ರಶ್ಮಿಕಾ ಲಿಪ್​ಲಾಕ್​ ದೃಶ್ಯವನ್ನು ಕಡಿಮೆ ಮಾಡಿ...ರಕ್ತ ಕುಡಿಯುವ ಸೌಂಡ್​ಗೂ ಕತ್ತರಿ ಹಾಕಿ ಎಂದ ಸೆನ್ಸಾರ್ ಮಂಡಳಿ​! Rashmika Mandanna

Rashmika Mandanna
Published on

ಮುಂಬೈ: ಸೌತ್​ ಬ್ಯೂಟಿ ರಶ್ಮಿಕಾ ಮಂದಣ್ಣ ( Rashmika Mandanna ), ಆಯುಷ್ಮಾನ್ ಖುರಾನಾ ( Ayushmann Khurrana ) ಅಭಿನಯದ 'ಥಮಾ' ( Thama ) ಚಿತ್ರದ ಮೂಲಕ ಬಾಲಿವುಡ್‌ ( Bollywood ) ಗೆ ಮರಳುತ್ತಿದ್ದಾರೆ. ಆದಿತ್ಯ ಸರ್ಪೋದರ್ ನಿರ್ದೇಶನದ 'ಥಮಾ' ಒಂದು ಹಾರರ್ ಕಾಮಿಡಿ ವ್ಯಾಂಪೈರ್ ಚಿತ್ರ. ಈ ಚಿತ್ರಕ್ಕೆ ಯುಎ ಪ್ರಮಾಣಪತ್ರ ಸಿಕ್ಕಿದೆ. ಅಲ್ಲದೆ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಐದು ಕಟ್‌ಗಳನ್ನು ಶಿಫಾರಸು ಮಾಡಿದೆ.

ರಶ್ಮಿಕಾ ಅವರ ಲಿಪ್ ಲಾಕ್ ದೃಶ್ಯವನ್ನು ಶೇ. 30 ರಷ್ಟು ಕಡಿಮೆ ಮಾಡುವಂತೆ ಸೆನ್ಸಾರ್ ಮಂಡಳಿ ಮುಖ್ಯವಾಗಿ ಸಲಹೆ ನೀಡಿದೆ. ಇದರೊಂದಿಗೆ ರಕ್ತ ಕುಡಿಯುವ ಸನ್ನಿವೇಶದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿಯನ್ನು ಕಡಿಮೆ ಮಾಡುವ ಸಲಹೆಯೂ ಸೇರಿದೆ.

ಇನ್ನು ಸಂಭಾಷಣೆಯ ವಿಚಾರದಲ್ಲಿ "ಆಜಾದಿ ದೂಂಗಾ" ಎಂಬ ಡೈಲಾಗ್​ ಅನ್ನು "ಆಯಾಶಿ ಕರ್ತಾ ಹೂಂ" ಗೆ ಬದಲಾಯಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಥಮಾ ಚಿತ್ರ ಈ ಎಲ್ಲ ಬದಲಾವಣೆಗಳನ್ನು ಮಾಡಿಕೊಂಡು ತೆರೆಗೆ ಅಪ್ಪಳಿಸಲು ಸಿದ್ಧವಾಗುತ್ತಿದೆ.

ಅಂದಹಾಗೆ, ಥಮಾ ಚಿತ್ರ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಹಾರರ್ ಜೊತೆಗೆ ಒಂದೊಳ್ಳೆ ಪ್ರೇಮಕಥೆಯು ಸಹ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಹಾಟ್​ ಆಗಿ ಸೊಂಟ ಬಳುಕಿಸಿದ್ದಾರೆ. ಆಯುಷ್ಮಾನ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ರಶ್ಮಿಕಾ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಥಮ್ಮಾ ಚಿತ್ರವು ಹಾರರ್ ಕಾಮಿಡಿ ಯುನಿವರ್ಸ್‌ನ ಐದನೇ ಭಾಗವಾಗಿದ್ದು, ಆದಿತ್ಯ ಸರ್ಪೋದರ್ ನಿರ್ದೇಶನದಲ್ಲಿ ಅಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ದಿಕಿ, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರರ್-ಕಾಮಿಡಿ ಚಿತ್ರವಾಗಿದ್ದು, ವಾಂಪೈರ್ ಲವ್ ಸ್ಟೋರಿ ಆಧಾರಿತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net