

Astrology: ಶನಿ ದೇವರನ್ನು ನ್ಯಾಯದ ದೇವರೆಂದು ಪರಿಗಣಿಸಲಾಗುತ್ತದೆ. ಜನರ ಕಾರ್ಯಗಳಿಗೆ ತಕ್ಕಂತೆ ಫಲಿತಾಂಶಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಶನಿ ದೇವ ಎಂದರೆ ಸಾಕು ಎಲ್ಲರೂ ಭಯಗೊಳ್ಳುತ್ತಾರೆ. ಜೊತೆಗೆ ಏನಾದರೂ ಕೆಡುಕಾಗುತ್ತದೆ ಎಂದು ತಿಳಿಯುತ್ತಾರೆ. ಆದರೆ, ಇದು ತಪ್ಪು ಭಾವನೆ. ಯಾರು ಕಷ್ಟದ ಸಮಯಗಳಲ್ಲಿಯೂ ಪ್ರಾಮಾಣಿಕರಾಗಿ ಉಳಿಯುವ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಒಳ್ಳೆಯದು ಆಗೇ ಆಗುತ್ತದೆ ಎಂದು ತಿಳಿದುಬಂದಿದೆ.
ಮಾನವನ ಹಣೆಬರಹದ ಬಹುಪಾಲು ಭಾಗವು ಶನಿ ದೇವರ ಪ್ರಭಾವದಿಂದ ನಡೆಸಲ್ಪಡುತ್ತದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿ ತನ್ನ ಸ್ಥಾನದ ದಿಕ್ಕನ್ನು ಬದಲಾಯಿಸುತ್ತಾನೆ. ಮತ್ತು ಈ ಬದಲಾವಣೆಗಳು ನವೆಂಬರ್ ತಿಂಗಳಿನಿಂದ ಈ ಮೂರು ರಾಶಿ ಚಿನ್ಹೆಗಳಿಗೆ ಅದೃಷ್ಟ, ಯಶಸ್ಸು, ಮತ್ತು ಸಂಪತ್ತಿನ ಅವಕಾಶಗಳನ್ನು ಸೃಷ್ಟಿಸುತ್ತದೆ. ಹಾಗಿದ್ದರೆ, ಆ 3 ರಾಶಿಗಳು ಯಾವುವು ನೋಡೋಣ ಬನ್ನಿ...
ಮಿಥುನ ರಾಶಿಯವರಿಗೆ ನವೆಂಬರ್ ತಿಂಗಳು ವೃತ್ತಿಜೀವನಕ್ಕೆ ಸೂಕ್ತವಾದಂತಹ ಸಮಯ. ಏಕೆಂದರೆ ನವೆಂಬರ್‌ನಲ್ಲಿ ಶನಿ ಮಿಥುನ ರಾಶಿಯಲ್ಲಿ ಸಂಚಾರಗೊಳ್ಳುವುದರಿಂದ ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಇವರು ವ್ಯಾಪಾರ ಕ್ಷೇತ್ರದಲ್ಲೂ ಅಭೀವೃದ್ದಿಯನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಧೈರ್ಯವು ಹೆಚ್ಚಾಗುತ್ತದೆ. ಇದರಿಂದ ಮುನ್ನಣೆ ಸಾಗಿಸಲು ಸಹಾಯವಾಗುತ್ತದೆ. ಈ ರಾಶಿಯವರು ನವೆಂಬರ್‌ನಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿದರೆ, ಉತ್ತಮ ಲಾಭವನ್ನು ಪಡೆಯಬಹುದು.
ಈ ರಾಶಿಯವರ ಅದೃಷ್ಟದ ಮನೆಯಲ್ಲಿ ಶನಿ ಸಂಚಾರ ಮಾಡಲಿದ್ದಾನೆ. ಇದು ಈ ರಾಶಿಯವರ ಅದೃಷ್ಟಕ್ಕೆ ಸಹಾಯ ಮಾಡುತ್ತದೆ. ಅರ್ಧದಲ್ಲೇ ನಿಂತುಹೋಗಿದ್ದ ಕೆಲಸಗಳು ಪೂರ್ಣಗೊಳ್ಳುವಂತಹ ಸಮಯ ಇದಾಗಿದೆ. ಗಂಡ- ಹೆಂಡತಿ ನಡುವೆ ಸಾಮರಸ್ಯ. ಕುಟುಂಬದೊಂದಿಗೆ ಉತ್ತಮ ಭಾಂದವ್ಯ. ಈ ಸಮಯದಲ್ಲಿ ಹೊಸ ಆಸ್ತಿ ಖರೀದಿರುವಂತವವರಿಗೆ ಉತ್ತಮ ಲಾಭ ನಿರೀಕ್ಷೆ ಇದೆ. ಕಾರು ಮತ್ತು ಮನೆಗಳ ಮೇಲೆ ಹೂಡಿಕೆ ಮಾಡುವಂತವರಿಗೆ ಈ ಸಮಯ ಶುಭವಾಗಲಿದೆ.
ಕುಂಭ ರಾಶಿಯವರಿಗೆ ನವೆಂಬರ್ ತಿಂಗಳು ರಾಜ್ಯವೈಭೋಗವಿದ್ದಂತೆ. ಈ ತಿಂಗಳು ಇವರು ಮುಟ್ಟಿದ್ದೆಲ್ಲಾ ಚಿನ್ನ. ಏಕೆಂದರೆ ಶನಿಯು ತನ್ನದೇ ಆದ ರಾಶಿಯಲ್ಲಿ ಸಂಚಾರ ನಡೆಸುತ್ತಾನೆ. ಈ ಸಮಯದಲ್ಲಿ ಹಣ, ಗೌರವ, ಮೆಚ್ಚುಗೆಯನ್ನು ಸಂಪಾದಿಸುತ್ತೀರಿ. ನಿಮ್ಮ ಕೆಲಸವು ಇತರ ಜನರಿಗೆ ಇಷ್ಟವಾಗುತ್ತದೆ. ಮಾತಿನಲ್ಲಿ ಸಂಯಮವು ಸ್ವಯಂಚಾಲಿತವಾಗಿ ಬರುತ್ತದೆ. ಇದರಿಂದ ನಿಮ್ಮ ಜೀವನ ಆಕರ್ಷಿತರಾಗುತ್ತಾರೆ. ಜೀವನದಲ್ಲಿ ಆರ್ಥಿಕ ಸ್ಥಿರತೆ ಸುಧಾರಿಸುತ್ತದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.