ಇಂಗ್ಲೆಂಡ್​ ಕನಸು ಭಗ್ನಗೊಳಿಸಿದ ಮಳೆ; ಆಶಸ್​ ಟ್ರೋಫಿ ಉಳಿಸಿಕೊಂಡ ಆಸ್ಟ್ರೆಲಿಯಾ

ashes web
Published on

ಮ್ಯಾಂಚೆಸ್ಟರ್​: ಪ್ರತಿಷ್ಠಿತ ಆಶಸ್​ ಸರಣಿಯ 4ನೇ ಟೆಸ್ಟ್​ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಆತಿಥೇಯ ಇಂಗ್ಲೆಂಡ್​ ತಂಡದ ಆಸೆಗೆ ಮಳೆ ತಣ್ಣೀರೆರಚಿದೆ. ಭಾರಿ ಮಳೆಯಿಂದಾಗಿ ಪಂದ್ಯದ 5ನೇ ಹಾಗೂ ಅಂತಿಮ ದಿನದಾಟದಲ್ಲಿ ಒಂದೂ ಓವರ್​ ಆಟ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆಸ್ಟ್ರೆಲಿಯಾ ತಂಡ ಸೋಲು ತಪ್ಪಿಸಿಕೊಂಡು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಆಸೀಸ್​ 2-1ರಿಂದ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಆಶಸ್​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಜುಲೈ 27ರಿಂದ ಓವಲ್​ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್​ನಲ್ಲಿ ಗೆದ್ದರೂ, ಇಂಗ್ಲೆಂಡ್​ ಸರಣಿ ಸಮಬಲ ಸಾಧಿಸಲಷ್ಟೇ ಸಾಧ್ಯವಾಗಲಿದೆ. ಇದರಿಂದ ಕಳೆದ ಆವೃತ್ತಿಯ ವಿಜೇತ ಆಸೀಸ್​ ತಂಡ ಟ್ರೋಫಿ ಉಳಿಸಿಕೊಂಡಿತು. ಪಂದ್ಯದ 4ನೇ ದಿನ ಚಹಾ ವಿರಾಮದ ವೇಳೆ ಆಸೀಸ್​ 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್​ಗೆ 214 ರನ್​ ಗಳಿಸಿ ಇನ್ನೂ 61 ರನ್​ ಹಿನ್ನಡೆಯಲ್ಲಿತ್ತು. ನಂತರದಲ್ಲಿ ಒಂದೂ ಎಸೆತ ಆಟ ನಡೆಯಲಿಲ್ಲ. ಇದರಿಂದ 2017ರ ಬಳಿಕ ಆಶಸ್​ ಟ್ರೋಫಿ ಮರಳಿ ಪಡೆಯುವ ಆಂಗ್ಲರ ಕನಸು ಭಗ್ನಗೊಂಡಿತು.

ಆಸ್ಟ್ರೆಲಿಯಾ: 317 ಹಾಗೂ 71 ಓವರ್​ಗಳಲ್ಲಿ 5 ವಿಕೆಟ್​ಗೆ 214 (ಮಾರ್ಷ್​ 31*, ಗ್ರೀನ್​ 3*, ವುಡ್​ 27ಕ್ಕೆ 3). ಇಂಗ್ಲೆಂಡ್​: 592.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net