ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ

awareness rally of eye donation
ನೇತ್ರದಾನದ ಮಹತ್ವ ತಿಳಿಸುವ ಜಾಗೃತಿ ಜಾಥಾಗೆ ಡಿವೈಎಸ್ಪಿ ಬಾಲರಾಜ್, ಡಿಎಚ್‌ಓ ಡಾ. ರಾಜೇಶ್ ಸುರಗಿಹಳ್ಳಿ, ವೈದ್ಯ ಡಾ. ಮಹೇಶ್, ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಗುರುಮೂರ್ತಿ, ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಜಾಥಾಗೆ ಚಾಲನೆ ನೀಡಿದರು.
Published on

ಶಿವಮೊಗ್ಗ: ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ ಅಂಗವಾಗಿ ಶುಕ್ರವಾರ ಬೆಳಗ್ಗೆ ನೇತ್ರದಾನದ ಮಹತ್ವ ತಿಳಿಸಲು ಎಟಿಎನ್‌ಸಿ ಕಾಲೇಜಿನಿಂದ ಗೋಪಿ ವೃತ್ತದವರೆಗೆ ಜಾಗೃತಿ ಜಾಥಾ ನಡೆಯಿತು.

ಎಟಿಎನ್‌ಸಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಹಮ್ಮಿಕೊಂಡಿರುವ ಕುವೆಂಪು ವಿವಿಮಟ್ಟದ ಅಂತರ ಕಾಲೇಜು ಶಿಬಿರದ ಶಿಬಿರಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಂಧತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಎಟಿಎನ್‌ಸಿ ಕಾಲೇಜಿನ ಆವರಣದಲ್ಲಿ ಡಿವೈಎಸ್ಪಿ ಬಾಲರಾಜ್, ಡಿಎಚ್‌ಓ ಡಾ. ರಾಜೇಶ್ ಸುರಗಿಹಳ್ಳಿ, ವೈದ್ಯ ಡಾ. ಮಹೇಶ್, ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಗುರುಮೂರ್ತಿ, ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಜಾಥಾಗೆ ಚಾಲನೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಮಹೇಶ್ ಮಾತನಾಡಿ, ದೇಶದಲ್ಲಿ 12 ಲಕ್ಷ ಜನ ಅಂಧರಿದ್ದಾರೆ. ಆದರೆ ಕೇವಲ 25 ಸಾವಿರ ಮಾತ್ರ ನೇತ್ರದಾನ ಮಾಡುವವರು ಸಿಗುತ್ತಾರೆ. ನಮ್ಮ ಜೀವಿತಾವಧಿಯ ಬಳಿಕ ನಾವು ನೇತ್ರವನ್ನು ದಾನ ಮಾಡುವುದರಿಂದ ಅದೆಷ್ಟೋ ಅಂಧರಿಗೆ ಬೆಳಕಾಗಬಹುದು ಎಂದರು.
ಶಂಕರ ಕಣ್ಣಿನ ಆಸ್ಪತ್ರೆಯ ಗಾಯತ್ರಿ ಶಾಂತಾರಾಮ್, ಡಾ. ಮಲ್ಲಿಕಾರ್ಜುನ್, ಡಾ. ರವಿಶಂಕರ್, ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಜಿ.ವಿಜಯ್ ಕುಮಾರ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ. ನಾಗರಾಜ್, ಪ್ರೊ. ಜಗದೀಶ್, ಮಲ್ಲಿಕಾರ್ಜುನ್, ಹರ್ಷ, ಪರಿಸರ ಸಂಸ್ಥೆಯ ನಿರ್ದೇಶಕ ಜಯಂತ ಬಾಬು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net