ಯುಎಸ್​ಎ ವಿರುದ್ಧ ಹೀನಾಯ ಸೋಲು; ಪಾಕ್​ ನಾಯಕ ಬಾಬರ್​ ಇಂಗ್ಲೀಷ್​ ಭಾಷಣ ವೈರಲ್​

Babar Azam
Published on

ಡಲ್ಲಾಸ್​: ಇಲ್ಲಿನ ಗ್ರ್ಯಾಂಡ್​ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 11ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್​ ಶಿಶು ಯುಎಸ್​ಎ ಗೆದ್ದು ಬೀಗಿದ್ದು, ಅತಿಥೇಯರು ಪ್ರವಾಸಿ ತಂಡದ ಎದುರು ಗೆದ್ದು ಬೀಗಿದ್ದಾರೆ. ಯುಎಸ್​ಎ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸೌರಭ್​​ ನೇತ್ರವಲ್ಕರ್​ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯುಎಸ್​ಎ ಪಾಲಿನ ಸೂಪರ್​ ಹೀರೋ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನ್ನೂ ಪಂದ್ಯ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂರನ್ನು ಹೀನಾಯವಾಗಿ ಟ್ರೋಲ್​ ಮಾಡಲಾಗುತ್ತಿದೆ. ಅವರು ಮಾತನಾಡಿರುವ ಇಂಗ್ಲೀಷ್​ ಅನ್ನು ಮುಂದಿಟ್ಟುಕೊಂಡು ನಿಮ್ಮ ತಂಡದ ಪ್ರದರ್ಶನಕ್ಕಿಂತ ನೀವಾಡುತ್ತಿರುವ ಮಾತುಗಳೇ ಕೆಟ್ಟದಾಗಿದೆ ಎಂಧು ಟ್ರೋಲ್​ ಮಾಡಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಮೊದಲ 06 ಓವರ್​ಗಳು ಚೆಂಡು ಹೆಚ್ಚಾಗಿ ಸ್ವಿಂಗ್​ ಆಗುತ್ತಿತ್ತು. ಪವರ್​ಪ್ಲೇನಲ್ಲಿ ಬ್ಯಾಟ್ಸ್​ಮನ್​ಗಳು ಬೇಗ ಔಟಾದ ಪರಿಣಾಮ ನಾವು ಹೆಚ್ಚು ಜೊತೆಯಾಟವನ್ನು ಕಟ್ಟಲು ಸಾಧ್ಯವಾಗಲಿಲ್ಲ. ಆದರೆ, ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಲಬೇಕಾಯಿತು. ನಮ್ಮ ಬೌಲರ್​ಗಳು ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಇದು ನಮಗೆ ದುಬಾರಿ ಆಯಿತು. ಗೆಲುವು ಕಂಡ ಅಮೆರಿಕ ತಂಡಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಲ್ಲಾ ವಿಭಾಗಗಳು ನಮ್ಮಗಿಂತ ಉತ್ತಮ ಪ್ರದರ್ಶನ ನೀಡಿದರು ಎಂದು ಹೇಳಿದ್ದಾರೆ.

ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಬಾಬರ್​ ಅಜಂ ಆಡಿರುವ ಮಾತುಗಳನ್ನು ತೀವ್ರವಾಗಿ ಟ್ರೋಲ್​ ಮಾಡಲಾಗುತ್ತಿದ್ದು, ಪಾಕಿಸ್ತಾನದ ಬೌಲಿಂಗ್​ಗಿಂತ ಬಾಬರ್​ ಅವರ ಇಂಗ್ಲೀಷ್​ ಉತ್ತಮವಾಗಿದೆ ಎಂದು ನೆಟ್ಟಿಗರು ಟೀಕಿಸಿ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net