More

    ಮೇಕೆಯನ್ನು ಅಣಕಿಸಿದ ಮರಿ ಘೇಂಡಾಮೃಗ! ಈ ಅಪರೂಪದ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ

    ನವದೆಹಲಿ: ಮರಿ ಘೇಂಡಾಮೃಗವೊಂದು ಮೇಕೆಯನ್ನು ಅಣಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸ್ನೇಹಕ್ಕೆ ಯಾವುದೇ ಯಾವುದೇ ಜಾತಿ, ಧರ್ಮ ಅಥವಾ ಭಾಷೆಯ ಅಡೆತಡೆಗಳಿಲ್ಲ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ.

    14 ಸೆಕೆಂಡ್​ ಉದ್ದದ ವಿಡಿಯೋ ತುಣಕನ್ನು ಫ್ಯಾಸಿನೇಟಿಂಗ್​ (Fascinating) ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದೆ. ಮೇಕೆ ಜಿಗಿಯುವುದನ್ನು ನೋಡಿದ ಘೇಂಡಾಮೃಗದ ಮರಿ ಅದರಂತೆ ತಾನೂ ಜಿಗಿಯಲು ಯತ್ನಿಸುತ್ತದೆ. ಆದರೆ, ಮೇಕೆಗಿಂತ ಘೇಂಡಾಮೃಗ ಗಾತ್ರದಲ್ಲಿ ದಪ್ಪವಾಗಿರುವುದಿಂದ ಮೇಕೆಯಂತೆ ಮಾಡುವುದ ತುಸು ಕಷ್ಟವಾಯಿತು.

    ಅಂದಹಾಗೆ ಮೇಕೆ ಮತ್ತು ಘೇಂಡಾಮೃಗದ ಮರಿ ಸ್ನೇಹಿತರು. ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈವೆರೆಗೂ 2.3 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ವಿಡಿಯೋ ಪಡೆದುಕೊಂಡಿದೆ. 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದು, 400 ಕ್ಕೂ ಹೆಚ್ಚು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ನೋಡಿ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಸಾನಿಯಾ-ಶೋಯೆಬ್​ ದಾಂಪತ್ಯದಲ್ಲಿ ಬಿರುಕು? ಅನುಮಾನಕ್ಕೆ ಕಾರಣವಾದ ಇನ್​ಸ್ಟಾಗ್ರಾಂ ಪೋಸ್ಟ್!​

    18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts