Numerology : ಸಂಖ್ಯಾಶಾಸ್ತ್ರ(Numerology)ವು ಮಾನವನ ಜೀವನದ ಪ್ರತಿಯೊಂದು ಆಗು ಹೋಗುಗಳ ಮೇಲೆ ತನ್ನದೇ ಆದ ಒಂದು ಪ್ರಭಾವ ಮತ್ತು ಲೆಕ್ಕಾಚಾರವನ್ನು ಒಳಗೊಂಡಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಜೀವನವು 1 ರಿಂದ 9 ರ ವರೆಗಿನ ಅಂಕೆಗಳ ಆಧಾರದ ಮೇಲೆ ನಿರ್ಧರಿತವಾಗಿದೆ.
ಆದ್ದರಿಂದ ಸಂಖ್ಯಾಶಾಸ್ತ್ರ ಅಥವಾ ಅಂಕಶಾಸ್ತ್ರವನ್ನು ಪಾಲಿಸಿ ಅದರದೆ ಆದ ಲಾಭ ಪಡೆದ ಹಲವರಿದ್ದಾರೆ. ನಮ್ಮ ಜೀವನದಲ್ಲಿ ಮಿತ್ರರ ಬಗ್ಗೆ ತಿಳಿಯದೇ ಇದ್ದರೂ ಶತ್ರುಗಳ ಬಗ್ಗೆ ತಿಳಿದಿರಬೇಕೆಂಬ ಮಾತಿದೆ. ಅದರಂತೆ ಇಂದು ನಾವು ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನಾಂಕಗಳಲ್ಲಿ ಜನಿಸಿದ ಜನರನ್ನು ಎದುರುಹಾಕಿ ಕೊಳ್ಳುವುದು ಒಳ್ಳೆಯದಲ್ಲ ಎಂಬುದರ ಕುರಿತು ತಿಳಿದುಕೊಳ್ಳೋಣ.
1. ಸಂಖ್ಯೆ 5 (5, 14, 23 ರಂದು ಜನಿಸಿದರು)
ಸಂಖ್ಯೆ 5 ರಲ್ಲಿ ಜನಿಸಿದ ಜನರು ಮಾತಿನ ಮಲ್ಲರಾಗಿದ್ದು ತಮ್ಮ ಮಾತಿನ ಮೂಲಕವೇ ಲೋಕವನ್ನು ಗೆಲ್ಲುವ ಶಕ್ತಿ ಇವರಿಗೆ ಇರುತ್ತದೆ. ಅದೇ ರೀತಿ ಇವರು ತಮ್ಮ ವಾಕ್ಚಾತುಯ್ರ್ಯದ ಮುಖಾಂತರ ಎಂತವರನ್ನೂ ಸಹ ಹಾಳು ಬಾವಿಗೆ ಹಾಕುವವರಾಗಿರುತ್ತಾರೆ. ಆದ್ದರಿಂದ ಇವರ ಹೇಳುವ ಮಾತುಗಳನ್ನು ಕಣ್ಣುಮುಚ್ಚಿಕೊಂಡು ನಂಬುವ ತಪ್ಪನ್ನು ನೀವು ಮಾಡಬೇಡಿ.
2. ಸಂಖ್ಯೆ 7 (7, 16, 25 ರಂದು ಜನಿಸಿದವರು)
ಸಂಖ್ಯೆ 7 ರಲ್ಲಿ ಜನಿಸಿದವರು ಇವರು ಕುಟಿಲ ನೀತಿಯ ಪರಿಣಿತರಾಗಿರುತ್ತಾರೆ. ಯಾರನ್ನು? ಯಾವ ರೀತಿ ? ಎಲ್ಲಿ ? ಕೇಡು ಬಗೆಯಲು ಸಾಧ್ಯವಿದೆ ಎನ್ನುವುದನ್ನೇ ಇವರು ಹುಡುಕುತ್ತಿರುತ್ತಾರೆ. ಇವರು ತಮ್ಮ ಬೆಳೆಯನ್ನು ಬೇಯೀಸಿಕೊಳ್ಳಲು ಸ್ವಂತದವರ ಬಲಿಕೊಡಲು ಹೇಯಿಸುವವರಲ್ಲ. ಆದ್ದರಿಂದ ಈ ಸಂಖ್ಯೆಯವರ ಜತೆ ಇವರುವಾಗ ಎಚ್ಚರಿಕೆ ಇರಲಿ.
ಸಂಖ್ಯೆ 8 ರಲ್ಲಿ ಹುಟ್ಟಿದವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಯಾಗಿರುತ್ತಾರೆ. ಇವರಿಗೆ ತಮಗಾಗದವರ ಏಳಿಗೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದರೆ ಇವರಿಗೆ ಧೈರ್ಯ ಕಡಿಮೆ ಇರುವ ಕಾರಣ ನೇರವಾಗಿ ಎದುರಿಸಲಾಗದೆ ಕೂಟ ನೀತಿಯಿಂದ ತಮ್ಮ ಕೆಲಸವನ್ನು ಮಾಡುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದರು ತಾವು ಸುಖವಾಗಿ ಇರುವುದಿಲ್ಲ ಬೇರೆಯವರು ಸುಖವಾಗಿ ಇರುವುದನ್ನು ನೋಡಲು ಆಗದ ಮನಸ್ಥಿತಿಯವರಾಗಿರುತ್ತಾರೆ.
4. ಸಂಖ್ಯೆ 9 (9, 18,27 ರಂದು ಜನಿಸಿದವರು)
ಸಂಖ್ಯೆ 9 ರಲ್ಲಿ ಜನಿಸಿದವರು ದೊಡ್ಡ ಜಗಳ ಕೋರರಾಗಿರುತ್ತಾರೆ. ಇವರಿಗೆ ಸದಾ ಜಗಳವಾಡುವುದರಲ್ಲಿಯೇ ಸಂತೋಷ ದೊರೆಯುವ ಕಾರಣ ಜಗಳವಿಲ್ಲದೆ ಇವರಿಗೆ ಸುಮ್ಮನೆ ಇರಲು ಸಾಧ್ಯವಿಲ್ಲ. ಇವರು ತಾವಷ್ಟೇ ಜಗಳವಾಡದೇ ಇತರರ ನಡುವೆ ಸಹ ಜಗಳತಂದಾಕುವ ಗುಣವನ್ನು ಇವರು ಹೊಂದಿರುತ್ತಾರೆ. ಆದ್ದರಿಂದ ಈ ಸಂಖ್ಯೆಯವರೊಮದಿಗಿನ ಜಗಳ ನಿಮಗೆ ಹಾನಿಕರ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.