

ಬೆಂಗಳೂರು: ಅಂಬರೀಷ್ ನಿಧನರಾಗಿ ಇಂದಿಗೆ ಎರಡು ವರ್ಷ. ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ದಿನ ಅವರು ಅನಾರೋಗ್ಯದಿಂದ ಇನ್ನಿಲ್ಲವಾದರು. ಅವರ ಈ ಪುಣ್ಯ ತಿಥಿಯಂದು ಅಭಿಮಾನಿಗಳು ವಿಶೇಷ ಅಭಿಮಾನ ಮೆರೆಯುತ್ತಿದ್ದಾರೆ. ಮಂಡ್ಯದಲ್ಲಿ ದೇವಸ್ಥಾನ ಕಟ್ಟಿ ಪೂಜೆ ಮಾಡಿದರೆ, ಇತ್ತ ಕಂಠೀರವ ಸ್ಟುಡಿಯೋದಲ್ಲಿ ಸಾಕಷ್ಟು ಮಂದಿ ನೆಚ್ಚಿನ ನಟನ ಸಮಾಧಿಗೆ ನಮಸ್ಕರಿಸುತ್ತಿದ್ದಾರೆ. ಅದೇ ರೀತಿ ನಟ ದರ್ಶನ್ ಸಹ ಸಮಾಧಿಗೆ ನಮಸ್ಕರಿಸಿ ಬಂದಿದ್ದಾರೆ.
ಇದನ್ನೂ ಓದಿ: ನೆನಪು ಅಮರ; ಇಂದು ಅಂಬರೀಷ್ 2ನೇ ಪುಣ್ಯತಿಥಿ
ನಟಿ, ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಜತೆಗೆ ಆಗಮಿಸಿದ ದರ್ಶನ್, ಬಳಿಕ ಅಂಬರೀಷ್ ಅವರ ಅನುಪಸ್ಥಿತಿಯನ್ನು ನೆನಪು ಮಾಡಿಕೊಂಡಿದ್ದಾರೆ. ‘24 ಗಂಟೆ ನನ್ನ ಜತೆಗೆ ಇರುತ್ತಾರೆ. ಪ್ರತಿ ಸಲ ಸ್ಟುಡಿಯೋಕ್ಕೆ ಬಂದರೆ, ಇಲ್ಲಿ ಬಂದೇ ನನ್ನ ಮುಂದಿನ ಕೆಲಸ. ಇದು ಅವರ ದೇವಸ್ಥಾನ. ನಾನು ದೇವರ ರೀತಿಯಲ್ಲಿಯೇ ಅವರನ್ನು ಪೂಜಿಸುತ್ತೇನೆ. ಅವರಿಲ್ಲ ಎನ್ನುವುದಕ್ಕಿಂತ ಬೈಯುವವರೂ ಇಲ್ಲದಂತಾಗಿದೆ. ಏ ಬರ್ರೋ ಎನ್ನುವ ಆ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಗಿಸೋಕೆ ಕೋಮಲ್ ರೆಡಿ … ನಗೋಕೆ ನೀವು ರೆಡಿನಾ?
ಅಷ್ಟೇ ಅಲ್ಲ ಅವರ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ‘ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ‘ ಎಂದಿದ್ದಾರೆ.