

ನವದೆಹಲಿ: ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಕಂಡಿದ್ದು, ಐರ್ಲೆಂಡ್ ವಿರುದ್ಧ 08ವಿಕೆಟ್ಗಳ ಭರ್ಜರಿ ಜಯಗಳಿಸಿದೆ. ಇನ್ನೂ ಈ ಬಾರಿಯ ಟೂರ್ನಿಯು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಪಿಚ್ ವಿಚಾರವಾಗಿ ಹೆಚ್ಚು ಗಮನ ಸೆಳೆದಿದೆ.
ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿ್ ಈರ್ಪಅಣ್ ಪಠಾಣ್, ಇದು ಆಟಗಾರರಿಗೆ ಅಸುರಕ್ಷಿತವಾಗಿದ್ದು, ಒಂದು ವೇಳೆ ಈ ರೀತಿಯ ಪಿಚ್ ಏನಾದರೂ ಭಾರತದಲ್ಲಿ ಇದ್ದಿದ್ದರೆ ಯಾವುದೇ ಕಾರಣಕ್ಕೂ ಟೂರ್ನಿ ಆಯೋಜನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ನ ನೌಸ್ಸೆ ಕ್ರೀಡಾಂಗಣ ಬ್ಯಾಟ್ಸ್ಮನ್ಗಳಿಗೆ ತುಂಬಾ ಸವಾಲೊಡಿದ್ದು, ಶ್ರೀಲಂಕಾ-ದಕ್ಷಿಣ ಆಫ್ರಿಕಾ ಹಾಗೂ ಭಾರತ-ಯರ್ಲೆಂಡ್ ನಡುವಿನ ಪಂದ್ಯವೇ ಸಾಕ್ಷಿಯಾಗಿದೆ. ನಾವು ಅಮೆರಿಕಾದಲ್ಲಿ ಕ್ರಿಕೆಟ್ನಂತಹ ಕ್ರೀಡೆಯನ್ನು ಉತ್ತೇಜಿಸಲು ಬಯಸುತ್ತೇವೆ. ಆದರೆ, ಈ ರೀತಿಯ ಪಿಚ್ ಆಟಗಾರರಿಗೆ ಸುರಕ್ಷಿತವಲ್ಲ. ಒಂದು ವೇಳೆ ಭಾರತದಲ್ಲಿ ಈ ರೀತಿಯ ಪಿಚ್ ಇದ್ದರೆ ಅಲ್ಲಿ ಯಾವುದೇ ಕಾರಣಕ್ಕೂ ಪಂದ್ಯ ನಡೆಸುವುದಿಲ್ಲ. ಇಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಪಿಚ್ ಬಗ್ಗೆ ಜಾಗ್ರತೆ ವಹಿಸಬೇಕಿದೆ.
ನನ್ನ ಪ್ರಕಾರ ಈ ಪಿಚ್ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕೆ ಸೂಕ್ತವಾಗಿಲ್ಲ. ಚೆಂಡು ಬೌನ್ಸ್ ಆಗುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಸ್ಕಿಡ್ ಆಗುತ್ತದೆ. ಇದು ಅಪಾಯಕಾರಿಯಾಗಿದ್ದು, ಆಟಗಾರರು ಗಾಯಕ್ಕೆ ತುತ್ತಾಗುವ ಲಕ್ಷಣಗಳು ಕಾಣುತ್ತವೆ. ಆದ್ದರಿಂದ ನನ್ನ ಪ್ರಕಾರ ಪಿಚ್ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.