More

    ಡಬ್ಲ್ಯುಪಿಎಲ್‌ನಲ್ಲಿ 60 ಆಟಗಾರ್ತಿಯರು ರಿಟೇನ್: 7 ಆಟಗಾರ್ತಿಯರಿಗೆ ಕೊಕ್ ನೀಡಿದ ಆರ್‌ಸಿಬಿ

    ಬೆಂಗಳೂರು: ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಗೂ ಮುನ್ನ ಎಲ್ಲ ಐದು ್ರಾಂಚೈಸಿಗಳು ಸ್ಟಾರ್ ಆಟಗಾರ್ತಿಯರನ್ನು ಉಳಿಸಿಕೊಂಡಿವೆ. 21 ವಿದೇಶಿಯರ ಸಹಿತ ಒಟ್ಟು 60 ಆಟಗಾರ್ತಿಯರು ರಿಟೇನ್ ಆಗಿದ್ದು, 29 ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ.
    ಆರ್‌ಸಿಬಿ ತಂಡ ನಾಯಕಿ ಸ್ಮತಿ ಮಂದನಾ, ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಡೆಲ್ಲಿ ಕ್ಯಾಪಿಟಲ್ಸ್ ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಸ್‌ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮರನ್ನು ಉಳಿಸಿಕೊಂಡಿವೆ. ಗುಜರಾತ್ ಜೈಂಟ್ಸ್ ಆಶ್ಲೇ ಗಾರ್ಡನರ್, ಬೆಥ್ ಮೂನಿರನ್ನು ರಿಟೇನ್ ಮಾಡಿಕೊಂಡಿದೆ. ಆಟಗಾರ್ತಿಯರ ರಿಟೇನ್‌ಗೆ ಅ. 15ರ ಅಂತಿಮ ಗಡುವು ನಿಗದಿ ಮಾಡಲಾಗಿತ್ತು. ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರ್ತಿಯರನ್ನು ಕೈಬಿಟ್ಟಿದೆ.
    ಆರ್‌ಸಿಬಿ: ರಿಟೇನ್: ಸ್ಮತಿ ಮಂದನಾ, ಶ್ರೇಯಾಂಕ ಪಾಟೀಲ್, ಎಲ್ಲಿಸ್ ಪೆರ‌್ರಿ, ಸೋಫಿ ಡಿವೈನ್, ಆಶಾ ಶೋಬನಾ, ದಿಶಾ ಕಸತ್, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್.
    ಬಿಡುಗಡೆ: ಡೇನ್ ವ್ಯಾನ್ ನೈಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಝಾದ್, ಮೇಗನ್ ಶುಟ್, ಪೂನಂ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts