More

    ಕನಿಷ್ಟ ಪಕ್ಷ ನೀವು… ಭಾರತ ಸೋಲಿಸಲು ಬಾಂಗ್ಲಾಗೆ ಮೆಗಾ​ ಆಫರ್​ ಕೊಟ್ಟಿದ್ದ ಸೆಹರ್​ ಶಿನ್ವಾರಿ ಈಗ ಹೇಳಿದ್ದಿಷ್ಟು….

    ನವದೆಹಲಿ: ನಿನ್ನೆ (ಅ.19) ಮಹಾರಾಷ್ಟ್ರದ ಪುಣೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 17ನೇ ಪಂದ್ಯದಲ್ಲಿ ಆತಿಥೇಯ ಭಾರತ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿ ಗೆಲುವಿನ ಓಟ ಮುಂದುವರಿಸಿದೆ. ಭಾರತದ ಈ ಗೆಲುವು ಬಾಂಗ್ಲಾ ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ ಪಾಕಿಸ್ತಾನದ ನಟಿ ಸೆಹರ್​ ಶಿನ್ವಾರಿಗೂ ಬೇಸರ ತರಿಸಿದೆ. ಏಕೆಂದರೆ, ಪಾಕಿಸ್ತಾನದ ಹೀನಾಯ ಸೋಲಿಗೆ ಬಾಂಗ್ಲಾ ಸೇಡು ತೀರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದಳು. ಅಲ್ಲದೆ, ಬಾಂಗ್ಲಾ ಆಟಗಾರರಿಗೆ ಶಿನ್ವಾರಿ ಮೆಗಾ ಆಫರ್​ ಸಹ ನೀಡಿದ್ದಳು.

    ಅ. 14ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 12ನೇ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿತು. ಇದು ಪಾಕ್​ ಕ್ರೀಡಾಭಿಮಾನಿಗಳಿಗೆ ಇನ್ನೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ನಡುವೆ ಪಾಕ್​ನ ಸೆಹರ್​ ಶಿನ್ವಾರಿ ಬಾಂಗ್ಲಾ ವಿರುದ್ಧ ಭಾರತದ ಪಂದ್ಯಕ್ಕೂ ಮುನ್ನ ಟ್ವೀಟ್​ ಮಾಡಿ ಬಾಂಗ್ಲಾ ಆಟಗಾರರಿಗೆ ಆಫರ್​ ನೀಡಿದ್ದರು.

    ಶಿನ್ವಾರಿ ಆಫರ್​ ಏನಿತ್ತು?
    “ಇನ್​ಶಾಅಲ್ಲಾ, ನನ್ನ ಬಂಗಾಲಿ ಬಂಧು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿ. ನಾನಾಗ ಢಾಕಾಗೆ ಭೇಟಿ ನೀಡಿ ಬಂಗಾಲಿ ಹುಡುಗರೊಂದಿಗೆ ಡಿನ್ನರ್​ ಡೇಟ್​ಗೆ ತೆರಳುವೆ’ ಎಂದು ಶಿನ್ವಾರಿ ಆಫರ್​ ನೀಡಿದ್ದಳು. ಅಲ್ಲದೆ, ಭಾರತ ತಂಡ ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾಳೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳು ಫೈನಲ್​ನಲ್ಲಿ ಆಡಲಿವೆ ಎಂದಿದ್ದಾಳೆ. ಅಲ್ಲದೆ, ಪಾಕ್​ ತಂಡ ವಿಶ್ವಕಪ್​ ಎತ್ತಿಹಿಡಿಯುವ ಕನಸನ್ನೂ ಹಂಚಿಕೊಂಡಿದ್ದಾಳೆ.

    ಬಾಂಗ್ಲಾ ಸೋತ ಬಳಿಕ ಮತ್ತೊಂದು ಪೋಸ್ಟ್​
    ಬಾಂಗ್ಲಾ ವಿರುದ್ಧ ಭಾರತದ ಸೋಲಿಗಾಗಿ ಕಾದಿದ್ದ ಶಿನ್ವಾರಿಗೆ ಭಾರೀ ನಿರಾಸೆಯಾಗಿದೆ. ಭಾರತ ವಿಶ್ವಕಪ್​ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಬಾಂಗ್ಲಾ ತಂಡ ಸೋಲುತ್ತಿದ್ದಂತೆ ಮತ್ತೊಂದು ಟ್ವೀಟ್​ ಮಾಡಿರುವ ಶಿನ್ವಾರಿ, ಬೆಂಗಾಲಿ ಹುಲಿಗಳೇ ಚೆನ್ನಾಗಿ ಆಡಿದ್ದೀರಿ. ಭಾರತದ ವಿರುದ್ಧ ಕನಿಷ್ಠ ಪಕ್ಷ ಅವರದೇ ನೆಲದಲ್ಲಿ ಒಳ್ಳೆಯ ಸವಾಲು ನೀಡಿದ್ದೀರಿ ಎಂದು ಶಿನ್ವಾರಿ ಹೊಗಳಿದ್ದಾಳೆ. ಇದೀಗ ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಕ್ರೀಡಾಭಿಮಾನಿಗಳು ಶಿನ್ವಾರಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.

    ವಿರಾಟ ಪ್ರದರ್ಶನಕ್ಕೆ ಬಳಲಿದ ಬಾಂಗ್ಲಾ
    ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಲಿಟನ್ ದಾಸ್ (66 ರನ್, 82 ಎಸೆತ, 7 ಬೌಂಡರಿ) ಹಾಗೂ ತಂಜಿದ್ ಹಸನ್ (51 ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್) ಒದಗಿಸಿದ ಉತ್ತಮ ಆರಂಭದ ಬಳಿಕ ಭಾರತದ ಬಿಗಿ ದಾಳಿಗೆ ಕುಸಿದು 8 ವಿಕೆಟ್‌ಗೆ 256 ರನ್‌ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಸರಾಗ ಚೇಸಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮಾನ್ ಗಿಲ್ (53 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟದ ನೆರವಿನಿಂದ 41.3 ಓವರ್‌ಗಳಲ್ಲಿ 3 ವಿಕೆಟ್‌ಗೆ 261 ರನ್‌ಗಳಿಸಿ, ಇನ್ನೂ 51 ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು. ಇದರ ನಡುವೆಯೂ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. . ಚೇಸಿಂಗ್ ಮಾಸ್ಟರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (103* ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 48ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯೊಂದಿಗೆ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. (ಏಜೆನ್ಸೀಸ್​)

    ಭಾರತವನ್ನು ಸೋಲಿಸಲು ಬಾಂಗ್ಲಾಗೆ ಮೆಗಾ​ ಆಫರ್​ ಕೊಟ್ಟ ಪಾಕಿಸ್ತಾನದ ಸೆಹರ್​ ಶಿನ್ವಾರಿ ಹಿನ್ನೆಲೆ ಏನು?

    ಬಾಂಗ್ಲಾದೇಶ ವಿರುದ್ಧ ಕಿಂಗ್ ಕೊಹ್ಲಿ ಶತಕ; ಭಾರತಕ್ಕೆ 7 ವಿಕೆಟ್​ಗಳ ಜಯ

    ಸಂಸತ್ತಿನ ಲಾಗಿನ್​ ಐಡಿ, ಪಾಸ್​ವರ್ಡ್​ ಶೇರ್​: ಟಿಎಂಸಿ ಸಂಸದೆ ವಿರುದ್ಧ ಮತ್ತೊಂದು ಗಂಭೀರ ಆರೋಪ

    ಡಬ್ಲ್ಯುಪಿಎಲ್‌ನಲ್ಲಿ 60 ಆಟಗಾರ್ತಿಯರು ರಿಟೇನ್: 7 ಆಟಗಾರ್ತಿಯರಿಗೆ ಕೊಕ್ ನೀಡಿದ ಆರ್‌ಸಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts