ಬೆಳಗಾವಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬಹುಮಾನ; ಜೆಡಿಎಸ್ ಲೇವಡಿ|Award to Belgaum Police Inspector; JDS mockery

JDS LOGO
Published on

ಬೆಂಗಳೂರು: ಬೆಳಗಾವಿ ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಆರ್.ಗಡ್ಡೇಕರ ಅವರಿಗೆ ಉತ್ತಮ ಕರ್ತವ್ಯ ನಿರ್ವಹಣೆ ಹೆಸರಲ್ಲಿ ಬಹುಮಾನ ನೀಡಿರುವುದಕ್ಕೆ(Award to Belgaum Police Inspector; JDS mockery

ಜೆಡಿಎಸ್ ಕಿಡಿಕಾರಿದೆ.

ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸ್‌ಗೆ 10 ಸಾವಿರ ರೂ. ಬಹುಮಾನ ನೀಡಲಾಗಿದೆ. ಯಾರನ್ನು ಮೆಚ್ವಿಸಲು, ಖುಷಿಪಡಿಸಲು ಪೊಲೀಸರಿಗೆ ಈ ಬಹುಮಾನ? ಎಂದು ಜೆಡಿಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ!, ಪೊಲೀಸರಿಗೆ ಬಹುಮಾನವಾಗಿ 10 ಸಾವಿರ ಎಂದು ಟೀಕಿಸಿರುವ ಜೆಡಿಎಸ್ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಹರಿಹಾಯ್ದಿದೆ. ಬೆಳಗಾವಿಯ ಸುವರ್ಣಸೌಧದ ಬಳಿ ಮೀಸಲಾತಿಗಾಗಿ ನಡೆಯುತ್ತಿದ್ದ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಲಾಠಿಚಾರ್ಚ್ ಮಾಡಿಸಿ, ಸರ್ವಾಧಿಕಾರಿಯಂತೆ ವರ್ತಿಸಿತ್ತು. ಪಂಚಮಸಾಲಿ ಹೋರಾಟಗಾರರನ್ನು ಅಟ್ಟಾಡಿಸಿ ಹೊಡೆದು ರಕ್ತ ಹರಿಸಿದ್ದ ಪೊಲೀಸರಿಗೆ ಬಹುಮಾನ ಘೋಷಿಸಿದೆ ಸಿದ್ದರಾಮಯ್ಯ ಅವರದ್ದು ಹಿಟ್ಲರ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಆಕಸ್ಮಿಕ ಗೃಹಮಂತ್ರಿ ಡಾ.ಪರಮೇಶ್ವರ ಅವರೇ ಪಂಚಮಸಾಲಿಗಳ ಮೇಲೆ ಅಮಾನುಷವಾಗಿ ಲಾಠಿಚಾರ್ಚ್ ಮಾಡಿಸಿದಿರಿ. ಜತೆಗೆ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ಸುವರ್ಣಸೌಧದೊಳಕ್ಕೆ ನುಗ್ಗಿ ಓರ್ವ ವಿಧಾನ ಪರಿಷತ್ ಸದಸ್ಯನ ಕೊಲೆಗೆ ಯತ್ನಿಸಿದ್ದಾರೆ. ಇದು ನಿಮ್ಮ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವೋ? ಅಥವಾ ನಿಮ್ಮ ಇಲಾಖೆಯ ಪೊಲೀಸರ ಭದ್ರತಾ ವೈಫಲ್ಯವೋ?

ಯಾರನ್ನು ಮೆಚ್ವಿಸಲು, ಖುಷಿಪಡಿಸಲು ಪೊಲೀಸರಿಗೆ ಬಹುಮಾನ? ಎಂದು ಜೆಡಿಎಸ್ ಕೆಣಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net