ಬೈಂದೂರು: ಬೆಂಗಳೂರಿನಲ್ಲಿ ಆಯೋಜಿಸಿದ ಐಡಿಯಲ್ ಪ್ಲೇ ಅಬಾಕಸ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಿತ್ವಿಕಾ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಜತೆಗೆ ಅಧೀಶ್, ವಿಖ್ಯಾತ್, ಸುಧೀಶ್, ಸಾಥ್ವಿ ಗೆ ಪ್ರಥಮ ಸ್ಥಾನ, ಆರ್ಯನ್ ರಾವ್, ರಿಷ್ವಿತ್, ಸಾನ್ವಿ, ಹರ್ಷಿತ್ ಪಿ., ಆಯುಷ್ ಪೂಜಾರಿ, ಧನರಾಜ್, ಧೀರಜ್ ನಾಯಕ್‌ಗೆ ಮೂರನೇ ಸ್ಥಾನ ಪಡೆದಿದ್ದಾರೆ. ಸಾಯೀಶ್ ನಾಲ್ಕನೇ ಸ್ಥಾನ ಮತ್ತು ವೇದವ್ಯಾಸ್, ಪ್ರಖ್ಯಾತ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಬೈಂದೂರು ಸೆಂಟರಿನ 15 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.