ಸಿಂಹ: ಕೇತುವು ಲಗ್ನದಲ್ಲಿ ಇರುತ್ತಾನೆ. ಏಕಾದಶಕ್ಕೆ ಗುರು ಬರಲಿದ್ದು, ವಿಘ್ನಹರ ಚಿಂತಾಮಣಿ ಗಣಪತಿಯ ಪ್ರಾರ್ಥನೆಯಿಂದ ನಿಂತ ಕೆಲಸಗಳು ಮುಂದೆ ಸಾಗಿ ಕಾರ್ಯ ಜಯ, ಜನಾನುರಾಗ ಉಂಟಾಗಿ ನಿಮ್ಮ ಯಥಾಸ್ಥಿತಿ ಕಾಯ್ದು ಕೊಳ್ಳಬಹುದು. ತಪ್ಪದೇ ನಿಮ್ಮ ಗುರು ಯಾರೇ ಆಗಿರಲಿ ಅವರಿಗೆ ನಮಸ್ಕರಿಸಿ. ನಿಮ್ಮ ಆಚರಣೆಯಲ್ಲಿರುವ ಪೀಠಾಧಿಪತಿಗಳನ್ನು ದರ್ಶಿಸಿ ಆಶೀರ್ವಾದ ಪಡೆಯಿರಿ.