ಈ ರಾಶಿಯವರಿಗೆ ನವೆಂಬರ್ ಅಂತ್ಯದಿಂದ ಲಕ್​ ಚೇಂಜ್​ Astrology

Astrology
Published on

Astrology : ಜ್ಯೋತಿಷ್ಯದ ಪ್ರಕಾರ, ಶನಿಯನ್ನು ಶಿಕ್ಷಕ ಮತ್ತು ನ್ಯಾಯಯುತ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವರ ಕರ್ಮಗಳಿಗೆ ಫಲ ಕೊಡುತ್ತಾನೆ ಎಂದು ನಂಬಲಾಗುತ್ತದೆ. ಎಲ್ಲಾ ಗ್ರಹಗಳಲ್ಲಿಯೂ ಶನಿಯ ಸಂಚಾರ ಬಹಳ ಮಹತ್ವದಾಗಿದೆ. ಪ್ರಸ್ತುತ ದಿನಗಳಲ್ಲಿ ಪ್ರಸ್ತುತ, ಶನಿಯು ಮೀನ ರಾಶಿಯಲ್ಲಿ ಹಿಮ್ಮುಖವಾಗಿದ್ದಾನೆ ಎಂದು ತಿಳಿದುಬಂದಿದೆ. ಹಾಗಾದರೆ, ನವೆಂಬರ್‌ ತಿಂಗಳಿನಿಂದ ಶನಿಯ ನೇರ ಚಲನೆಯು ಯಾವ ರಾಶಿ ಚಕ್ರಗಳ ಮೇಲೆ ಪ್ರಯೋಜನ ನೀಡುತ್ತವೆ ಎಂಬುದನ್ನು ತಿಳಿಯಿರಿ..

1. ಮೇಷ ರಾಶಿ

ನವೆಂಬರ್​ ತಿಂಗಳಿನಿಂದ ಮೇಷ ರಾಶಿ ಚಕ್ರದ ಮೇಲೆ ಶನಿ ಸಂಚಾರ ಆಗುವುದರಿಂದ ಈ ರಾಶಿಯವರಿಗೆ ಈಗ ಫಲ ಸಿಗುವ ಸಮಯ ಎಂದು ತಿಳಿಯಬಹುದು. ಈ ಜನರು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಕ್ರಮೇಣವಾಗಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತವೆ. ಹಣಕಾಸಿನ ಸ್ಥಿರತೆ ಮತ್ತು ಹಳೆಹೂಡಿಕೆಯ ಲಾಭದಾಯಕವಾಗಿರುತ್ತದೆ. ಕುಟುಂಬದಲ್ಲಿ ಶಾಂತಿ, ಸಂತೋಷದಿಂದ ನೆಮ್ಮದಿಯ ಬದುಕು ಸಾಗಿಸಬಹುದು.

2. ಕುಂಭ ರಾಶಿ

ಈ ಸಮಯವು ಆರ್ಥಿಕ ಶಕ್ತಿ ಮತ್ತು ಸ್ಥಿರತೆಯನ್ನು ತರಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಳೆಯ ಹೂಡಿಕೆಗಳು ಮತ್ತು ಯೋಜನೆಗಳು ಲಾಭದಾಯಕವಾಗಿರುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮಗೆ ಲಾಭದಾಯಕ ಅವಕಾಶಗಳು ಸಿಗಲಾರಂಭಿಸುತ್ತವೆ. ಆರೋಗ್ಯವು ಸಾಮಾನ್ಯವಾಗಿದ್ದು, ಸಂಗಾತಿಯೊಂದಿಗೆ ಪ್ರೀತಿಯಿಂದ ಇರುತ್ತೀರಿ. ಈ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರಿಂದ ನಿಮಗೆ ಬೆಂಬಲ ಸಿಗಲಾರಂಭಿಸುತ್ತದೆ.

3. ಮೀನ

ಮೀನ ರಾಶಿ ಚಕ್ರದ ಜನರು ತಮ್ಮ ವೃತ್ತಿ ಮತ್ತು ಅಧ್ಯಯನಗಳಲ್ಲಿ ಪ್ರಗತಿಯನ್ನು ಕಾಣಲು ಸೂಕ್ತವಾದ ಸಮಯ ಎಂದು ತಿಳಿದುಬಂದಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಯೋಜನೆಗಳು ಯಶಸ್ವಿಯಾಗಿ ಮುಂದೂಡುತ್ತವೆ. ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗಿನ ಇರುವ ಭಿನ್ನಾಭಿಪ್ರಾಯಗಳು ದೂರಾಗುತ್ತವೆ. ಕುಟುಂಬದ ಬೆಂಬಲ ಮತ್ತು ಮನಸ್ಸಿನ ಶಾಂತಿಯೂ ಮೇಲುಗೈ ಸಾಧಿಸುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದರ ಜೊತೆಗೆ ಹಳೆಯ ಹೂಡಿಕೆಗಳು ಲಾಭನೀಡುತ್ತವೆ. (ಏಜೆನ್ಸೀಸ್​)

ಇದನ್ನೂ ಓದಿ: 9 ದಿನಗಳಲ್ಲಿ 36,000 ರೂ. ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ? | Gold Ratesವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net