ವಾರ ಭವಿಷ್ಯ; ಈ ರಾಶಿಯವರಿಗೆ ವ್ಯವಹಾರಗಳಲ್ಲಿ ನೆಲವು ಒದ್ದೆಯಾಗುವಷ್ಟು ಮಾತ್ರ ದುಡ್ಡು ಸಿಗುತ್ತದೆ | weekly astrology

weekly astrology
weekly astrology
Published on
ಮೇಷ: ಗುರುವು ವಕ್ರಿಯಾಗಿ ಮಿಥುನ ರಾಶಿಗೆ ಬಂದಿದ್ದಾನೆ. ಗುರುವು ಮೂರನೇ ಮನೆಯಲ್ಲಿ ಇರುವುದು ಶುಭವೇ. ಅನಂತವಾಗಿ ಸುಬ್ರಹ್ಮಣ್ಯನನ್ನು ಪೂಜಿಸಿ. ಗುರುಗಳ ಸಲಹೆ ಪಡೆದು ಮಾಡಬೇಕಾದ ದಾನ ಮಾಡಿದಲ್ಲಿ ಇತಿಮಿತಿ ಇಲ್ಲದೆ ಬೇಕಾದ್ದನ್ನು ಸಾಧಿಸಬಹುದು. ಎಲ್ಲಕ್ಕೂ ಮಿಗಿಲಾಗಿ ತಂದೆ ತಾಯಿಯ ಆಶೀರ್ವಾದ ಪಡೆಯಿರಿ. ಅವರು ಕಣ್ಮರೆಯಾಗಿದ್ದ್ದರೆ ಅವರಿಗಾಗಿ ತಿಲ ಹೋಮ ಮಾಡಿಸಿ, 16 ಜನರಿಗೆ ಭೋಜನ ಮಾಡಿಸಿ ಶುಭವಾಗುವುದು.
ವೃಷಭ: ಗೊಂದಲಮಯ ಜೀವನ. ಸದ್ಯ ಮೋಡ ಕವಿದ ವಾತಾವರಣ. ಸೂರ್ಯ ಇಲ್ಲದೆ ಬದುಕು ಹೇಗೆ ಅಪೂರ್ಣವೋ ನೀವೂ ಹಾಗೇ ಆಗಿದ್ದೀರಿ. ದುರ್ಗೆಯನ್ನು ನಂಬಿ ಮುಂದೆ ಸಾಗಿದರೆ ಕೆಲಸಕ್ಕೆ ದಾರಿಯಾಗುತ್ತದೆ. ಸ್ನೇಹಮಯಿಯಾಗಿ ಶ್ರದ್ಧಾ ಭಕ್ತಿಯಿಂದ ಸೇವೆ ಮಾಡಿದರೂ ಅದಕ್ಕೆ ಬೆಲೆಯಿಲ್ಲ. ಸಂಪೂರ್ಣವಾಗಿ ದೇವಿ ಕೃಪೆಯನ್ನು ಪಡೆದು ಕೆಲಸವನ್ನು ಸಾಧಿಸಿಕೊಳ್ಳಿ.
ಮಿಥುನ: ಮಿಥುನ ರಾಶಿಗೆ ಗುರುವು ಲಗ್ನದಲ್ಲಿದ್ದು,ವಕ್ರಿಯಾಗಿ ಬಂದಿದ್ದಾನೆ. ಗುರುವು ಅಲ್ಪಸ್ವಲ್ಪ ಅಡೆತಡೆ ತೊಂದರೆ ಉಂಟು ಮಾಡಿದರೂ ಆತ್ಮ ಗುರುವು ನಿಮ್ಮನ್ನು ಸಲಹುತ್ತಾನೆ. ಸಂದೇಹ ಬೇಡ. ಮಾತನಾಡುವಾಗ ಎಚ್ಚರವಿರಲಿ. ಕೃಷ್ಣಾಷ್ಟೋತ್ತರ ಪಠಿಸಿ.
ಕಟಕ: ದ್ವಾದಶದಲ್ಲಿ ಗುರುವಿದ್ದಾನೆ, 9ರಲ್ಲಿ ಶನಿಯಿದ್ದು, ಗುರು ಬಲವೂ ಬೇಕು. ಶನಿ& ಗುರುವಿನ ಕೃಪಾಕಟಾಕ್ಷವು ಇದ್ದರೆ ಹೆಚ್ಚಿನ ಲಾಭವನ್ನು, ಧೈರ್ಯವನ್ನು ಕೊಟ್ಟು ಮುನ್ನಡೆಸುತ್ತಾರೆ. ಗುರುವಾಯೂರಪ್ಪನನ್ನು ಸ್ಮರಿಸಿ ಗುರುನರಸಿಂಹನನ್ನು ಪೂಜಿಸಿ. ನರಸಿಂಹ ಅಷ್ಟೋತ್ತರ ಹಾಗೂ ಗುರು ಅಷ್ಟೋತ್ತರ ಪಠಿಸಿ.
ಸಿಂಹ: 11ನೇ ಮನೆಯಲ್ಲಿ ಗುರು ಏನನ್ನಾದರೂ ಕೊಡುತ್ತಾನೆ. ಲಗ್ನದಲ್ಲಿ ಕೇತುವಿದ್ದು, ಆಗಬೇಕಾದ ಕೆಲಸ ಹಿಂದೆ ಮುಂದೆ ಆದರೆ ಭಯಪಡ ಬೇಕಾಗಿಲ್ಲ. ಸಾಕ್ಷಾತ್​ ಗುರುವೇ ನಿಮ್ಮ ಜೊತೆಗಿದ್ದಾನೆ. ದೇವರೇ ನಿಮ್ಮ ಕೆಲಸದಲ್ಲಿ ಧೈರ್ಯವನ್ನು, ಸುಖ ಶಾಂತಿಯನ್ನು ಕೊಡುತ್ತಾನೆ. ಗಣಪತಿಯನ್ನು ಪೂಜಿಸಿ, ನಾಗರಾಜ ಅಷ್ಟೋತ್ತರ ಪಠಿಸಿ.
ಕನ್ಯಾ; ವಕ್ರಿಯಾಗಿ ಶನಿ& ಷಷ್ಠದಲ್ಲಿದ್ದು ದಶಮದಲ್ಲಿ ಗುರು. ಶನಿ ಒಬ್ಬನೇ ಮನುಷ್ಯನ ಮನಸ್ಸನ್ನು ಚಂಚಲ ಮಾಡುವನು. ಕಾರ್ಯದಲ್ಲಿ ಸ್ಥಿರತೆ ಇಲ್ಲದೆ ನಿಮಗೆ ಅಶಾಂತಿಯನ್ನು ತರುವುದರಿಂದ ಕೆಲಸವು ತೂಗುಯ್ಯಾಲೆಯಾಗಿರುತ್ತದೆ. ಈ ಸಮಯದಲ್ಲಿ ಪಾರ್ವತಿ ಅಷ್ಟೋತ್ತರ ಪಠಿಸಿ. ದ್ವಾದಶ ಲಿಂಗದಲ್ಲಿ ಒಂದಾದ ಭೀಮಾಶಂಕರನನ್ನು ಪ್ರಾರ್ಥಿಸಿ.
ತುಲಾ: 9ರಲ್ಲಿ ಗುರುವಿರುವುದು ಬಯಸಿ ಬಂದ ಭಾಗ್ಯೋದಯ. ಇದು ಅನಂತ ಕರುಣೆಯಿಂದ ಕೊಡುವ ವರವೂ ಹೌದು. ದುರ್ಗೆಯು ಪ್ರವಾಹವನ್ನೂ ದಾಟಿಸಿ ಧನ&ಕನಕವನ್ನು, ಕಾರ್ಯದಲ್ಲಿ ಚಾಣಾಕ್ಷತೆಯನ್ನೂ ಕೊಡುವಳು. ಎಲ್ಲರೂ ನಿಮಗೆ ಗೌರವವನ್ನು ಕೊಡುವ ಕಾಲವಿದು. ತಂದೆ&ತಾಯಿಗೆ ವಂದಿಸಿ, ಗುರುಗಳಿಗೆ ನಿಂತಲ್ಲೇ ವಂದನೆ ಮಾಡಿ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ವಕ್ರಿಯಾಗಿ ಚತುರ್ಥದಲ್ಲಿ ಶನಿಯು, ಅಷ್ಟಮದಲ್ಲಿ ಗುರುವು ಇದ್ದಾನೆ. ಅಮೃತ ಕಾಲವನ್ನು ಸೂಚಿಸುತ್ತಿಲ್ಲ. ಶನಿಯ ಅಷ್ಟೋತ್ತರ ಪಠಿಸಿ. ವ್ಯವಹಾರಗಳಲ್ಲಿ ನೆಲವು ಒದ್ದೆಯಾಗುವಷ್ಟು ಮಾತ್ರ ದುಡ್ಡು ಸಿಗುತ್ತದೆ. ಅಷ್ಟಕ್ಕೆ ತೃಪ್ತಿಪಡಿ. ಒಳ್ಳೆಯ ಕಾಲವು ಬಂದೇ ಬರುತ್ತದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯನ ಪ್ರಾರ್ಥನೆ ಇರಲೇಬೇಕು.
ಧನಸ್ಸು: ಸಪ್ತಮದಲ್ಲಿ ಗುರುವು ಬಂದಿದ್ದು, ವಿಚಾರಗಳಲ್ಲಿ ವಕ್ರತನವನ್ನು ಮಾಡದೆ, ಬಂದವರನ್ನು ಸ್ವಾಗತಿಸಿ ಬೇಕಾದ ಕೆಲಸಗಳನ್ನು ಮಾಡಿಕೊಳ್ಳಬೇಕು. ಉಪಾಯವೇ ಮನುಷ್ಯನ ಅಭಿವೃದ್ಧಿಗೆ ಮೂಲಮಂತ್ರ. ದು@ಖವು ಬಾರದಂತೆ ಸುಖವನ್ನು ಕೊಡುವವನೇ ಗುರು. ಸುಖ& ಭೋಗ& ಭಾಗ್ಯ, ಪ್ರಶಂಸೆಯಿಂದ ಪ್ರತಿಭಾವಂತರೆಂದು ಹೆಸರನ್ನು ಪಡೆಯುವಿರಿ. ಕೋದಂಡರಾಮನನ್ನು ಪ್ರಾರ್ಥಿಸಿ.
ಮಕರ: ಮಕರ ರಾಶಿಗೆ ಗುರುವು 6ನೇ ಮನೆಗೆ ಬಂದಿದ್ದಾನೆ. ರೋಗವು ಶರೀರಕ್ಕೆ ಮಾತ್ರವಲ್ಲ. ಮನಸ್ಸಿಗೆ ನಿರಾಸೆ ಕಾಡಿ ಜೀವನದಲ್ಲಿ ಸುಖವಿರುವುದಿಲ್ಲ. ನೀವು ವಿಷಯ ವಿಚಾರಗಳನ್ನು ಅರಿತು ನಡೆದರೆ ಎಲ್ಲ ಪ್ರಗತಿಯನ್ನು ಕಾಣಬಹುದು. ಗುರುವಿಗೆ ದತ್ತಾತ್ರೇಯ ಆದಿ ಮೂಲಮಂತ್ರ ಜಪಿಸಿ. ದತ್ತಾತ್ರೇಯ ಗುರು ಚರಿತ್ರೆಯ ಪಾರಾಯಣ ಮಾಡಿದರೆ ಕೆಲಸ ಸರಾಗವಾಗಿ ನಡೆದುಹೋಗುತ್ತದೆ.
ಕುಂಭ: ಲಗ್ನಾತ್​ ಪಂಚಮದಲ್ಲಿ ಗುರು ಸ್ಥಿತನಾಗಿದ್ದಾನೆ. ಆದರೆ ಗುರುವು ರಾಹು& ಕೇತು ಪ್ರಾಬಲ್ಯಕ್ಕೆ ಸಿಲುಕಬಾರದು. ಆದ್ದರಿಂದ ನೀವು ಸುಬ್ರಹ್ಮಣ್ಯ ಸ್ವರೂಪಿ ಬಾಲಬ್ರಹ್ಮಚಾರಿಯನ್ನು ಪೂಜಿಸಿ ಆಶೀರ್ವಾದ ಪಡೆಯಿರಿ. ಬ್ರಹ್ಮಚಾರಿಗೆ ಶುಭ್ರವಾದ ಬಿಳಿವಸ್ತ್ರ, ಹಣ್ಣು ಹಂಪಲು, ಹಾಲು ಕೊಟ್ಟರೆ ಸುಬ್ರಹ್ಮಣ್ಯ ದೇವರು ತೃಪ್ತಿಯಾಗಿ ಕಾರ್ಯದಲ್ಲಿ ಜಯ ತಂದುಕೊಡುತ್ತಾರೆ. ಕಡೆಯ ಭಾಗದ ಶನಿಯ ಸಂಚಾರವಿದ್ದು, ಈಶ್ವರನನ್ನು ಪೂಜಿಸಿ.
ಮೀನ: ಚತುರ್ಥ ಗುರುವು ಅಷ್ಟೇನೂ ಫಲಕಾರಿಯಾಗಿರದಿದ್ದರೂ ಏನನ್ನೂ ಕೊಡಲಾರನೆಂದಲ್ಲ. ದ್ವಾದಶದಲ್ಲಿ ರಾಹುವಿದ್ದಾನೆ. ಎಚ್ಚರದಿಂದ ಸಾಗ ಬೇಕು. ದುಷ್ಟರ ಸಹವಾಸ ಬಿಟ್ಟು ಬಾಳಲ್ಲಿ ಎಲ್ಲಿ ತಪ್ಪು ಮಾಡಿದ್ದೇವೆಂದು ಗ್ರಹಿಸಿಕೊಂಡರೆ ನಿಮಗೆ ಶುಭವೂ ಉಂಟಾಗಿ 12ನೇ ಮನೆಯ ರಾಹುವಿಗೆ ನಾಗದೇವರು ಹಾಗೂ ಈಶ್ವರನನ್ನು ಗಂಧ, ಪುಷ್ಪ ಧೂಪ& ದೀಪದಿಂದ ಪೂಜಿಸಿದರೆ ಆತಂಕದ ಸಮಯ ಕಳೆದು ಶುಭವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net