More

    PHOTO: ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ನಿಶ್ಚಿತಾರ್ಥ

    ಅಹಮದಾಬಾದ್: ಟೀಮ್ ಇಂಡಿಯಾದ ಸ್ಪಿನ್ನರ್ ಅಕ್ಷರ್ ಪಟೇಲ್ ತಮ್ಮ 28ನೇ ಜನ್ಮದಿನವಾದ ಗುರುವಾರದಂದು ದೀರ್ಘಕಾಲದ ಗೆಳತಿ ಮೇಹಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ನ್ಯೂಟ್ರಿಷಿಯನ್ ಮತ್ತು ಡಯೆಟೀಷಿಯನ್ ಆಗಿರುವ ಮೇಹಾ ಜತೆಗೆ ಅಕ್ಷರ್ ಪಟೇಲ್ ಕಳೆದ ಕೆಲ ಸಮಯದಿಂದ ಡೇಟಿಂಗ್‌ನಲ್ಲಿದ್ದರು.

    ಅದ್ದೂರಿ ಸಮಾರಂಭದಲ್ಲಿ ಮೊದಲಿಗೆ ಗೆಳತಿ ಮೇಹಾ ಬಳಿ ಪ್ರೇಮ ನಿವೇದನೆ ಮಾಡಿಕೊಂಡ ಅಕ್ಷರ್ ಪಟೇಲ್ ಬಳಿಕ ಉಂಗುರ ಬದಲಾಯಿಸಿಕೊಂಡರು. ಅಲಂಕೃತ ವೇದಿಕೆಯ ಹಿಂಬಾಗದಲ್ಲಿ ‘ಮ್ಯಾರಿ ಮೀ’ ಎಂದು ದೊಡ್ಡದಾಗಿ ಬರೆದಿತ್ತು. ಮೇಹಾ ಈಗಾಗಲೆ ತಮ್ಮ ಕೈ ಮೇಲೆ ‘ಅಕ್ಷ್’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಕ್ಷರ್​ ಪಟೇಲ್​ ಅವರ ಗುಜರಾತ್​ ತಂಡದ ಸಹ-ಆಟಗಾರರು ಸಮಾರಂಭದಲ್ಲಿದ್ದರು.

    ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದ ಅಕ್ಷರ್ ಪಟೇಲ್ ಸದ್ಯ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಳಿಕ ಭಾರತ ಟೆಸ್ಟ್ ತಂಡದ 3ನೇ ಆಯ್ಕೆಯ ಸ್ಪಿನ್ನರ್ ಆಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಅಕ್ಷರ್, ಇದುವರೆಗೆ ಆಡಿರುವ 5 ಟೆಸ್ಟ್‌ಗಳಲ್ಲಿ 36 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಐಪಿಎಲ್​ನಲ್ಲಿ ಅಕ್ಷರ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರಾಗಿದ್ದು, 9 ಕೋಟಿ ರೂ. ಮೊತ್ತಕ್ಕೆ ರಿಟೇನ್​ ಆಗಿದ್ದಾರೆ.

    ನಾಯಕತ್ವ ತೊರೆದ ಕೊಹ್ಲಿಗೆ ಸ್ಫೂರ್ತಿಯಾಗುವುದೇ 1998ರ ತೆಂಡುಲ್ಕರ್ ಸಾಧನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts