6, 6, 4, 4, 6.. ಆರಂಭದಲ್ಲೇ 'ಮಾತ್ರೆ' ಪವರ್​​​! ಇದೊಂದು ಪಂದ್ಯದ ಮೇಲೆ RCB ಫ್ಯಾನ್ಸ್​ಗಳ ಕಣ್ಣು | GT vs CSK

ವಿಜಯವಾಣಿ - 2025-05-25T160808.218
Published on

GT vs CSK: ಇಂದು (ಮೇ.25) ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಟಿ ಮತ್ತು ಸಿಎಸ್​ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಪಡೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಕಳೆದ ಪಂದ್ಯಗಳಲ್ಲಿ ಸಿಎಸ್​ಕೆ ಪರ ಅದ್ಭುತ ಓಪನಿಂಗ್ ಪ್ರದರ್ಶನ ನೀಡಿರುವ 17 ವರ್ಷದ ಆಯುಷ್ ಮಾತ್ರೆ, ಇಂದಿನ ಗುಜರಾತ್​ ವಿರುದ್ಧದ ಪಂದ್ಯದಲ್ಲಿಯೂ ಸ್ಫೋಟಕ ಇನ್ನಿಂಗ್ಸ್ ಕೊಡುವತ್ತ ಸಾಗಿದ್ದೇ ಆದರೂ ಪ್ರಸಿದ್ಧ ಕೃಷ್ಣ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡರು. ಒಂದೇ ಓವರ್​ನಲ್ಲಿ 6, 6, 4, 4, 6 ಸಿಡಿಸಿದ ಯುವ ಬ್ಯಾಟರ್​ ಮತ್ತೊಮ್ಮೆ ಕ್ರಿಕೆಟ್​ ಪ್ರಿಯರನ್ನು ತಮ್ಮ ಸ್ಫೋಟಕ ಬ್ಯಾಟಿಂಗ್​​ ಮೂಲಕ ಬೆರಗಾಗಿಸಿದರು.

ಇದೊಂದು ಪಂದ್ಯ ಗುಜರಾತ್​ ಟೈಟನ್ಸ್​ ಅಭಿಮಾನಿಗಳಿಗಿಂತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ಯಾನ್ಸ್​ ಬಳಗಕ್ಕೆ ಕುತೂಹಲಕಾರಿ ಪಂದ್ಯವಾಗಿದೆ. ಕಾರಣ, ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ಸೋತರೆ ಆರ್​ಸಿಬಿಗೆ ಐಪಿಎಲ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶ ಇನ್ನೂ ಜೀವಂತವಾಗಲಿದೆ. ಇದು ಆರ್​ಸಿಬಿ ಫ್ಯಾನ್ಸ್​ಗಳ ಹಪಾಹಪಿಯಾಗಿದೆ. ಸಿಎಸ್​ಕೆ ಹೇಗಾದರೂ ಮಾಡಿ ಜಿಟಿ ತಂಡವನ್ನು ಮಣಿಸಲಿ ಎಂದು ಕುಳಿತಲ್ಲೇ ಬೇಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

ಅಸಲಿಗೆ ಯಾರಿಗೆ ಇಂದಿನ ಪಂದ್ಯದಲ್ಲಿ ಗೆಲುವು ಸಿಗಲಿದೆ ಎಂಬುದನ್ನು ಪಂದ್ಯದ ಕೊನೆಯವರೆಗೂ ನೋಡಿ ತಿಳಿಯಬೇಕಿದೆ. ಆರ್​ಸಿಬಿ ಅಭಿಮಾನಿಗಳ ಆಶಯದಂತೆ ಜಿಟಿ ಧೋನಿ ಪಡೆ ಎದುರು ಮಂಡಿಯೂರಲಿದೆಯೇ ಅಥವಾ ಗೆದ್ದು ಅಂಕಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net