

ಪಡುಬಿದ್ರಿ: ಹೆಜವಾಡಿ ದೇವಾಡಿಗ ಮಹಿಳಾ ಸಮಿತಿ ಹಾಗೂ ದೇವಾಡಿಗ ಯುವಸಂಗಮ ಜಂಟಿ ಆಶ್ರಯದಲ್ಲಿ ಭಾನುವಾರ ಹೆಜವಾಡಿಯಲ್ಲಿ ಆಯೋಜಿಸಿದ್ದ ಆಟಿಡ್ ಒಂಜಿ ದಿನ ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಹೆಜವಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಹವ್ಯಾಸಿ ಛಾಯಾಚಿತ್ರ ಕಲಾವಿದರನ್ನು ಸನ್ಮಾನಿಸಲಾಯಿತು. ಹಿರಿಯರನ್ನು ಗೌರವಿಸಿ, ಕ್ರೀಡಾಕೂಟದ ವಿಜೇತರಿಗೆ ಬಹುವಾನ ವಿತರಿಸಲಾಯಿತು.
ಸಂ ಅಧ್ಯಕ್ಷ ಹರೀಶ್ ದೇವಾಡಿಗ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಲತಾ ಯುವ ಸಂಗಮ ಅಧ್ಯಕ್ಷ ಸುದರ್ಶನ್, ಸ್ಥಾಪಕ ಅಧ್ಯಕ್ಷ ಗೋಪಾಲ ದೇವಾಡಿಗ, ವಿನೋದ ದೇವಾಡಿಗ, ಹರೀಶ್ ದೇವಾಡಿಗ ಕಡವಿನಬಾಗಿಲು ಕಟ್ಟಡ ಸಮಿತಿ ಅಧ್ಯಕ್ಷ ಸತೀಶ್ ದೇವಾಡಿಗ, ಉಪಾಧ್ಯಕ್ಷ ಉದಯ ದೇವಾಡಿಗ ಮುಂಬೈ, ಮಹಿಳಾ ಸಮಿತಿಯ ಪದ್ಮಾವತಿ ದೇವಾಡಿಗ, ನಿಕಟಪೂರ್ವ ಅಧ್ಯಕ್ಷೆ ಕುಶಲ ದೇವಾಡಿಗ ಉಪಸ್ಥಿತರಿದ್ದರು. ಕೀರ್ತಿ ದೇವಾಡಿಗ ವಂದಿಸಿದರು. ಸವಿತಾ ಎಸ್.ದೇವಾಡಿಗ ನಿರೂಪಿಸಿದರು.