ಕನಸಿನಲ್ಲಿ ಯಾರದೋ ಸಾವನ್ನು ಕಂಡರೆ ಶುಭವಂತೆ!; ಇತರ ಕೆಟ್ಟ ಕನಸುಗಳ ಶುಭ ಅರ್ಥ ತಿಳಿಯಿರಿ.. | Auspicious

dk - 2025-04-28T132628.122
Published on

Auspicious : ಸಾಮಾನ್ಯವಾಗಿ ರಾತ್ರಿ ನಿದ್ದೆ ಮಾಡುತ್ತಿರವಾಗ ಅನೇಕ ಕನಸುಗಳು ಕಾಣುತ್ತೇವೆ. ಇದರಲ್ಲಿ ಕೆಲ ಕನಸುಗಳು ನೆನಪಿದ್ದರೆ ಇನ್ನು ಕೆಲವು ನೆನಪಿಗೆ ಬರುವುದಿಲ್ಲ. ನಮ್ಮ ಕನಸಿನಲ್ಲಿ ನಾವು ಹೃದಯ ವಿದ್ರಾವಕ ಮತ್ತು ನಿದ್ರೆಯನ್ನು ಕಸಿದುಕೊಳ್ಳುವ ಇಂತಹ ಅನೇಕ ಘಟನೆಗಳನ್ನು ನೋಡುತ್ತೇವೆ. ಆದರೆ ಕನಸು ವಿಜ್ಞಾನದ ಪ್ರಕಾರ, ಪ್ರತಿಯೊಂದು ಅಶುಭ ಕನಸು ನಮಗೆ ಕೆಟ್ಟದ್ದಲ್ಲ. ಕನಸಿನಲ್ಲಿ ಕಾಣುವ ಕೆಲವು ಅಶುಭ ಘಟನೆಗಳು ನಿಜ ಜೀವನದಲ್ಲಿ ಬಹಳ ಶುಭ ಫಲಿತಾಂಶಗಳನ್ನು ನೀಡಬಹುದು. ಯಾವ ಅಶುಭ ಕನಸುಗಳು ನಮಗೆ ಶುಭ ಫಲಿತಾಂಶಗಳನ್ನು ನೀಡಬಲ್ಲವು ಎಂಬುದು ತಿಳಿಯೋಣ.

ಕನಸ್ಸಿನಲ್ಲಿ ಯಾರದೋ ಸಾವನ್ನು ನೋಡುವುದು

ಕನಸ್ಸಿನಲ್ಲಿ ಬಿದ್ದ ಕೆಟ್ಟ ಕನಸುಗಳು ಸಾಮಾನ್ಯವಾಗಿ ನೆನಪಿರುತ್ತವೆ. ಅಲ್ಲದೆ, ಇದು ಅಶುಭ ಕನಸು. ಇದರಿಂದ ಮುಂದೆ ಏನೋ? ಸಮಸ್ಯೆ ಆಗಲಿದೆ ಎಂದು ಭಯಪಡುತ್ತೇವೆ. ಆದರೆ, ಎಲ್ಲಾ ಅಶುಭ ಕನಸುಗಳು ಅಪಶಕುನ ಅಲ್ಲವಂತೆ. ಕನಸ್ಸಿನಲ್ಲಿ ಯಾರದೋ ಸಾವನ್ನು ನೋಡುವುದು ಶುಭ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುತ್ತಾರೆ.

ಒಬ್ಬ ವ್ಯಕ್ತಿಯು ಸತ್ತಿರುವುದನ್ನು ಅಥವಾ ಕನಸಿನಲ್ಲಿ ಯಾರೊಬ್ಬರ ಸಾವನ್ನು ನೋಡುವುದು ಒಳ್ಳೆಯ ಸಂಕೇತವಾಗಿದೆ. ಇದರರ್ಥ ನಿಮ್ಮ ವಯಸ್ಸು ಹೆಚ್ಚಾಗಲಿದೆ. ಇದಲ್ಲದೆ, ನಿಮ್ಮ ಪ್ರೀತಿಪಾತ್ರರು ಯಾರಾದರೂ ಕನಸಿನಲ್ಲಿ ಸತ್ತಿರುವುದನ್ನು ನೀವು ನೋಡಿದರೆ, ಅದು ಅವರ ಜೀವಿತಾವಧಿ ದೀರ್ಘವಾಗಿದೆ ಎಂಬುದರ ಸಂಕೇತವಾಗಿದೆ.

ಕನಸಲ್ಲಿ ಮಲ ನೋಡುವುದು ಶುಭ

ಇದು ನಿಮಗೆ ಸಲ್ಪ ವಿಚಿತ್ರ ಎನಿಸಬಹುದು. ಆದರೆ, ಕನಸಲ್ಲಿ ಮಲ ನೋಡುವುದು ಶುಭವಂತೆ. ಈ ಕನಸಿನ ಅರ್ಥವೇನೆಂದರೆ, ನೀವು ಹಣದ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈಗ ಅದರಿಂದ ಪರಿಹಾರ ಪಡೆಯಬಹುದು. ಅಲ್ಲದೆ, ಮನೆಯ ಆರ್ಥಿಕ ಸ್ಥಿತಿ ಸುಧಾರಿಸಬಹುದು ಮತ್ತು ಇದನ್ನು ಆರ್ಥಿಕ ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಸ್ಮಶಾನ ನೋಡೋದು

ಕನಸ್ಸಿನಲ್ಲಿ ಸ್ಮಶಾನ ನೋಡುವುದು ಭಯಾನಕ ಕನಸು ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಸ್ಮಶಾನವನ್ನು ನೋಡುವುದು ಶುಭ ಸಂಕೇತ ಎಂದು ನಂಬಲಾಗಿದೆ. ಇದರರ್ಥ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಅಲ್ಲದೆ, ಈ ಕನಸು ಗೌರವ ಮತ್ತು ಪ್ರತಿಷ್ಠೆಯ ಹೆಚ್ಚಳವನ್ನು ಸೂಚಿಸುತ್ತದೆ.

ಸತ್ತ ವ್ಯಕ್ತಿಯೊಂದಿಗೆ ಊಟ ಮಾಡೋದು

ಸತ್ತ ವ್ಯಕ್ತಿಯೊಂದಿಗೆ ಊಟ ಮಾಡುವ ಕನಸು ನಮಗೆ ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಕನಸಿನಲ್ಲಿ ಸತ್ತ ವ್ಯಕ್ತಿಯೊಂದಿಗೆ ಊಟ ಮಾಡುವುದನ್ನು ನೋಡುವುದು ತುಂಬಾ ಒಳ್ಳೆಯ ಸಂಕೇತ ಎಂದು ನಂಬಲಾಗಿದೆ. ಇದರರ್ಥ ನೀವು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈಗ ಅದನ್ನು ತೊಡೆದುಹಾಕಬಹುದು.

ನಿಮ್ಮ ಪ್ರಾಣ ಹೋಗುತ್ತಿರುವುದು

ನಿಜ ಜೀವನದಲ್ಲಿ, ನಿಮ್ಮ ಪ್ರಾಣವನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದನ್ನು ಬಹಳ ದೊಡ್ಡ ಅಪರಾಧವೆಂದು ಪರಿಗಣಿಸಲಾಗಿದೆ, ಇದನ್ನು ಯಾರೂ ಮಾಡಬಾರದು. ಆದರೆ ನೀವು ನಿದ್ದೆ ಮಾಡುವಾಗ ಅಂತಹ ಕನಸು ಬಿದ್ದರೆ, ಕನಸಿನ ವಿಜ್ಞಾನದ ಪ್ರಕಾರ ಅದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕನಸಿನಲ್ಲಿ ನೋಡುವುದು ಎಂದರೆ ನಿಮ್ಮ ವಯಸ್ಸು ಹೆಚ್ಚಾಗಲಿದೆ ಎಂದರ್ಥ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net