

ಕೊಲ್ಲಂ: ಸಿನಿಮಾ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ನಿವೃತ್ತ ಡಿವೈಎಸ್ಪಿ ಮಧುಸೂದನನ್ ವಿರುದ್ಧ ದೂರು ದಾಖಲಾಗಿದೆ. ಕೊಲ್ಲಂ ಮೂಲದ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪ ಮಧುಸೂದನ್ ವಿರುದ್ಧ ಕೇಳಿಬಂದಿದೆ.
ಬೇಕಲ್ ಡಿವೈಎಸ್ಪಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಸಂತ್ರಸ್ತ ನಟಿ ಪೆರಿಯಾದ ಹೋಮ್ಸ್ಟೇನಲ್ಲಿ ಉಳಿದುಕೊಂಡಿದ್ದಾಗ ಈ ಘಟನೆ ನಡೆದಿದೆ. ಬಲವಂತವಾಗಿ ಬಿಯರ್ ಕುಡಿಸಿ, ತನ್ನ ರೂಮಿನಲ್ಲಿ ಮಲಗಿಕೊಳ್ಳಲು ಮಧುಸೂದನ್ ಬಲವಂತ ಮಾಡಿದ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟಿಯು ಕಿರುಚಿತ್ರದಲ್ಲಿ ನಟಿಸಲು ಕಾಸರಗೋಡಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ತ್ರಿಕಾರಿಪುರ್ ನಿವಾಸಿಯಾಗಿರುವ ಆರೋಪಿ ವಿ. ಮಧುಸೂದನ್ ಕೂಡ ಓರ್ವ ಸಿನಿಮಾ ನಟ. ಸದ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ. (ಏಜೆನ್ಸೀಸ್)