Zodiac Signs: ಈ 4 ರಾಶಿಯವರು ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ!

untitled-design-49-6880f41c8d6cd
Published on

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕನಸು ಇದ್ದೇ ಇರುತ್ತದೆ. ಹಾಗೆ ಅದನ್ನು ನನಸು ಮಾಡಲು ಬಹಳ ಮಂದಿ ಪ್ರಯತ್ನ ಮಾಡುತ್ತೀರುತ್ತಾರೆ. ಆದರೆ, ಕೆಲವರಷ್ಟೇ ತಮ್ಮ ಗುರಿಯನ್ನು ಮುಟ್ಟುತ್ತಾರೆ. ಇದರಲ್ಲಿ ಹಲವರು ತಮ್ಮ ಪ್ರಯತ್ನದಲ್ಲಿ ಏನಾದರೂ ತೊಂದ್ರೆಯಾದೆರೆ ಗುರಿಯನ್ನು ಮಧ್ಯದಲ್ಲಿಯೇ ಬಿಡ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲ ರಾಶಿಯವರು ಮಾತ್ರ ತಮ್ಮ ಸಾಧನೆಗೆ ಏನೇ ಅಡ್ಡಿಯಾದಾರೂ ಇಟ್ಟ ಗುರಿಯನ್ನು ಮುಟ್ಟುತ್ತಾರೆ. ಅವರು ಯಾವ ರಾಶಿಯವರು ಎಂದು ತಿಳಿಯೋಣ..

1.ಮೇಷ ರಾಶಿ

ಮೇಷ ರಾಶಿಯನ್ನು ಕುಜನಿಗೆ ಹೊಲಿಕೆ ಮಾಡುತ್ತಾರೆ. ಈ ರಾಶಿಯವರು ಜೀವನದಲ್ಲಿ ಹಲವು ಕನಸುಗಳನ್ನು ಕಾಣುತ್ತಾರೆ. ಕೇವಲ ಕಮಸು ಕಾಣುವುದಲ್ಲ.. ಅದು ಪೂರೈಸಲು ಶ್ರಮಿಸುತ್ತಾರೆ. ಎಷ್ಟೇ ಸವಾಲುಗಳು ಎದುರಾದರೂ ಮಧ್ಯದಲ್ಲಿ ನಿಲ್ಲಿಸಲ್ಲ. ಅಲ್ಲದೆ, ಎಷ್ಟೇ ಬಾರಿ ವಿಫಲವಾದರೂ ಗುರಿಯಿಂದ ಹಿಂದೆ ಸರಿಯಲ್ಲ. ಈಡೇರುವ ತನಕ ಪ್ರಯತ್ನ ಮಾಡಿ ಕೊನೆಗೆ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.

2. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಸಾಧಿಸಲು ನಿರಂತರ ಪ್ರಯತ್ನ ಮಾಡುತ್ತಾರೆ. ಎನೇ ಎದುರಾದರೂ ಒತ್ತಡ ತಡೆದುಕೊಳ್ಳುವ ಶಕ್ತಿ ಅವರಲ್ಲಿದೆ. ಜೀವನದಲ್ಲಿ ಎದುರಾಗುವ ಬದಲಾಣೆಗಳಿಗೆ ಅನುಗುಣವಾಗಿ ಅವರು ಬದಲಾಗುತ್ತಾರೆ. ಎಷ್ಟೇ ತಡವಾದರೂ ಅವರ ಗುರಿ ಸಾಧಿಸುತ್ತಾರೆ.

3.ಮಕರ ರಾಶಿ

ಮಕರ ರಾಶಿಯವರು ಶಿಸ್ತಿನ ಸಿಪಾಯಿಗಳು. ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುತ್ತಾರೆ. ಅವರು ಪ್ರತಿಯೊಂದು ವಿಷಯದಲ್ಲಿ ಬಹಳ ಕ್ರಮಬದ್ಧವಾಗಿ ಮುಂದುವರೆಯುತ್ತಾರೆ. ಅವರಿಗೆ ಭವಿಷ್ಯದ ಬಗ್ಗೆ ಸಾಕಷ್ಟು ಸ್ಪಷ್ಟತೆ ಇರುತ್ತದೆ. ಅವರು ಎಷ್ಟೇ ತೊಂದರೆಗಳನ್ನು ಎದುರಿಸಿದರೂ, ಅವರು ತಮ್ಮ ಗುರಿಯನ್ನು ಬದಿಗಿಡುವುದಿಲ್ಲ. ಅವರು ತಾವು ಅಂದುಕೊಂಡಿದ್ದನ್ನು ಖಂಡಿತವಾಗಿಯೂ ಸಾಧಿಸುತ್ತಾರೆ.

4. ಸಿಂಹ ರಾಶಿ

ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯವರನ್ನು ಸೂರ್ಯನಿಗೆ ಹೊಲಿಸುತ್ತಾರೆ. ಈ ರಾಶಿಯವರು ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ಅವರು ಜೀವನದಲ್ಲಿ ಧೃಢ ಸಂಕಲ್ಪ ಹೊಂದಿರುತ್ತಾರೆ. ಅವರು ಬಯಸಿದ್ದನ್ನು ಸಾಧಿಸುವವರೆಗೆ ಬಿಟ್ಟುಕೊಡುವುದಿಲ್ಲ. ಸೋಲಿನ ನಂತರವೂ ಅವರು ಮತ್ತೆ ಎದ್ದು ಬಲವಾಗಿ ಮುನ್ನಡೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net