More

    ಜಿಂಕೆಯನ್ನು ಬೇಟೆಯಾಡಿ ರಸ್ತೆ ಬದಿಯಲ್ಲೇ ತಿಂದ ಮಂಗ! ಭಯಾನಕ ದೃಶ್ಯ ವೈರಲ್…

    ನವದೆಹಲಿ: ಮಂಗ ಮಾಂಸಾಹಾರಿಯೇ? ಅಲ್ಲ ಎಂದು ಅನೇಕರು ಹೇಳಬಹುದು. ಇನ್ನೂ ಕೆಲ ಪ್ರಾಣಿಗಳ ವರ್ತನೆ ತಿಳಿದವರು ಕೋತಿಗಳು ಹೇನು ಮುಂತಾದ ಸಣ್ಣ ಕೀಟಗಳನ್ನು ತಿನ್ನುತ್ತವೆ. ಆದರೆ ಈ ಜಾತಿಯ ಕೋತಿಗಳು ಮಾತ್ರ ಅತೀ ಹೆಚ್ಚು ಹಿಂಸಾತ್ಮಕ ವರ್ತನೆಯನ್ನು ತೋರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ಕೋತಿಯೊಂದು ಜಿಂಕೆಯನ್ನು ಹಿಡಿದು ಕೆಳಕ್ಕೆ ಬೀಳಿಸಿ ರಸ್ತೆಯ ಬದಿಯಲ್ಲೇ ಜೀವಂತವಾಗಿ ತಿನ್ನುತ್ತಿರುವುದನ್ನು ಕಾಣಬಹುದು.

    ಅಂದ ಹಾಗೆ ಈ ಕೋತಿಗಳ ಜಾತಿಯ ಹೆಸರು ಬಬೂನ್​ ಎಂದು. ಇವು ಪಕ್ಕಾ ಬೇಟೆಗಾರ ಕೋತಿಗಳು. ಇವು ನಿರ್ದಯಿ ಪ್ರಾಣಿಗಳಾಗಿದ್ದು ತಮ್ಮ ಬೇಟೆಯ ಮೇಲೆ ಚೂರೂ ಕರುಣೆ ತೋರದೇ ಜೀವಂತವಾಗಿಯೇ ತಿಂದು ಬಿಡುತ್ತವೆ. ಈ ಬಬೂನ್​ಗಳು ಕೆಲವೊಂದು ಬಾರಿ ಸಿಂಹದ ಮರಿಗಳನ್ನೂ ಕಿಡ್ನಾಪ್​ ಮಾಡಿ ಮರದ ಮೇಲೆ ತೆಗೆದುಕೊಂಡು ಹೋಗುತ್ತವೆ. ಅಲ್ಲಿ ಅವುಗಳೊಂದಿಗೆ ಮನಸ್ಸಿಗೆ ಬಂದಂತೆ ಆಟವಾಡಿ ಮೇಲಿನಿಂದ ಎಸೆದು ಕೊಲ್ಲುತ್ತವೆ. ನಂತರ ಅವನ್ನೇ ತಿನ್ನುತ್ತವೆ. ಅಷ್ಟು ಕ್ರೂರಿ ಈ ಬಬೂನ್​ಗಳು.

    ಜಿಂಕೆಯನ್ನು ಬೇಟೆಯಾಡಿ ರಸ್ತೆ ಬದಿಯಲ್ಲೇ ತಿಂದ ಮಂಗ! ಭಯಾನಕ ದೃಶ್ಯ ವೈರಲ್…

    ಈ ವಿಡಿಯೋವನ್ನು Terrifying Nature ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು ನಾನಾ ರೀತಿಯ ಕಾಮೆಂಟ್​ಗಳು ಕಂಡುಬಂದಿವೆ. ಅನೇಕ ಜನರು ಮಂಗನ ಈ ಕ್ರೂರ ರೂಪಕ್ಕೆ ಭಯ ಬಿದ್ದಿದ್ದು ಪ್ರಕೃತಿಯ ಭಯಾನಕ ರೂಪಕ್ಕೆ ದಂಗಾಗಿದ್ದಾರೆ. ಒಬ್ಬರಂತೂ ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲುವುದು ಇದಕ್ಕಿಂತ ಬಹು ಸೌಮ್ಯ ವಿಧಾನ ಎಂದು ಬರೆದಿದ್ದಾರೆ. ಇನ್ನೊಬ್ಬರು ಕಾಡಿನಲ್ಲಿ ಬೇರೆ ಆಹಾರವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts