ಆತೂರು ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ

Kdb_Athur Temple
Published on

ಕಡಬ: ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಪಂಚವಿಂಶತಿ ಕಲಶಾಭಿಷೇಕ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ನಾಗದೇವರಿಗೆ ಆಶ್ಲೇಷಾ ಬಲಿ, ಕಲಶಾಭಿಷೇಕ, ನಾಗತಂಬಿಲ, ದೈವಗಳ ಸನ್ನಿಧಿಯಲ್ಲಿ ಕಲಾಶಾಭಿಷೇಕ, ತಂಬಿಲ, ಶ್ರೀ ಸದಾಶಿವ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ನಾಗೇಶ್ ತಂತ್ರಿ ನೇತೃತ್ವದಲ್ಲಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಸೇರಿದಂತೆ ಅರ್ಚಕ ವೃಂದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ ಅರುವಾರ ಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಬಂತೆಜಾಲು, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸೀಗೆತ್ತಡಿ, ಮೀನಾಕ್ಷಿ ಕೆ.ಮುಂಡೈಮಾರ್, ಸುಜಾತ ಜೆ.ಶೆಟ್ಟಿ ಬಡಿಲ, ಉತ್ಸವ ಸಮಿತಿ ಅಧ್ಯಕ್ಷ ಧರ್ನಪ್ಪ ಗೌಡ ಕೊರಿಕ್ಕಾರು, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net