More

    ಬಾಂಗ್ಲಾದೇಶ ವಿರುದ್ಧ ಕಿಂಗ್ ಕೊಹ್ಲಿ ಶತಕ; ಭಾರತಕ್ಕೆ 7 ವಿಕೆಟ್​ಗಳ ಜಯ

    ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್​ ಕೊಹ್ಲಿ (103) ಅಮೋಘ ಶತಕದ ಫಲವಾಗಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ 7 ವಿಕೆಟ್​ಗಳ ಜಯಗಳಿಸಿದೆ.

    ಈ ಮೂಲಕ ಭಾರತ ತಂಡವು ಏಕದಿನ ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಈ ಹಿಂದೆ ಭಾರತ ತಂಡವು ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿತ್ತು.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡವು ಆರಂಭಿಕರಾದ ತನ್ಜಿದ್ ಹಸನ್ (51 ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್), ಲಿಟನ್ ದಾಸ್ (66 ರನ್, 82 ಎಸೆತ, 7 ಬೌಂಡರಿ) ಅರ್ಧಶತಕಗಳ ಫಲವಾಗಿ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 256ರನ್​ ಗಳಿಸಿತ್ತು.

    ಭಾರತದ ಪರ ಜಸ್ಪ್ರೀತ್​ ಬುಮ್ರಾ (10-1-41-2), ಮೊಹಮ್ಮದ್​ ಸಿರಾಜ್ (10-0-60-2), ರವೀಂದ್ರ ಜಡೇಜಾ (10-0-38-2), ಕುಲ್​ದೀಪ್​ ಯಾದವ್ (10-0-47-1), ಶಾರ್ದೂಲ್​ ಠಾಕೂರ್ (9-0-59-1), ಹಾರ್ದಿಕ್ ಪಾಂಡ್ಯ (0.3-0-8-0), ವಿರಾಟ್ ಕೊಹ್ಲಿ (0.3-0-2-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ನನ್ನನ್ನು ಕೆಣಕಿದರೆ ನೆಟ್ಟಗಿರುವುದಿಲ್ಲ; ಜೆಡಿಎಸ್​ ವರಿಷ್ಠರಿಗೆ ಸಿ.ಎಂ. ಇಬ್ರಾಹಿಂ ವಾರ್ನಿಂಗ್

    257ರನ್​ಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು ಮಾಜಿ ನಾಯಕ ವಿರಾಟ್ ಕೊಹ್ಲಿ (103ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್), ಆರಂಭಿಕ ಶುಭಮನ್​ ಗಿಲ್ (53 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಉತ್ತಮ ಬ್ಯಾಟಿಂಗ್ ಫಲವಾಗಿ ಭಾರತ ತಂಡವು 41.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 261ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    ಈ ಮೂಲಕ ಭಾರತ ವಿಶ್ವಕಪ್​ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಬಾಂಗ್ಲಾದೇಶ ತಂಡವು ತಾನು ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts