

ಮೇಷ: ಮಹಾಲಯ ಪರ್ವವು ಆರಂಭವಾಗಿದ್ದು, ಪಿತೃಗಳು ಮನೆಗೆ ಬಂದು ಆಶೀರ್ವದಿಸುವ ಕಾಲ. ಮೇಷಾಧಿಪತಿ ಕುಜನು ದ್ವಾದಶದಲ್ಲಿ ರಾಹುವಿರುವುದರಿಂದ ಯಾರೇ ಏನು ಮಾಡಿದರೂ, ಇಲ್ಲಸಲ್ಲದ ಆರೋಪ ಹೊರಿಸಿದರೂ ದುಷ್ಟರನ್ನು ಶಿಕ್ಷಿಸಲು ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದರೆ ನಿಮ್ಮ ಸಂರಕ್ಷಣೆ ಮಾಡುತ್ತಾನೆ. ದ್ವಿತೀಯದಲ್ಲಿ ಗುರುವಿದ್ದು, ಧೈರ್ಯದಿಂದ ಮುನ್ನಡೆಯಿರಿ. ನಿಮ್ಮ ಹಿರಿಯರನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿ.
ವೃಷಭ: ಗುರುವು ರಾಶಿಯಲ್ಲಿ ಕುಳಿತಿದ್ದರೂ, ಕೇಳಿದ್ದೆಲ್ಲಾ ಕೊಡನು. ದಶಮ ಶನಿ ಸ್ವಕ್ಷೇತ್ರದಲ್ಲಿ ಇರುವು ದರಿಂದ ಗಾಳಿ, ಬೆಳಕು, ನೀರು, ಆಕಾಶ, ಭೂಮಿ ಎಲ್ಲ ಕೊಡುತ್ತದೆ. ಸೂರ್ಯ-ಚಂದ್ರ, ವಾಯು, ಅಗ್ನಿ, ಜಲ ಪಂಚದೇವತೆಗಳು ಕೈಹಿಡಿಯುತ್ತಾರೆ. ದುರ್ಗಾಪರಮೇಶ್ವರಿ ಯನ್ನು ಪೂಜಿಸಿ. ‘ದತ್ತನಾಮ ಸ್ಮರಣೆ, ಮಾತ್ರಂ ಸರ್ವಂ ಸಿದ್ದಿ ಭವತುಃ’ ಎಂದು ಪಠಿಸಿ.
ಮಿಥುನ: ಬಂಧು-ಬಾಂಧವರು, ಸ್ನೇಹಿತರ ಬುದ್ಧಿವಾದದ ಮಾತುಗಳನ್ನು ಅನುಸರಿಸಿ ಜೀವನದಲ್ಲಿ ಅಳವಡಿಸಿಕೊಂಡರೆ, ದ್ವಾದಶ ಗುರುವಿನ ಹೊಡೆತಕ್ಕೆ ಸಿಲುಕಿಕೊಳ್ಳದ ಹಾಗೆ ಗುರುವು ಸಹಾಯಮಾಡುತ್ತಾನೆ. ನಿಮಗೆ ಹಿತ ಬಯಸುವವರು ನಿಮ್ಮನ್ನು ಕಾಪಾಡುತ್ತಾರೆ. ತಾತ್ಕಾಲಿಕ ವಾಗಿ ಗುರು- ದೈವ- ಬುದ್ಧಿಬಲ ಎಲ್ಲವೂ ಸಮತೋಲನವಾಗಿ ಇರುವುದರಿಂದ ಅನಂತವಾಗಿ ಮನೋ-ಇಚ್ಛೆಯನ್ನು ಪೂರೈಸುವ ಅನಂತನೆಂದು ಕರೆಸಿಕೊಳ್ಳುವ ಶ್ರೀಕೃಷ್ಣನನ್ನು ಪೂಜಿಸಿ.
ಕಟಕ: ಏಕಾದಶದಲ್ಲಿ ಗುರುವು ಸೌಖ್ಯವನ್ನು ಸಮಾಧಾನವನ್ನು, ಶಾಂತಿಯನ್ನು ಕೊಡುತ್ತಾನೆ. ಎಲ್ಲಿ ಶಾಂತಿ ಇದೆಯೋ ಅಲ್ಲಿ ಸಂತೋಷವೂ, ಎಲ್ಲಿ ಧೈರ್ಯವಿದೆಯೋ ಅಲ್ಲಿ ಕೆಲಸವು ನಿರ್ದಿಷ್ಟ ಅವಧಿಯಲ್ಲಿ ನಡೆಯುತ್ತದೆ. ಏನಾದರೂ ಮಾಡಿ, ಎಲ್ಲಾದರೂ ಇರಿ, ಉಮಾಮಹೇಶ್ವರನನ್ನು ಪೂಜಿಸಿ. ಉಮಾಮಹೇಶ್ವರ ವ್ರತಕಥೆಯನ್ನು ಓದಿದರೆ ಆನಂದವು ನಿಮ್ಮದಾಗುತ್ತದೆ.
ಸಿಂಹ: ಸಿಂಹ ರಾಶಿಯವರಿಗೆ ಸೂರ್ಯನೇ ರಾಶ್ಯಾಧಿಪತಿಯಾಗಿದ್ದು, ಬೆಳಕನ್ನು ಚೆಲ್ಲಿ ಬಾಳನ್ನು ಸುಂದರವಾಗಿ ನಡೆಸುತ್ತಾನೆ. ಗ್ರಹಬಲ, ಗುರುಬಲ ಆವಶ್ಯಕ. ಬುದ್ಧಿಯನ್ನು ಉಪಯೋಗಿಸಿಕೊಂಡು ಶ್ರಮಪಟ್ಟರೆ ಏನನ್ನು ಬೇಕಾದರೂ ಕೊಡಲು ದೈವವೇ ಉದ್ಯುಕ್ತವಾಗಿರುತ್ತದೆ. ಪೂರ್ವಜನ್ಮದ ಪುಣ್ಯವೇ ಸುಖದ ಹಾದಿಯಲ್ಲಿ ಇಟ್ಟು ಧೈರ್ಯ-ಕೀರ್ತಿ, ಆಕಸ್ಮಿಕ ಧನಲಾಭ ತರುತ್ತದೆ.
ಕನ್ಯಾ: ‘ಜನನಿ-ಜನ್ಮಾಶ್ಚ ಸಕಲ ಗ್ರಹಂ ಶುಭಸ್ಥಾನಂ’ ಎಂಬ ಮಾತಿದೆ. ತಾಯಿಯ ಗರ್ಭದಿಂದ ಜನಿಸಿದ ಮಕ್ಕಳಿಗೆ ಗ್ರಹವು ಅತ್ಯುತ್ತಮ ಫಲವನ್ನು ಕೊಡುವುದೆಂದು ಹೇಳಬಹುದು. ಇದಕ್ಕೆ ಏಕೈಕ ಜಗನ್ಮಾತೆ ಜನ್ಮಕೊಟ್ಟ ತಾಯಿಯನ್ನು ಅಭಿನಂದಿಸಿ, ಪೂಜಿಸಿ. ಆರನೇ ಮನೆ ಶನಿ, 9ರ ಗುರುವು ನೆಮ್ಮದಿಯ ಜೀವನವನ್ನು ಸಾಗಿಸಲು ಅನುಕೂಲ ಮಾಡಿಕೊಡುತ್ತಾರೆ.
ತುಲಾ: ಶ್ರೀ ಕೃಷ್ಣನನ್ನು ಪೂಜಿಸಿ. ಜಗತ್ತನ್ನೆ ತೂಗುವ ಶಕ್ತಿ ನಿಮ್ಮ ಕೈಯಲ್ಲಿದೆ. ಎಲ್ಲರನ್ನು ತೂಗಿಸುವ ಚಾಣಕ್ಯತನವೇ ತುಲಾ ರಾಶಿಯವರ ವಿಸ್ಮಯವಾದ ಅಂಶ. ಮಾತಿನ ಮಲ್ಲರು. ಶ್ರಮ ಜೀವಿಗಳು. ನಿತ್ಯ ಪ್ರಾರ್ಥನೆ, ಔಪಾಸಕರು. ಹಾಗಾಗಿ ಗ್ರಹಬಾಧೆ ಹತ್ತಿರ ಸುಳಿಯದು. ಇಷ್ಟ ದೇವರನ್ನು ಪೂಜಿಸಿ, ಬೇಕಾದ್ದನ್ನು ಪಡೆಯಿರಿ.
ವೃಶ್ಚಿಕ: ಗುರುವಿದ್ದಾಗ ಸಪ್ತಮದಲ್ಲಿ ಫಲವನ್ನು ಕೊಟ್ಟು, ಪರಮಾತ್ಮನು ತಾನೇ ಎಲ್ಲವನ್ನೂ ಕೊಡುವ ಕಾಲ. ಪಂಚಮ ರಾಹುವಿಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ಕೆಲಸವು ವೇಗವಾಗಿ ನಡೆಯುತ್ತದೆ. ಆರೋಗ್ಯವನ್ನು ನೋಡಿಕೊಂಡರೆ, ಧೈರ್ಯ - ಕೀರ್ತಿ - ಯಶೋಲಾಭವು ತನ್ನಿಂದ ತಾನೆ ಬಂದು ಸೇರುತ್ತದೆ.
ಧನಸ್ಸು: ಪರಮಾತ್ಮನೇ ಸ್ಥಾಪಿಸುವ ನೆಲ, ಜಲ, ವಾಯು, ಕುಭೇರ ಅಷ್ಟದಿಕ್ಪಾಲಕರು, ಇಂದ್ರ ಸಹಿತರ ಅನುಗ್ರಹ ಹಾಗೂ ಪೂರ್ವ ಜನ್ಮದ ಪುಣ್ಯವು ಬಂದು ಸೇರಿರುವ ಕಾಲ. ಶೋಭಾಯಮಾನವಾಗಿ ಉಳಿಯಬೇಕಾದರೆ ಗುರು ಅನುಗ್ರಹ ಬೇಕೇ ಬೇಕೇ. ಗುರು ಪ್ರಾರ್ಥನೆ ಮಾಡಿ. ಗುರಿಯನ್ನು ಮುಟ್ಟಿ ಗುರುವನ್ನೇ ಪ್ರತ್ಯಕ್ಷವಾಗಿ ಕಾಣಬಹುದು. ತಾಯಿಯನ್ನು ಗೌರವಿಸಿ, ಪ್ರೀತಿಸಿ.
ಮಕರ: ಒಳ್ಳೆಯ ಕಾಲ ಬರುವ ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ. ಯಾವುದನ್ನು ಮಾಡಬೇಕು, ಮಾಡಕೂಡದು ಎಂಬುದನ್ನು ತಿಳಿದುಕೊಂಡು ಈಗಿನಿಂದಲೇ ಅಭ್ಯಾಸ ಮಾಡಿ. 29 ಮಾರ್ಚ್ 2025ರಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಅಧ್ಯಾಯ ಆರಂಭವಾಗಿ ಸುಖ, ಯಶಸ್ಸು, ಆರೋಗ್ಯಕ್ಕೆ ಕೊರತೆಯಾಗುವುದಿಲ್ಲ. ಈ ಸಮಯದಲ್ಲಿ ಭಕ್ತಿಯಿಂದ ಪಾರ್ವತಿ ಸಾಂಬ ಸದಾಶಿವನನ್ನು ಪೂಜಿಸಿ, ಶಿವ ಅಷ್ಟೋತ್ತರ, ಶನಿವಿಪ್ಪಲಾ ಸ್ತೋತ್ರ ಪಾರಾಯಣ ಮಾಡಿ.
ಕುಂಭ: ಲಗ್ನದಲ್ಲಿ ಶನಿ ಇದ್ದರೂ ನಿಮಗೆ ಬೇಕಾದವರೇ ಶತ್ರುಗಳಾಗಿ ಹುಟ್ಟಿಕೊಳ್ಳುತ್ತಾರೆ. ಕೊಟ್ಟ ಮಾತು ಉಳಿಸಿಕೊಳ್ಳಲು ಆಗದೆ ನಿಂದನೆಗೆ ಒಳಗಾಗಿ ಮನಸ್ಸು ಮುದುಡುತ್ತದೆ. ಶನಿಯು ಮೀನ ರಾಶಿಯನ್ನು ಸೇರುವ ಕಾಲ ಬಂದಾಗ ಗುರುಮನೆಯಲ್ಲಿ ಬರುವ ಶನಿಯು ಜೀವನದ ಮಾರ್ಗವನ್ನು ಸಾಗಿಸಲು ಅನುವು ಮಾಡಿಕೊಡುತ್ತಾನೆ. ಶನಿ ಅಷ್ಟೋತ್ತರ ಪಠಿಸಿ.
ಮೀನ: ದ್ವಾದಶದಲ್ಲಿ ಶನಿಯಿದ್ದು, ಈಶ್ವರ ಅರ್ಚನೆ, ದುರ್ಗೆಯ ಅನುಗ್ರಹ ಇಚ್ಛಾಶಕ್ತಿ-ಕ್ರಿಯಾಶಕ್ತಿ ಜ್ಞಾನಶಕ್ತಿಯನ್ನು ಕೊಡುವ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಸರಸ್ವತಿ ಸ್ತೋತ್ರ ಪಠಿಸಿದರೆ ಜಿಜ್ಞಾಸೆಗಳು ದೂರವಾಗಿ, ನೆಮ್ಮದಿ ಪಡೆದು, ತೃಪ್ತಿಕರವಾದ ಧನವನ್ನು, ಆರೋಗ್ಯವನ್ನು ದೇವರೇ ಸೃಷ್ಟಿಸುತ್ತಾನೆ.