

ಬೆಂಗಳೂರು: ಕಳೆದ ಐದು ತಿಂಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಆಸ್ಟ್ರೆಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಪೂರ್ಣಪ್ರಯಾಣದಲ್ಲಿ ಬುಧವಾರವಾರದಿಂದ ಅಭ್ಉಆಸ ಆರಂಭಿಸಿದರು. 29 ವರ್ಷದ ಪೆರ್ರಿ, ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ವೇಳೆ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಭಾರತ ವಿರುದ್ಧದ ಫೈನಲ್ ಪಂದ್ಯದಿಂದಲೂ ಪೆರ್ರಿ ಹೊರಗುಳಿದಿದ್ದರು. 6 ತಿಂಗಳ ಕಾಲ ವಿಶ್ರಾಂತಿ ಸೂಚಿಸಲಾಗಿತ್ತು. ನೆಟ್ಸ್ನಲ್ಲಿ ಅಭ್ಯಾಸ ಮಾಡುವುದಕ್ಕೂ ಮುನ್ನ ಹೊರಾಂಗಣ ಹಾಗೂ ಒಳಾಂಗಣದಲ್ಲಿ ದೈಹಿಕ ಕಸರತ್ತು ನಡೆಸಿದ್ದಾರೆ. ಕಠಿಣ ಅಭ್ಯಾಸದ ವಿಡಿಯೋಗಳನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಮೂಲತಃ ಮೆಲ್ಬೋರ್ನ್ನವರಾದ ಪೆರ್ರಿ ಆಸ್ಟ್ರೆಲಿಯಾದ ಪ್ರಮುಖ ಆಲ್ರೌಂಡರ್ ಆಗಿದ್ದಾರೆ. ಮೆಲ್ಬೋರ್ನ್ನಲ್ಲೇ ಅತಿಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿಯೇ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಯಿತು. ಆಸ್ಟ್ರೆಲಿಯಾದ 26 ಸದಸ್ಯರ ಪುರುಷರ ತಂಡ ಮುಂದಿನ ತಿಂಗಳು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಆದರೆ, ಮಹಿಳಾ ತಂಡಗಳಿಗೆ ಸದ್ಯ ಯಾವುದೇ ಕ್ರಿಕೆಟ್ ಟೂರ್ನಿಗಳಿಲ್ಲ. ಕಳೆದ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆಸ್ಟ್ರೆಲಿಯಾ ಹಿಂದೆ ಸರಿದಿತ್ತು. ಆಸ್ಟ್ರೆಲಿಯಾದ ಕೆಲ ಸ್ಟಾರ್ ಆಟಗಾರರು ಸೆ.19 ರಿಂದ ನ.10ರವರೆಗೆ ಯುಎಇಯಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.