

ಇದೇ ಮೇ.1 ರಿಂದ ಅಟೋಮಿಟಿಕ್ ಟೆಲ್ಲರ್ ಮಿಷನ್(ಎಟಿಎಂ) ವಹಿವಾಟು ಶುಲ್ಕ ಹೆಚ್ಚಳವಾಲಿದ್ದು, ಮಾಸಿಕ ಮಿತಿಗಿಂತ ಎಲ್ಲಾ ವಾಹಿವಾಟುಗಳಿಗೆ ಬ್ಯಾಂಕ್ಗಳು 2ರಷ್ಟು ಶುಲ್ಕ ಹೆಚ್ಚಿಸಲಿದೆ.
ಹೌದು, ಉಚಿತ ಬಳಕೆಯನ್ನು ಮೀರಿದ ವಹಿವಾಟುಗಳಿಗೆ ಎಟಿಎಂ ಹಿಂಪಡೆಯುವಿಕೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಹಿಂದೆ(ಮಾ.28ರ ಸುತ್ತೋಲೆ)ಹೇಳಿತ್ತು.
ಈ ಸುತ್ತೋಲೆಯ ನಿಯಮಗಳು ಮೇ.1, 2025 ರಿಂದ ಜಾರಿಗೆ ಬರಲಿದ್ದು, "ಉಚಿತ ವಹಿವಾಟುಗಳನ್ನು ಮೀರಿ, ಗ್ರಾಹಕರಿಗೆ ಪ್ರತಿ ವಹಿವಾಟಿಗೆ ಗರಿಷ್ಠ 23 ರೂ.ಶುಲ್ಕ ವಿಧಿಸಬಹುದು.(ಈ ಹಿಂದೆ 21 ರೂ. ಇತ್ತು.)
ಯಾವೆಲ್ಲಾ ಬ್ಯಾಂಕ್ಗಳಿಗೆ ಅನ್ವಹಿಸುತ್ತೆ
ಆರ್‌ಬಿಐನ ಸುತ್ತೋಲೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್‌ಆರ್‌ಬಿ), ಸಹಕಾರಿ ಬ್ಯಾಂಕುಗಳು, ಅಧಿಕೃತ ಎಟಿಎಂ ನೆಟ್‌ವರ್ಕ್ ಆಪರೇಟರ್‌ಗಳು, ಕಾರ್ಡ್ ಪಾವತಿ ನೆಟ್‌ವರ್ಕ್ ಆಪರೇಟರ್‌ಗಳು ಮತ್ತು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.
ಎಟಿಎಂ ಶುಲ್ಕ ಏರಿಕೆ ಏಕೆ?
ಕಡ್ಡಾಯ ಉಚಿತ ಬಳಕೆಯನ್ನು ಮೀರಿ ಗ್ರಾಹಕರಿಗೆ ಅನ್ವಯಿಸಬಹುದಾದ ಉಚಿತ ಎಟಿಎಂ ವಹಿವಾಟುಗಳ ಸಂಖ್ಯೆ ಮತ್ತು ಗರಿಷ್ಠ ಶುಲ್ಕಗಳನ್ನು ಆರ್‌ಬಿಐ ನಿಯತಕಾಲಿಕವಾಗಿ ನವೀಕರಿಸುತ್ತದೆ. ಇದು ಆ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿದೆ.(ಏಜೆನ್ಸೀಸ್)