

ನವದೆಹಲಿ: 90 ದಶಕದಲ್ಲಿ ಭಾರತ ತಂಡಕ್ಕೆ ಒಂದು ರೂಪ ಕೊಟ್ಟ ನಾಯಕ ಮೊಹಮದ್ ಅಜರುದ್ದೀನ್ ಅವಕಾಶ ಸಿಕ್ಕರೆ ಟೀಮ್ ಇಂಡಿಯಾಗೆ ಕೋಚ್ ಆಗಲು ಬಯಸಿದ್ದಾರೆ. ನೇರವಾಗಿ ಇದನ್ನು ಬಯಸುವುದಿಲ್ಲ, ಆದರೆ, ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಿಭಾಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಟೀಮ್ ಇಂಡಿಯಾಗೆ ಅಷ್ಟೊಂದು ಸಹಾಯಕ ಸಿಬ್ಬಂದಿ ಹೋಗುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಮುನ್ನಡೆಸಿದ ಕೀರ್ತಿ ಹೊಂದಿರುವ ಮೊಹಮದ್ ಅಜರುದ್ದೀನ್, ಆಡಳಿತಗಾರನಾಗಿ, ರಾಜಕಾರಣಿಯಾಗಿ ಗಮನಸೆಳೆದಿದ್ದಾರೆ. ಇದೀಗ ಭಾರತ ತಂಡಕ್ಕೆ ಕೋಚ್ ಆಗುವ ಹೆಬ್ಬಯಕೆ ಹೊಂದಿದ್ದಾರೆ. ಒಂದು ವೇಳೆ ಕೋಚ್ ಆದರೂ ಹೆಚ್ಚು ಸಹಾಯಕ ಸಿಬ್ಬಂದಿ ಹೊಂದುವುದಿಲ್ಲ ಅಂತಾನು ಹೇಳಿದ್ದಾರೆ. ನಾನು ಭಾರತ ತಂಡಕ್ಕೆ ಕೋಚ್ ಆದರೆ, ನಾನು ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ಗೆ ಹೆಚ್ಚು ಗಮನ ಹರಿಸುವೆ. ಬ್ಯಾಟಿಂಗ್ ಕೋಚ್ ತಂಡಕ್ಕೆ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಅಜರುದ್ದೀನ್ ಸದ್ಯ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಐಪಿಎಲ್ ಇಲ್ಲದಿದ್ದರೆ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾರಂಥ ಆಟಗಾರರು ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೇ ಹೋರಾಡಬೇಕಿತ್ತು ಎಂದಿದ್ದಾರೆ. ಅಜರುದ್ದೀನ್ 99 ಟೆಸ್ಟ್ ಪಂದ್ಯಗಳಿಂದ 6215 ರನ್‌ಗಳಿಸಿದ್ದು, 334 ಏಕದಿನ ಪಂದ್ಯಗಳಿಂದ 9378 ರನ್ ಬಾರಿಸಿದ್ದಾರೆ. ಮ್ಯಾಚ್