ಫ್ರಿಜ್ಡ್​ ಮೇಲೆ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇದು ನಿಮ್ಮ ನೆಮ್ಮದಿಗೆ ಭಂಗ ತರುತ್ತದೆ| Vastu

untitled-design-2025-09-16t122443283-68c909c5cec48
Published on

Vastu: ಪ್ರತಿಯೊಬ್ಬ ಮನುಷ್ಯನೂ ಕೂಡಾ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಂಪತ್ತನ್ನು ಕಾಪಾಡಿಕೊಳ್ಳಲು ಆದಷ್ಟು ಕಷ್ಟ ಪಡುತ್ತಿರುತ್ತಾನೆ. ಕೆಲವೊಮ್ಮೆ ತಾವು ಎಷ್ಟೇ ಪ್ರಯತ್ನ ಪಟ್ಟರೂ ಸುಖದಿಂದ ಇರಲು ಸಾಧ್ಯವಾಗುದಿಲ್ಲ. ನಮ್ಮ ಮನೆಯಲ್ಲಿರುವ ವಸ್ತುಗಳು ಶಕ್ತಿಯನ್ನು ರವಾನಿಸುತ್ತದೆ. ಇದು ಸಕರಾತ್ಮಕವಾಗಿದ್ದರೆ, ಸಂತೋಷ, ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಇಲ್ಲವೇ ನಕರಾತ್ಮಕವಾಗಿದ್ದರೆ, ತೊಂದರೆಗಳನ್ನು ಅನುಭವಿಸುತ್ತಾರೆ. ಆದರಿಂದ ನಮ್ಮ ಮನೆಯ ವಸ್ತುಗಳನ್ನು ಸರಿಯಾದ ಮಾರ್ಗದಲ್ಲಿ ಇರಿಸಬೇಕು. ಇದು ನಿಮ್ಮ ವೃತ್ತಿ, ಸಂಬಂಧ, ಪ್ರಗತಿ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಮುಖ್ಯವಾಗಿರುತ್ತದೆ.

ಅನೇಕರು ತಮ್ಮ ಮನೆಗಳಲ್ಲಿ ಪ್ರಿಡ್ಜ್​ ಮೇಲೆ ಖಾಲಿ ಜಾಗ ನೋಡಿದ ಕೂಡಲೇ ಅಲ್ಲಿ ಏನನ್ನಾದರೂ ವಸ್ತುಗಳನ್ನು ಇಡುತ್ತಾರೆ. ಈ ಅಭ್ಯಾಸ ವಾಸ್ತು ಪ್ರಕಾರ ತಪ್ಪಾಗಿದೆ. ಇದರಿಂದ ನಿಮ್ಮ ಮನೆಯು ಶಾಂತಿ ಕಳೆದುಕೊಳ್ಳಬಹುದು. ಹಾಗಾಗಿ ಪ್ರಿಜ್ಡ್​ ಮೇಲೆ ಯಾವ ವಸ್ತು ಇಡಬೇಕು, ಇಡಬಾರದು ಎಂದು ಇಲ್ಲಿ ನೋಡಿ...

* ಬಂಗಾರ, ಬೆಳ್ಳಿ ಮತ್ತು ಹಣ ಇಡುವುದು

ಅನೇಕ ಜನರು ಹೊರಗಿನಿಂದ ಮನೆಗೆ ಬಂದ ನಂತರ ಫ್ರಿಜ್ಡ್​ ಮೇಲೆ, ಹಣ, ಬಂಗಾರ, ಬೆಳ್ಳಿಯ ವಸ್ತುಗಳನ್ನು ಇಡುತ್ತಾರೆ. ಇದು ವಾಸ್ತು ಶಾಸ್ತ್ರದಲ್ಲಿ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ, ಫ್ರಿಜ್ಡ್​ ಅನ್ನು ಅಗ್ನಿ ಅಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಸ್ಥಳದಲ್ಲಿ ನಾಣ್ಯಗಳು, ನಗದು, ಚಿನ್ನ-ಬೆಳ್ಳಿ ಇತ್ಯಾದಿಗಳನ್ನು ಇಡುವುದರಿಂದ ಆರ್ಥಿಕ ಸ್ಥಿರತೆಗೆ ತೊಂದರೆಯಾಗಬಹುದು. ಇದರೊಂದಿಗೆ, ಕುಟುಂಬ ಸದಸ್ಯರ ಆದಾಯ ಕಡಿಮೆಯಾಗಲು ಪ್ರಾರಂಭಿಸುತ್ತದೆ.

* ಔಷಧಿಗಳನ್ನು ಇಡುವುದು

ಅನಾರೋಗ್ಯ ಮತ್ತು ಸಮಸ್ಯೆಗಳ ಸಂಕೇತವಾಗಿ ಬಳಸುವ ಔಷಧಿಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಲ್ಲದೆ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ, ಔಷಧಿಗಳನ್ನು ಎಂದಿಗೂ ಫ್ರಿಡ್ಜ್ ಮೇಲೆ ಅಥವಾ ಫ್ರಿಡ್ಜ್ ಒಳಗೆ ಇಡಬಾರದು. ಇನ್ನು ಔಷಧಿಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಔಷಧಿಗಳನ್ನು ಇಡುವುದರಿಂದ ಈ ಸಮಸ್ಯೆಗಳಿಂದ ಬೇಗನೆ ಪರಿಹಾರ ಸಿಗುತ್ತದೆ.

* ಹಾನಿಗೊಳಗಾದ ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ, ಹಾನಿಗೊಳಗಾದ ಎಲೆಕ್ಟ್ರಾನಿಕ್ ವಸ್ತುಗಳು, ಮುರಿದ ಪಾತ್ರೆಗಳು ಅಥವಾ ನಿಷ್ಪ್ರಯೋಜಕ ವಸ್ತುಗಳನ್ನು ಫ್ರಿಜ್ಡ್​ ಮೇಲೆ ಇಡುವುದರಿಂದ ಮನೆಯಲ್ಲಿ ನಕರಾತ್ಮಕ ಪರಿಣಾಮಗಳು ಬೀಳಲು ಪ್ರಾರಂಭಿಸುತ್ತವೆ. ಹಾಗೆಯೇ, ಈ ಪರಿಣಾಮವಾಗಿ ಕುಟುಂಬ ಸದಸ್ಯರ ಅಭಿವೃದ್ಧಿಯನ್ನು ಕುಂಠಿತಗೊಳಿಸಬಹುದು. ಆದರಿಂದ ನಿಮ್ಮ ವಸ್ತುಗಳನ್ನು ಇದರ ಮೇಲೆ ಇರಿಸಬೇಡಿ.

* ಪೂಜಾ ವಸ್ತುಗಳು

ದೇವರ ಚಿತ್ರಗಳು, ಪೂಜಾ ಸಾಮಗ್ರಿಗಳು ಅಥವಾ ಧಾರ್ಮಿಕ ವಸ್ತುಗಳನ್ನು ಫ್ರಿಜ್ ಮೇಲೆ ಇರಿಸುವುದು ಶಾಂತಿ ಮತ್ತು ಧನ ಸಂಪಾದನೆಗೆ ಧಕ್ಕೆ ಉಂಟಅಗುತ್ತದೆ. ಆದರಿಂದ ಇವುಗಳನ್ನು ಪೂಜಾ ಕೋಣೆಯಲ್ಲಿ ಅಥವಾ ಉತ್ತರ-ಪೂರ್ವದಲ್ಲಿ ಇರಿಸಿ ಇದರಿಂದ ನೀವು ಸಂತೋಷವನ್ನು ಅನುಭವಿಸುತ್ತೀರಿ.

* ಕೊಳಕು ಬಟ್ಟೆಗಳು ಅಥವಾ ಶೂಗಳು

ಕೊಳಕು ಬಟ್ಟೆಗಳು ಅಥವಾ ಶೂಗಳನ್ನು ಫ್ರಿಜ್ ಮೇಲೆ ಇಡುವುದರಿಮದ ಇವು ನಿಮ್ಮ ಮನೆಯ ಮೇಲೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದು ಆರೋಗ್ಯ ಸಮಸ್ಯೆಗಳು ಮತ್ತು ಕುಟುಂಬದಲ್ಲಿ ಒಡಕುಗಳಿಗೆ ಕಾರಣವಾಗಬಹುದು.

* ಓವನ್ ಅಥವಾ ಮೈಕ್ರೋವೇವ್ ಇಡುವುದು

ಅನೇಕ ಜನರು ಜಾಗವನ್ನು ಉಳಿಸುವ ಸಲುವಾಗಿ ಫ್ರಿಡ್ಜ್ ಮೇಲೆ ಮೈಕ್ರೋವೇವ್ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ತಪ್ಪು ಅಭ್ಯಾಸವಾಗಿದೆ. ಇದರಲ್ಲಿರುವ ಬೆಂಕಿಯ ಅಂಶ ಹೆಚ್ಚಾಗಿ ಮನೆಯಲ್ಲಿ ಕೋಪ, ಜಗಳ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತದೆ. ಮನೆಯಲ್ಲಿ ನಕರಾತ್ಮಕ ಭಾವನೆಗಳು ಉಂಟಾಗುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮನೆಯಲ್ಲಿ ಫ್ರಿಜ್ಡ್​ ಮೇಲೆ ವಸ್ತುಗಳನ್ನು ಇಡುವಾಗ ಪ್ರತಿಯೊಬ್ಬರೂ ಸಹ ಜಾಗೂರಾಕತರಾಗಿರಿ. ಸರಿಯಾದ ವಾಸ್ತು ನಿಯಮಗಳನ್ನು ಅನುಸರಿಸಿ ಇಡುವುದರಿಂದ ನಿಮ್ಮ ಮನೆಯಲ್ಲಿ, ಶಾಂತಿ, ಸಂತೋಷ, ನೆಮ್ಮದಿಯನ್ನು ಪಡೆಯಲು ಸಹಾಯವಾಗುತ್ತದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net