ಜಿಎಸ್‌ಬಿ ಸಮಾಜದಿಂದ ಕೊಡುಗೆ

h
Published on

ಹೆಬ್ರಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸಂಸ್ಕಾರ, ಸಂಸ್ಕೃತಿ ಮತ್ತು ಸಜ್ಜನಿಕೆಗೆ ಹೆಸರಾದುದು. ಎಲ್ಲರ ಹಿತ ಬಯಸುವುದರ ಜತೆಗೆ ಪ್ರತಿಯೊಬ್ಬ ಸದಸ್ಯರೂ ಸಮಾಜಕ್ಕೆ ಒಂದಿಲ್ಲೊಂದು ರೀತಿಯ ಸಹಕಾರ, ಕೊಡುಗೆ ನೀಡುತ್ತಿದ್ದಾರೆ ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್ ಹೇಳಿದರು.

ಹೆಬ್ರಿ ರಾಮ ಮಂದಿರದಲ್ಲಿ ಜಿಎಸ್‌ಬಿ ಯುವಜನ ಸಭಾ ಹೆಬ್ರಿ ಸ್ವರ್ಣ ಮಹೋತ್ಸವ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ರಾಮ ಮಂದಿರ ಅಧ್ಯಕ್ಷ ಗುಂಡು ನಾಯಕ್ ಎಚ್. ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷ ನಾರಾಯಣ ಪ್ರಭು, ಕಾರ್ಯದರ್ಶಿ ಮಹೇಂದ್ರ ನಾಯಕ್, ನಿಕಟಪೂರ್ವ ಅಧ್ಯಕ್ಷ ಸುದೇಶ್ ಪ್ರಭು, ಕಾರ್ಯದರ್ಶಿ ವಿಕ್ರಂ ಪೈ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕಿ ಅರುಣಾ ಎಸ್.ಪ್ರಭು ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net