ಬೆಂಗಳೂರು: ಕಲ್ಯಾಣನಗರದ ಶ್ರೀಸುರಭಾರತಿ ಸಂಸ್ಕೃತ ಮತ್ತು ಕಲ್ಚರಲ್ ಫೌಂಡೇಷನ್ ಆವರಣದಲ್ಲಿ ಹೃದಯ ಸ್ಪಂದನ ಸಂಸ್ಥೆಯು ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಅತಿರುದ್ರ ಮಹಾಯಜ್ಞ ಮತ್ತು ಶತ ಚಂಡಿ ಹೋಮ ಹಾಗೂ ಚತುರ್ವೇದ ಪಾರಾಯಣವು ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಗುರು ಪ್ರಾರ್ಥನೆ, ಶಾರದ ದೇವಿ ಪೂಜೆ, ದ್ವಾರ ಪೂಜೆ , ಯಾಗಶಾಲಾ ಪ್ರವೇಶ ಹಾಗೂ ಮಹಾ ಗಣಪತಿ ಪೂಜೆ, ವಾಸ್ತು ಪೂಜೆ, ಮಹಾಸಂಕಲ್ಪ, ಪುಣ್ಯಾಹ, ಅತಿ ರುದ್ರ ಕಲಶ ಸ್ಥಾಪನ, ಗೋದಾನ, ಸಹಸ್ರ ಮೋದಕ ಗಣಪತಿ ಹೋಮ ನಡೆಯಿತು.
ದೇಶದ ವಿವಿಧ ಭಾಗಗಳಿಂದ 200 ಕ್ಕೂ ಅಧಿಕ ವೈದಿಕ ಪಂಡಿತರು ಆಗಮಿಸಿ ಸುರಭಾರತಿ ಸಂಸ್ಥೆಯ ಕೆ.ಶ್ರೀನಿವಾಸನ್ ಮಾರ್ಗದರ್ಶನದಲ್ಲಿ ಪ್ರಭಾಕರ ಶರ್ಮ ನೇತೃತ್ವದಲ್ಲಿ ಪಾರಾಯಣದಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಹೃದಯ ಸ್ಪಂದನ ಸಂಸ್ಥೆಯ ಪ್ರಸಾದ, ಸಮಸ್ತ ಲೋಕ ಸುಖಿನೋ ಭವಂತು ಎಂಬ ಆಶಯ ಮತ್ತು ಲೋಕ ಕಲ್ಯಾಣಕ್ಕಾಗಿ ಈ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮೊದಲ ದಿನವೇ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ನ.10 ರಂದು ಶತ ಚಂಡಿ ಹೋಮ ಪೂರ್ಣಾಹುತಿ, ನ.15 ರಂದು ಅತಿ ರುದ್ರ ಮಹಾ ಯದ ಪೂರ್ಣಾಹುತಿ ನಡೆಯಲಿದೆ ಎಂದರು.
ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯಬೇಕು; ಸಾಹಿತಿ ಡಾ.ಸಿಸಿರಾ ಒತ್ತಾಯ