1.65 ಕೋಟಿ ರೂ. Bigg Boss ಆಫರ್ ರಿಜೆಕ್ಟ್! ಇದಕ್ಕಾಗಿ ಪುರುಷನೊಂದಿಗೆ ಹಾಸಿಗೆ ಮೇಲೆ ಮಲಗಲೇ ಎಂದ ನಟಿ ತನುಶ್ರೀ

Untitled design - 2025-09-16T121332.958
Published on

Bigg Boss: ಕಳೆದ ಎರಡು ತಿಂಗಳ ಹಿಂದೆ ಅಳುವ ವಿಡಿಯೋ ಮೂಲಕ ಸುದ್ದಿಯಾಗಿದ್ದ ಬಾಲಿವುಡ್​ ನಟಿ ತನುಶ್ರೀ ದತ್ತಾ ರಿಯಾಲಿಟಿ ಶೋ ಬಿಗ್​ಬಾಸ್​ ಹಿನ್ನೆಲೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು, ಕಳೆದ 11 ವರ್ಷಗಳಿಂದ ನನಗೆ ಹಿಂದಿಯ ಬಿಗ್​ಬಾಸ್​ ಆಫರ್​ ಬರುತ್ತಿದೆ. ಈ ಬಾರಿ ಬಿಗ್​ಬಾಸ್​ಗಾಗಿ 1.65 ಕೋಟಿ ರೂ. ಆಫರ್​​ ಬಂದಿದೆ. ಅದನ್ನು ತಿರಸ್ಕಾರ ಮಾಡಿದ್ದೇನೆ ಎಂದು ಚಾಕೋಲೇಟ್​ ನಟಿ ತನುಶ್ರೀ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಟಿ ತನುಶ್ರೀ ಹೇಳಿದ್ದೇನು?

ಬಾಲಿವುಡ್ ಥಿಕಾನಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತನುಶ್ರೀ ದತ್ತಾ, "ನಾನು ಅಂತಹ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ನೀವು ನಿಜವಾಗಿಯೂ ಭಾವಿಸುತ್ತೀರಾ? ನಾನು ನನ್ನ ಸ್ವಂತ ಕುಟುಂಬದೊಂದಿಗೆ ಸಹ ಇರುವುದಿಲ್ಲ. ಹೀಗಾಗಿ, ನಾನು ಅಂತಹ ಸ್ಥಳದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ನನಗೆ ಬಿಗ್ ಬಾಸ್‌ನಲ್ಲಿ ಎಂದಿಗೂ ಆಸಕ್ತಿ ಇಲ್ಲ. ಮುಂದೆ ಕೂಡ ಆಸಕ್ತಿ ಇರುವುದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾಗವಾಗಲು ಅವರು ನನಗೆ 1.65 ಕೋಟಿ ಆಫರ್ ನೀಡಿದ್ದಾರೆ. ನನ್ನಂತೆಯೇ ಇರುವ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಗೂ ಅದೇ ಮೊತ್ತದ ಸಂಭಾವನೆ ನೀಡಲಾಗಿದೆ. ಅವರು ನನಗೆ ಚಂದ್ರನ ಒಂದು ತುಂಡನ್ನು ಕೊಟ್ಟರೂ ನಾನು ಹೋಗುವುದಿಲ್ಲ ಎಂದು ನಾನು ಹೇಳಿದೆ'' ಎಂದು ಹೇಳಿಕೊಡಿದ್ದಾರೆ.

ಪುರುಷನೊಂದಿಗೆ ಹಾಸಿಗೆ ಮೇಲೆ ಮಲಗಲ್ಲ!

ಕಾರ್ಯಕ್ರಮದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಹಾಲ್‌ನಲ್ಲಿ ಮಲಗುತ್ತಾರೆ, ಅವರು ಅಲ್ಲಿ ಮಲಗುತ್ತಾರೆ. ಅಲ್ಲಿ ಜಗಳವಾಡುತ್ತಾರೆ... ನಾನು ಹಾಗೆ ಮಾಡಲು ಸಾಧ್ಯವಿಲ್ಲ. ನನ್ನ ಶಕ್ತಿಯನ್ನು ಅವಲಂಬಿಸಿ ನನ್ನ ಆಹಾರದ ಬಗ್ಗೆ ನಾನು ತುಂಬಾ ನಿರ್ದಿಷ್ಟವಾಗಿ ಹೇಳುತ್ತೇನೆ. ರಿಯಾಲಿಟಿ ಶೋಗಾಗಿ ಪುರುಷನೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುವ ರೀತಿಯ ಮಹಿಳೆಯಂತೆ ನಾನು ಕಾಣುತ್ತೇನೆಯೇ? ನಾನು ಅಷ್ಟು ಅಗ್ಗದವಳಲ್ಲ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net