ಬೆಂಗಳೂರು: ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಕಲಿತು, ಕನ್ನಡಿಗರೊಂದಿಗೆ ಬೆರೆತು, ಅವರೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ಸಾಹಿತಿ ಡಾ.ಸಿಸಿರಾ ಅಭಿಪ್ರಾಯಿದ್ದಾರೆ.
ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯೋಗ ಮತ್ತಿತರ ಕಾರಣಕ್ಕಾಗಿ ವಿವಿಧೆಡೆಗಳಿಂದ ಕರ್ನಾಟಕದಲ್ಲಿ ಬಂದು ನೆಲೆಸಿರುವವರು ಮೊದಲು ಕನ್ನಡ ಕಲಿಯಬೇಕು. ಅದಾಗದಿದ್ದರೆ ಅವರು ಕರ್ನಾಟಕದಲ್ಲಿರಲು ಅರ್ಹರಲ್ಲ. ಜರ್ಮನಿಯಿಂದ ಬಂದು ಕನ್ನಡದ ಸಾಂಸ್ಕೃತಿಕ ಮಹತ್ವ ಅರಿತು, ಕನ್ನಡವನ್ನು ಕಲಿತು, ಕನ್ನಡ ನಿಘಂಟು ರಚಿಸಿದ ಜಾನ್ ಎ್ ಕಿಟ್ಟೆಲ್‌ರವರ ಸಂಶೋಧನೆ ಪರಭಾಷಿಕರಿಗೆ ಮಾತ್ರವಲ್ಲ ಕನ್ನಡಿಗರಿಗೂ ಆದರ್ಶ ಎಂದು ಸಿಸಿರಾ ವಿವರಿಸಿದ್ದಾರೆ.
ಸಮಾರಂಭವನ್ನು ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್ ಉದ್ಘಾಟಿಸಿದರು. ಸಮಾರಂಭದಲ್ಲಿ ಡಾ.ಆರೂಢ ಭಾರತೀ ಸ್ವಾಮೀಜಿ, ವಿಜಯಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾದಿರಾಜ್, ಧಾರವಾಡದ ಚೇತನ ಫೌಂಡೇಶನ್‌ನ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ, ಕಥೆಗಾರ್ತಿ ಶಾಂತಿ ವಾಸು, ಸಂಸ್ಥೆಯ ಅಧ್ಯಕ್ಷ ಡಾ.ಜಿ.ಶಿವಣ್ಣ, ಕವಯಿತ್ರಿ ಆಶಾಶಿವು ಮತ್ತಿತರರು ಉಪಸ್ಥಿತರಿದ್ದರು.
ವಿಭೂತಿಪುರ ಮಠದ 2024ನೇ ಸಾಲಿನ ಸುವರ್ಣಶ್ರೀ, ಜಾನಪದ ವಿಭೂತಿ ಪ್ರಶಸ್ತಿ ಪ್ರಕಟ