

ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಾಡಹಗಲೇ ಹಲ್ಲೆ ಮಾಡಿದ್ದು, ಮಚ್ಚು ಹಿಡಿದುಕೊಂಡು ನಡು ರಸ್ತೆಯಲ್ಲೇ ಹೊಡೆದಾಡಿದ ಪ್ರಕರಣ ನಡೆದಿದೆ.
ಬೆಂಗಳೂರಿನ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ನ ಕೆಎಲ್ಇ ಕಾಲೇಜಿನ ಬಿಬಿಎ ವಿದ್ಯಾರ್ಥಿ ದರ್ಶನ್ ಮೇಲೆ ಈ ದಾಳಿ ನಡೆದಿದೆ. ಐದಾರು ಮಂದಿ ಅಪರಿಚಿತರ ತಂಡ ಈ ಮಾರಕಾಸ್ತ್ರಗಳೊಂದಿಗೆ ಬಂದು ಹೊಡೆದಿದ್ದಾರೆ.
ಅಂದಹಾಗೆ ಈ ಪ್ರಕರಣ 15 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವಿದ್ಯಾರ್ಥಿ ದರ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೂ. 5ರಂದು ಈ ಹೊಡೆದಾಟ ಪ್ರಕರಣ ನಡೆದಿತ್ತು.