

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನದಿಂದಾಗಿ ಸೋಲುಂಡಿದ್ದು, ಆಟಗಾರರು ಹಾಗೂ ಕೋಚ್ ನಡುವೆ ಒಮ್ಮತ ಮೂಡದೆ ಇರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಆಟಗಾರರು ಹಾಗೂ ಕೋಚ್ ನಡುವೆ ಶಿಸ್ತು ಮತ್ತು ಏಕತೆಯನ್ನು ಮೂಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI ) 10 ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸದ್ಯ ಈ ವಿಚಾ ರ ಪರ-ವಿರೋಧಕ್ಕೆ ಕಾರಣವಾಗಿದೆ.
ಬಿಸಿಸಿಐ (BCCI) ಜಾರಿಗೆ ತಂದಿರುವ 10 ನಿಯಮಗಳ ಕುರಿತಾಗಿ ನಾಯಕ ರೋಹಿತ್ ಶರ್ಮ ಸೇರಿದಂತೆ ಹಲವು ಹಿರಿಯ ಆಟಗಾರರು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಬಗ್ಗೆ ಇಯಾನ್ ಹೀಲಿ ಮಾತನಾಡಿದ್ದು, ಬೇರೆ ರಾಷ್ಟ್ರಗಳು ಇದೇ ರೀತಿಯ ಪರಿಸ್ಥಿತಿಗೆ ಹೋಗದಂತೆ ಜಾಗರೂಕರಾಗಿರಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಇಯಾನ್ ಹೀಲಿ ಎಚ್ಚರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಇಯಾನ್ ಹೀಲಿ, ಭಾರತೀಯ ಕ್ರಿಕೆಟ್ ಅಧಿಕಾರಿಗಳಿಂದ ಕಟ್ಟುನಿಟ್ಟಾದ, ಬಲವಾದ ಪ್ರತಿಕ್ರಿಯೆಯು ತಮ್ಮ ರಾಷ್ಟ್ರೀಯ ತಂಡದ ಶಿಸ್ತು ಕೆಟ್ಟದಾಗಿ ಜಾರಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ತಮ್ಮ ತಂಡಕ್ಕೆ ಮರುರೂಪ ನೀಡಲು ಅಲ್ಲಿನ ಕ್ರಿಕೆಟ್ ಮಂಡಳಿ ಮುಂದಾಗಿದೆ. ಇದು ಅಸಾಧಾರಣ ಸಮಸ್ಯೆಗಳಾಗಿದ್ದು, ದೀರ್ಘಕಾಲದವರೆಗೆ ಅನುಮೋದಿಸದೆ ಹೋಗಬಹುದು ಎಂಬುದು ನನ್ನ ಅನಿಸಿಕೆ.
ಈ ನಿಯಮವನ್ನು ಜಾರಿ ಮಾಡಿರುವುದನ್ನು ನೋಡಿದರೆ ಬಹುಶಃ ಆಟಗಾರರು ಹಾಗೂ ಮ್ಯಾನೇಜ್ಮೆಂಟ್ ತಂಡವನ್ನು ಪ್ರತಿನಿಧಿಸುವ ಕನಸನ್ನು ಅಗೌರವಗೊಳಿಸಿದ್ದಾರೆ. ಆಸ್ಟ್ರೇಲಿಯಾ ಜೊತೆಗೆ ಇತರ ದೇಶಗಳು ಪರಿಣಾಮಗಳನ್ನು ಗಮನಿಸದೆ ಪರಿಸ್ಥಿತಿ ಎಲ್ಲಿಯವರೆಗೂ ಹೋಗಬಹುದೆಂಬುದರ ಬಗ್ಗೆ ಜಾಗರೂಕರಾಗಿರಿ ಎಂದು ಬಿಸಿಸಿಐಗೆ (BCCI) ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಇಯಾನ್ ಹೀಲಿ ಎಚ್ಚರಿಸಿದ್ದಾರೆ.