

Chapati solution: ಪ್ರತಿಯೊಬ್ಬರ ಜೀವನದಲ್ಲಿಯೂ ಸಮಸ್ಯೆಗಳು ಬಂದೇ ಬರುತ್ತವೆ. ಅಂತಹ ಸಮಸ್ಯೆಗಳನ್ನು ದಾಟಿ ಮುಂದೆ ಹೋಗಲು ಪ್ರಯತ್ನ ಮಾಡಬೇಕು. ಅಂದಹಾಗೆ ಶಾಸ್ತ್ರದ ಪ್ರಕಾರ ಸಮಸ್ಯೆಗಳನ್ನು ನಾವು ಕರ್ಮವೆಂದು ಕರೆಯುತ್ತೇವೆ. ಹಾಗಾಗಿ ಜ್ಯೋತಿಷ್ಯವು ನಮಗೆ ಹಲವಾರು ದಾರಿಗಳನ್ನು ಮಾಡಿಕೊಡುತ್ತದೆ. ಆದಾಗ್ಯೂ, ನಿಮ್ಮ ಮನೆಯಲ್ಲಿ ಮಾಡಿದ ಚಪಾತಿಯಿಂದಲೇ ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಸಮಸ್ಯೆಯಿಂದ ಬಳಲುತ್ತಿರುವವರು ಚಪಾತಿ ಪರಿಹಾರಗಳನ್ನು ಮಾಡುವುದರಿಂದ ಪಾಪಗಳನ್ನು ತೊಡೆದು ಹಾಕಿ ಅದೃಷ್ಟವನ್ನು ಪಡೆಯಬಹುದು. ಹಾಗಾಗಿ ಈ ರೀತಿಯ ಪರಿಹಾರಗಳನ್ನು ಮಾಡಿ...
1. ನಿಮ್ಮ ಮನೆಯಲ್ಲಿ ಚಪಾತಿ ಮಾಡಿದಾಗ ಮೊದಲಿನ ಚಪಾತಿಯನ್ನು ತೆಗೆದಿಟ್ಟುಕೊಂಡಿರಿ. ಇದನ್ನು ನಾಯಿಗೆ ತಿನ್ನಿಸಿ. ಚಪಾತಿಯನ್ನು ಪುಡಿಮಡಿ ಹಾಲು ಸೇರಿಸಿ ನಾಯಿಗೆ ನೀಡುವುದರಿಂದ ಗುರುವಿನ ಅನುಗ್ರಹ ನಿಮ್ಮ ಮೇಲೆ ಇದ್ದು, ಸಮಸ್ಯೆಗಳನ್ನು ದೂರ ಮಾಡಿ, ಯಶಸ್ಸಿನ ಹಾದಿ ಹಿಡಿಯಲು ಸಹಾಯ ಮಾಡುತ್ತದೆ.
2. ಹಿಂದೂ ಧರ್ಮದ ಪ್ರಕಾರ ಅನ್ನದಾನ ಶ್ರೇಷ್ಠ ದಾನ ಎಂದು ಕರೆಯಲಾಗುತ್ತದೆ. ಆದರಿಂದ ನೀವು ನಿರ್ಗತಿಕರಿಗೆ, ಬಡವರು ಅಥವಾ ಭಿಕ್ಷುಕರಿಗೆ ಚಪಾತಿಯನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
3. ನಿಮ್ಮ ಮನೆಯಲ್ಲಿ ಮಾಡಿದ ಚಪಾತಿ ಉಳಿದಿದ್ದರೆ, ಅದನ್ನು ಮರುದಿನ ಕಾಗೆ ಅಥವಾ ಇನ್ನಿತರ ಪಕ್ಷಿಗಳಿಗೆ ನೀಡಿ. ಇದು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹಳಸಿದ ಚಪಾತಿಯನ್ನು ಕಾಗೆಗೆ ನೀಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಹಾಗಾಗಿ ಯಾರಾದರು ಈ ದೋಷದಿಂದ ಬಳಲುತ್ತಿದ್ದರೆ ಈ ಪರಿಹಾರವನ್ನು ಮಾಡಿ.
4. ಶನಿವಾರ, ಚಪಾತಿಗೆ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಿ ಕಪ್ಪು ನಾಯಿಗೆ ತಿನ್ನಿಸಿ. ಇದು ನಿಮ್ಮ ಮೇಲೆ ಇರುವ ರಾಹುವಿನ ಕೆಟ್ಟ ದೃಷ್ಟಿಯನ್ನು ತೆಗೆದುಹಾಕುತ್ತದೆ. ಹಾಗೆಯೇ ಶನಿ ದೇವರ ಕೃಪೆಯನ್ನು ಪಡೆಯುವುದರಿಂದ, ಶನಿ ದೋಷವೂ ನಿವಾರಣೆಯಾಗುತ್ತದೆ.
5. ಚಪಾತಿಗೆ ಸ್ವಲ್ಪ ಉಪ್ಪು ಸೇರಿಸಿ ಇದನ್ನು ಹಸುವಿಗೆ ತಿನ್ನಿಸಿ. ಈ ರೀತಿ ಮಾಡುವುದರಿಂದ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗಲು ಪ್ರಾರಂಭಿಸುತ್ತವೆ. ನಕರಾತ್ಮಕ ಪ್ರಭಾವ ಜೀವನದಿಂದ ದೂರವಾಗಿ ಯಶಸ್ಸಿನ ಹಾದಿ ತಲುಪಲು ಸಹಾಯವಾಗುತ್ತದೆ.
6. ನೀವು ಮಾಡಿದ ಚಪಾತಿಗೆ ತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ ಮಗುವಿಗೆ ತಿನ್ನಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹೀಗೆ ಮಾಡಿದ್ದಲ್ಲಿ ಅನ್ನಪೂರ್ಣೇಶ್ವರಿ ಸಂತೋಷವಾಗಿರುತ್ತಾಳೆ. ಮನೆಯಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.