

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಪ್ರಿ ಪ್ರೈಮರಿ ವಿಭಾಗದ ಮಕ್ಕಳ ಪಾಲಕರ ಸಭೆ, ತಿಳಿವಳಿಕಾ ಶಿಬಿರ ಶಾಲಾ ಗ್ರಂಥಾಲಯದಲ್ಲಿ ನಡೆಯಿತು.
ವಿದ್ಯಾರ್ಥಿಗಳಾದ ಆಶ್ಲೇಷ ಎಂ., ಸಾನ್ವಿ ರಾವ್, ಪಾವನಿ ರಾವ್ ಪ್ರಾರ್ಥನಾ ಗೀತೆ ಹಾಡಿದರು. ನಿವೃತ್ತ ಮುಖ್ಯ ಶಿಕ್ಷಕ, ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ. ಅಧ್ಯಕ್ಷತೆ ವಹಿಸಿ ನರ್ಸರಿ ವಿಭಾಗದ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿದರು. ಉಪ್ಪಳ ಸರ್ಕಾರಿ ಉನ್ನತ ಪ್ರೌಢ ಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಸಂಪನ್ಮೂಲ ವ್ಯಕ್ತಿಯಾಗಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲೆ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಜಗದೀಶ್ ಶೆಟ್ಟಿಗಾರ್ ಶುಭಹಾರೈಸಿದರು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿ ಪ್ರೈಮರಿ ವಿಭಾಗ ಹಿರಿಯ ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಕಿರಿಯ ಪ್ರಾಥಮಿಕ ವಿಭಾಗದ ಶಾಲಾ ಸಂಪನ್ಮೂಲ ತಂಡದ ಸಂಚಾಲಕ ಸುನೀಲ್ ಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಶಿಬಿರ ನಡೆಸಿದರು.