಶುರುವಾಗೋದು ಹೇಗೆ? ಪೊಲೀಸ್ ಅಧಿಕಾರಿಯ ಅಚ್ಚರಿ ಉತ್ತರ ಇಲ್ಲಿದೆ… Extra Marital Affairs
ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ದೊಡ್ಡಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಒಳಾರ್ಥವಿದು! Karnika Nudi
ಶನಿಯ ಅನುಗ್ರಹದಿಂದಾಗಿ ಈ 3 ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ! Zodiac Sign