ಯುವತಿಗೆ ಹೋಳಿ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ: ಕೋಲಾರದಲ್ಲಿ ದುಷ್ಕೃತ್ಯ

Kolar Youth
ಆರೋಪಿಗಳಾದ ಡಿಎನ್‌ಡಿ ಮಧು, ಪ್ರಮೋದ್, ರಾಹುಲ್, ಶಿವರಾಜ್ ಮತ್ತು ಅಭಿಲಾಷ್
Published on

ಕೋಲಾರ: ಯುವತಿಗೆ ಹೋಳಿ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಬೆಳಮಾರನಹಳ್ಳಿಯಲ್ಲಿ ನಡೆದಿದೆ.

ಬೆಳಮಾರನಹಳ್ಳಿಯ ನಿವಾಸಿ ಮಧು ಬಿ.ಸಿ ಹಲ್ಲೆಗೊಳ್ಳಗಾದ ಕಾನೂನು ವಿದ್ಯಾರ್ಥಿ. ಮಧು ಡಿ.ಎನ್.ಡಿ ಮತ್ತು ಆತನ ಸ್ನೇಹಿತರಾದ ಶಿವರಾಜ್, ಅಭಿಲಾಷ್, ರಾಹುಲ್ ಹಾಗೂ ಪ್ರಮೋದ್ ವಿರುದ್ಧ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ತಮ್ಮದೇ ಊರಿನ ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಮಧು ಬಿ.ಸಿ. ಮೇಲೆ ಹಲ್ಲೆ ಮಾಡಲಾಗಿದೆ. ಹೋಳಿ ಹಬ್ಬದ ದಿನದಂದು ಬಸ್​​​ನಲ್ಲಿ ಯುವತಿಗೆ ಮಧು ಬಣ್ಣ ಹಚ್ಚಿದ್ದ. ಈ ವಿಚಾರ ತಿಳಿದು ಮಧು ಡಿ.ಎನ್​.ಡಿ ಮತ್ತು ಆತನ ಸಂಗಡಿಗರು ಮಧುನನ್ನು ಕರೆಸಿ, ಶೆಡ್​​ವೊಂದರಲ್ಲಿ ಬಟ್ಟೆ ಬಿಚ್ಚಿ, ಹಲ್ಲೆ ಮಾಡಿದ್ದಾರೆ.

ಈ ಘಟನೆ ಕಳೆದ 17ನೇ ತಾರೀಖಿನಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಮಧುಗೆ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net