ಮಹಿಳೆಯನ್ನು 400 ಮೀಟರ್ ದೂರ ಎಳೆದೊಯ್ದ ಆಟೋರಿಕ್ಷಾ; ಘಟನೆಯ ವಿಡಿಯೋ ವೈರಲ್!

viral video
Published on

ಮಹಾರಾಷ್ಟ್ರ: ಮಹಿಳೆಯನ್ನು ಆಟೋರಿಕ್ಷಾ 400 ಮೀಟರ್ ದೂರ ಎಳೆದುಕೊಂಡು ಹೋಗಿರುವ ಘಟನೆ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೆರೆಯಾದ ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಘಟನೆಯ ವಿವರ ಹೀಗಿದೆ, ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಿದ ಮಹಿಳೆ ಮತ್ತು ಆಕೆಯ ಪತಿ, ತಮ್ಮ ನಿಲ್ದಾಣ ಬಂದ ನಂತರ ಹಣ ಕೊಡುವ ವಿಚಾರದಲ್ಲಿ ಆಟೋ ಚಾಲಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಈ ವೇಳೆ ಮಹಿಳೆಯ ಪತಿ ಮತ್ತು ಆಟೋ ಚಾಲಕನ ನಡುವೆ ಮಾತಿನ ತಾಪಮಾನ ಏರಿದ್ದೇ ತಡ ಚಾಲಕ ಸ್ಥಳದಿಂದ ವಾಹನ ಚಲಾಯಿಸಿದ್ದಾನೆ. ಆಟೋರಿಕ್ಷಾ ಬಂಪರ್​​ಗೆ ಮಹಿಳೆಯ ಸೀರೆ ಸಿಲುಕಿಕೊಂಡ ಕಾರಣ 400 ಮೀಟರ್​​ವರೆಗೂ ಆಕೆಯನ್ನು ಆಟೋ ಎಳೆದೊಯ್ದಿದೆ. ಈ ಘಟನೆ ಜನನಿಬಿಡ ಪ್ರದೇಶದಲ್ಲಿ ನಡೆದಿದ್ದು, ಸ್ಥಳೀಯರು ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net